ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎಂಸಿ ಪಕ್ಷದಿಂದ ಪಾರ್ಥ ಚಟರ್ಜಿ ವಜಾಗೊಳಿಸುವಂತೆ ಕುನಾಲ್ ಘೋಷ್ ಒತ್ತಾಯ

|
Google Oneindia Kannada News

ಕೋಲ್ಕತ್ತಾ, ಜುಲೈ 28: ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಒತ್ತಾಯಿಸಿದ್ದಾರೆ.

ಬಂಧಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತ ಮುಖರ್ಜಿ ಮನೆಯಿಂದ ನಗದು ವಶಪಡಿಸಿಕೊಂಡಿರುವುದು ಪಕ್ಷಕ್ಕೆ "ಅಪಮಾನ" ಮತ್ತು "ನಮ್ಮೆಲ್ಲರಿಗೂ ಅವಮಾನ" ತಂದಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Breaking: ಅರ್ಪಿತಾ ಮುಖರ್ಜಿ ಮನೆಯಿಂದ ಒಟ್ಟು 50 ಕೋಟಿ ರೂ.ವಶಕ್ಕೆBreaking: ಅರ್ಪಿತಾ ಮುಖರ್ಜಿ ಮನೆಯಿಂದ ಒಟ್ಟು 50 ಕೋಟಿ ರೂ.ವಶಕ್ಕೆ

ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಆಪ್ತ ಸಹವರ್ತಿ ಅರ್ಪಿತಾ ಮುಖರ್ಜಿ ಅವರಿಗೆ ಸಂಬಂಧಿಸಿದ ಫ್ಲ್ಯಾಟ್ ಒಂದರಿಂದ ಇಡಿ ಕೋಟ್ಯಂತರ ಹಣವನ್ನು ವಶಪಡಿಸಿಕೊಂಡ ನಂತರ ಘೋಷ್ ಹೇಳಿಕೆ ನೀಡಿದ್ದಾರೆ. ಚಟರ್ಜಿ ಆಪ್ತ ಸಹಾಯಕಿ ಮನೆಯಲ್ಲಿ ಹಣ ಪತ್ತೆಯಾದ ನಂತರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಚಿವ ಪಾರ್ಥ ಚಟರ್ಜಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನೂ ಬಂಧಿಸಲಾಗಿದೆ. ಹಗರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವು ಕಡೆ ದಾಳಿ ನಡೆಯುತ್ತಲೇ ಇದೆ.

 ಪಾರ್ಥ ಚಟರ್ಜಿ ವಜಾಗೊಳಿಸಲು ಒತ್ತಡ

ಪಾರ್ಥ ಚಟರ್ಜಿ ವಜಾಗೊಳಿಸಲು ಒತ್ತಡ

ರಾಜ್ಯ ಕ್ಯಾಬಿನೆಟ್‌ನಿಂದ ಚಟರ್ಜಿ ಅವರನ್ನು ವಜಾಗೊಳಿಸುವಂತೆ ಪ್ರತಿಪಕ್ಷಗಳ ಹೆಚ್ಚುತ್ತಿರುವ ಬೇಡಿಕೆಗಳ ನಡುವೆ, ಟಿಎಂಸಿ ಸಾರ್ವಜನಿಕ ಗ್ರಹಿಕೆಯನ್ನು ಗಮನಿಸಬೇಕು ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕುನಾಲ್ ಘೋಷ್ ಹೇಳಿದರು.

"ಈ ಬೆಳವಣಿಗೆಯು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ, ಇಂತಹ ಘಟನೆಗಳು ಪಕ್ಷಕ್ಕೆ ಕಳಂಕ ತಂದಿದೆ ಮತ್ತು ನಮಗೆಲ್ಲ ಅವಮಾನವಾಗಿದೆ, ಪಕ್ಷದ ವಕ್ತಾರರು ಪಾರ್ಥ ಚಟರ್ಜಿ ಸಚಿವ ಸ್ಥಾನವನ್ನು ಏಕೆ ತ್ಯಜಿಸುತ್ತಾರೆ ಎಂದು ಹೇಳುತ್ತಿದ್ದಾರೆ, ಅವರನ್ನು ನಿರಪರಾಧಿ ಎಂದು ಪಕ್ಷದ ವಕ್ತಾರರು ಸಮರ್ಥಿಸಿಕೊಳ್ಳುತ್ತಿದ್ದಾರೆ" ಎಂದು ಪಕ್ಷದ ಮುಖಂಡರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ಮೊದಲೇ ಎಲ್ಲರಿಗೂ ಗೊತ್ತಿತ್ತು: ಅಧೀರ್ ರಂಜನ್ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ಮೊದಲೇ ಎಲ್ಲರಿಗೂ ಗೊತ್ತಿತ್ತು: ಅಧೀರ್ ರಂಜನ್

 ಚಟರ್ಜಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು

ಚಟರ್ಜಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು

"ಪಕ್ಷವು ಸಾರ್ವಜನಿಕರ ಅಭಿಪ್ರಾಯಗಳನ್ನು ಗಮನಿಸುತ್ತಿದೆ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾವಿಸಿದ್ದೇನೆ" ಎಂದು ಟಿಎಂಸಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕುನಾಲ್ ಘೋಷ್ ತಿಳಿಸಿದ್ದಾರೆ.

