ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತದ ನಡುವೆ ಪ್ರಾಣವಾಯು ಒದಗಿಸಿದ ರೈಲ್ವೆ ಎಕ್ಸ್ ಪ್ರೆಸ್

|
Google Oneindia Kannada News

ಕೋಲ್ಕತಾ, ಮೇ 26: ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ತಲುಪಿಸುವ ಮೂಲಕ ತನ್ನ ನೆರವಿನ ಪ್ರಯಾಣವನ್ನು ಭಾರತೀಯ ರೈಲ್ವೆ ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು 1042 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ 17239 ಮೆಟ್ರಿಕ್ ಟನ್ಗೂ ಹೆಚ್ಚಿನ ಎಲ್ಎಂಒವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ.

263 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ನೆರವಿನ ಪರಿಹಾರವನ್ನು ಒದಗಿಸಿವೆ. ಈ ಪತ್ರಿಕಾ ಹೇಳೀಕೆ ಬಿಡುಗಡೆಯ ಸಮಯದವರೆಗೆ, 2 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 8 ಟ್ಯಾಂಕರ್ಗಳಲ್ಲಿ 134 ಮೆ.ಟನ್ ಗಿಂತ ಹೆಚ್ಚಿನ ಎಲ್ಎಂಒನೊಂದಿಗೆ ಸಾಗಣೆಯ ಹಾದಿಯಲ್ಲಿವೆ.

ಚಂಡಮಾರುತ ಬಲಗೊಳ್ಳುವ ಮೊದಲು ಕಳೆದ 12 ಗಂಟೆಗಳಲ್ಲಿ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಿಂದ 680 ಮೆ.ಟನ್ ಆಮ್ಲಜನಕವನ್ನು ಸಾಗಿಸಿವೆ. 8 ಆಕ್ಸಿಜನ್ ಎಕ್ಸ್ ಪ್ರೆಸ್ ಈ ಪ್ರದೇಶದಿಂದ ಸಂಚರಿಸಿವೆ.

Oxygen Express operations from Eastern States to beat the Cyclone winds

ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣಕ್ಕೆ ಎಲ್ಎಂಒ ವಿತರಣೆ ತಲಾ 1000 ಮೆ.ಟನ್ ದಾಟಿದೆ. ಬೇಡಿಕೆ ಸಲ್ಲಿಸುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್ಎಂಒ ತಲುಪಿಸಲು ಭಾರತೀಯ ರೈಲ್ವೆ ಪ್ರಯತ್ನಿಸುತ್ತಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಆಮ್ಲಜನಕದೊಂದಿಗೆ 14 ರಾಜ್ಯಗಳಿಗೆ - ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ - ತಲುಪಿವೆ.

ಈ ಪತ್ರಿಕಾ ಹೇಳಿಕೆ ಬಿಡುಗಡೆಯ ಸಮಯದವರೆಗೆ, ಮಹಾರಾಷ್ಟ್ರಕ್ಕೆ 614 ಮೆ.ಟನ್, ಉತ್ತರಪ್ರದೇಶಕ್ಕೆ ಸುಮಾರು 3649 ಮೆ.ಟನ್, ಮಧ್ಯಪ್ರದೇಶಕ್ಕೆ 633 ಮೆ.ಟನ್, ದೆಹಲಿಗೆ 4820 ಮೆ.ಟನ್, ಹರಿಯಾಣಕ್ಕೆ 1911 ಮೆ.ಟನ್, ರಾಜಸ್ಥಾನದಲ್ಲಿ 98 ಮೆ.ಟನ್, ಕರ್ನಾಟಕದಲ್ಲಿ 1421 ಮೆ.ಟನ್, ಉತ್ತರಾಖಂಡಕ್ಕೆ 320 ಮೆ.ಟನ್, ತಮಿಳುನಾಡಿಗೆ 1099 ಮೆ.ಟನ್, ಆಂಧ್ರಪ್ರದೇಶಕ್ಕೆ 886 ಮೆ.ಟನ್, ಪಂಜಾಬ್ ಗೆ 225 ಮೆ.ಟನ್, ಕೇರಳಕ್ಕೆ 246 ಮೆ.ಟನ್, ತೆಲಂಗಾಣಕ್ಕೆ 1029 ಮೆ.ಟನ್ ಮತ್ತು ಅಸ್ಸಾಂಗೆ 80 ಮೆ.ಟನ್ ಆಮ್ಲಜನಕ ತಲುಪಿಸಲಾಗಿದೆ.

ರೈಲ್ವೆಯು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ವಿವಿಧ ಮಾರ್ಗಗಳನ್ನು ಮ್ಯಾಪ್ ಮಾಡಿದೆ ಮತ್ತು ರಾಜ್ಯಗಳಲ್ಲಿ ಉದ್ಭವಿಸುವ ಯಾವುದೇ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ. ಎಲ್ಎಂಒ ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ ಗಳನ್ನು ಒದಗಿಸುತ್ತವೆ. ಏಪ್ರಿಲ್ 24 ರಂದು ಮಹಾರಾಷ್ಟ್ರದಲ್ಲಿ 126 ಮೆ.ಟನ್ ಆಮ್ಲಜನಕದೊಂದಿಗೆ ಆಕ್ಸಿಜನ್ ಎಕ್ಸ್ ಪ್ರೆಸ್ ತನ್ನ ವಿತರಣೆಯನ್ನು 31 ದಿನಗಳ ಹಿಂದೆಯೇ ಪ್ರಾರಂಭಿಸಿದ್ದನ್ನು ಗಮನಿಸಬಹುದು.

English summary
Oxygen Expresses moved 680 MT of Oxygen relief from Odisha, West Bengal and Jharkhand in last 12 hours before Cyclone gets stronger. 8 Oxygen Expresses moved from the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X