ಕ್ಯಾಬಿನೆಟ್ ಸಚಿವರಾಗಿ ಪಾರ್ಥ ಚಟರ್ಜಿಯವರ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಕುನಾಲ್ ಘೋಷ್, ಬಂಧಿತ ನಾಯಕ ಹಲವು ಇಲಾಖೆಗಳ ಸಚಿವ ಸ್ಥಾನವನ್ನು ಬಿಟ್ಟುಕೊಡದೆ ಪ್ರಭಾವಿ ಎಂಬ ಹಣೆಪಟ್ಟಿಯನ್ನು ಹೇಗೆ ಹೊರಹಾಕುತ್ತಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

ಆದರೆ ಇದಕ್ಕೂ ಮೊದಲು ಕುನಾಲ್ ಘೋಷ್ ಪಾರ್ಥ ಚಟರ್ಜಿ ಪರವಾಗಿ ಹೇಳಿಕೆ ನೀಡಿದ್ದರು. ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಪಕ್ಷವು ಅವರನ್ನು ಕ್ಯಾಬಿನೆಟ್ ಸಚಿವ ಅಥವಾ ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದರು.

 ಅರ್ಪಿತಾ ಮನೆಯಲ್ಲಿ ಮತ್ತೆ ಹಣ ಪತ್ತೆ

ಅರ್ಪಿತಾ ಮನೆಯಲ್ಲಿ ಮತ್ತೆ ಹಣ ಪತ್ತೆ

ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇದುವರೆಗೆ 50 ಕೋಟಿ ರೂಪಾಯಿ ಮತ್ತು 2.76 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ.

ರಾಜ್‌ದಂಗಾ, ಬೆಲ್‌ಘಾರಿಯಾ ಪ್ರದೇಶದ ಎರಡು ವಸತಿ ಫ್ಲಾಟ್‌ಗಳು ಮತ್ತು ದಕ್ಷಿಣ ಕೋಲ್ಕತ್ತಾದ ಟಾಲಿಗಂಜ್‌ನಲ್ಲಿರುವ ಡೈಮಂಡ್ ಪಾರ್ಕ್ ವಸತಿ ಸಂಕೀರ್ಣದಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಶೋಧ ನಡೆಸುತ್ತಿದ್ದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಈ ಮೊದಲು 21 ಕೋಟಿ ರುಪಾಯಿ ನಗದು ಪತ್ತೆಯಾಗಿತ್ತು, ನಂತರ ಜುಲೈ 27ರಂದು ಮತ್ತೊಂದು ಫ್ಲಾಟ್‌ನಲ್ಲಿ 29 ಕೋಟಿ ರುಪಾಯಿ ಪತ್ತೆಯಾಗಿದೆ.

 ಏನಿದು ಪಶ್ಚಿಮ ಬಂಗಾಳ ನೇಮಕಾತಿ ಹಗರಣ?

ಏನಿದು ಪಶ್ಚಿಮ ಬಂಗಾಳ ನೇಮಕಾತಿ ಹಗರಣ?

ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ಮೂಲಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದಿತ್ತು. ಸರ್ಕಾರಿ ಕೆಲಸ ನೀಡಲು ಹಣ ಪಡೆಯಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಕ್ರಮ ನೇಮಕಾತಿ ನಡೆದಾಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಿಕ್ಷಣ ಸಚಿವರಾಗಿದ್ದರು.

ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಕ್ರಮಗಳ ತನಿಖೆಯ ಭಾಗವಾಗಿ ಸಚಿವ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಮತ್ತು ಇತರ ಹಲವರ ನಿವಾಸಗಳ ಮೇಲೆ ಭಾರಿ ದಾಳಿ ನಡೆಸಿತ್ತು.

Recommended Video

ಎಷ್ಟೇ ಚೆನ್ನಾಗಿ ಆಡಿದ್ರು , ಈತನಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಯಾಕೆ? | OneIndia Kannada

English summary
Trinamool Congress (TMC) general secretary Kunal Ghosh said Partha Chatterjee should be removed from all party posts. disgrace to party and shame to all of us he added later. Kunal Made statement after ED recovered unaccounted money from one of the flats linked to Arpita Mukherjee, a close associate of the West Bengal Industry Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X