ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಘಟಬಂಧನ Rally LIVE: ಮೋದಿ ಸರ್ಕಾರದ ವಿರುದ್ಧ ಹೂಂಕರಿಸಿದ ಮಮತಾ

|
Google Oneindia Kannada News

ಕೋಲ್ಕತ್ತಾ, ಜನವರಿ 19: ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹಮ್ಮಿಕೊಂದಿರುವ ಬೃಹತ್ rally ಗೆ ಈಗಾಗಲೇ ದೇಶದ ಘಟಾನುಘಟಿ ನಾಯಕರು ಆಗಮಿಸಿದ್ದಾರೆ.

ಮಹಾಘಟಬಂಧನಕ್ಕಾಗಿ ಕೋಲ್ಕತ್ತಾದಲ್ಲಿ ಇಂದು ವಿಪಕ್ಷಗಳ ಬೃಹತ್ rally ಮಹಾಘಟಬಂಧನಕ್ಕಾಗಿ ಕೋಲ್ಕತ್ತಾದಲ್ಲಿ ಇಂದು ವಿಪಕ್ಷಗಳ ಬೃಹತ್ rally

ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಹೋರಾಡಲು ವಿಪಕ್ಷಗಳೆಲ್ಲವೂ ಸಿದ್ಧವಾಗಿದ್ದು, ಇಂದು ಒಗ್ಗಟ್ಟು ಪ್ರದರ್ಶನದ ಸಂಕೇತವೆಂಬಂತೆ ಕೋಲ್ಕತ್ತಾದಲ್ಲಿ ಶನಿವಾರ ಬೃಹತ್ rally ನಡೆಯಲಿದೆ.

ಬಿಜೆಪಿ ವಿರುದ್ಧ ತೊಡೆತಟ್ಟಲು ಕೊಲ್ಕತ್ತಕ್ಕೆ ತೆರಳಿದ ಕುಮಾರಸ್ವಾಮಿಬಿಜೆಪಿ ವಿರುದ್ಧ ತೊಡೆತಟ್ಟಲು ಕೊಲ್ಕತ್ತಕ್ಕೆ ತೆರಳಿದ ಕುಮಾರಸ್ವಾಮಿ

ಬಿಜೆಪಿ ಮಿತ್ರಪಕ್ಷಗಳನ್ನು ಹೊರತುಪಡಿಸಿ ಬಹುಪಾಲು ಎಲ್ಲ ವಿಪಕ್ಷಗಳೂ ಈ rally ಯಲ್ಲಿ ಭಾಗಿಯಾಗಲಿದ್ದು, ಎಡಪಕ್ಷಗಳು ಮಾತ್ರ ಇದರಲ್ಲಿ ಬಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ವಿರೋಧ ಪಕ್ಷವಾಗಿರುವ ಕಾರಣ ಎಡಪಕ್ಷಗಳು ಈ rally ಗೆ ಕೈಕೊಟ್ಟಿವೆ.

Opposition rally in Kolkatta: LIVE updates

ಒಟ್ಟಿನಲ್ಲಿ ದೇಶದ ರಾಜಕೀಯದಲ್ಲೇ ಮಹತ್ವದ ಮೈಲಿಗಲ್ಲು ಎನ್ನಿಸಿರುವ ಈ rallyಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest FirstOldest First
4:10 PM, 19 Jan

ಮೋದಿ ಸರ್ಕಾರದ ಕಾಲಾವಧಿ ಮುಗಿದಿದೆ. ಭವಿಷ್ಯದಲ್ಲಿ ಹೊಸ ನಾಯಕರ ಅಗತ್ಯವಿದೆ. ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
3:23 PM, 19 Jan

ಮೋದಿ ಸುಳ್ಳಿನ ಕಾರ್ಖಾನೆ ಇಟ್ಟಿದ್ದಾರೆ. ಅವರು ಸುಳ್ಳನ್ನು ಉತ್ಪಾದಿಸುತ್ತಾರೆ, ಅದನ್ನು ಮಾರಾಟ ಮಾಡುತ್ತಾರೆ- ತೇಜಸ್ವಿ ಯಾದವ್, ಆರ್ ಜೆಡಿ ನಾಯಕ
2:49 PM, 19 Jan

ತಾವು ಪ್ರಧಾನಿಯಾಗಿದ್ದ ಕಾಲದಲ್ಲಿ ತೆಗೆದುಕೊಂಡಿದ್ದ ಪ್ರಗತಿಕಾರ್ಯಗಳ ಬಗ್ಗೆಯೇ ಮಾಜಿ ಪ್ರಧಾನಿ ದೇವೇಗೌಡರು ಹೆಚ್ಚು ಮಾತನಾಡುವ ಮೂಲಕ, ಸ್ವಗುಣಗಾನ ಮಾಡಿಕೊಂಡಿದ್ದು ಕಂಡುಬಂತು
2:46 PM, 19 Jan

"ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏನು ಮಾಡಿದೆ? ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡವಿದೆ. ನಾನು ಪ್ರಧಾನಿಯಾಗಿದ್ದಾಗ ಹತ್ತೇ ತಿಂಗಳಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೆ"- ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ
2:44 PM, 19 Jan

ಮಹಾಘಟಬಂಧನ rally ಯಲ್ಲಿ ಮಾತನಾಡುತ್ತಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
2:32 PM, 19 Jan

ದುರಹಂಕಾರದ ಆಡಳಿತದ ನಿರ್ಮೂಲನೆಗೆ ಈ ಸಭೆ. ದುರಹಂಕಾರದ ಸರ್ಕಾರವನ್ನು ಕೆಳಗಿಳಿಸಿ ದೇಶದ ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಉಳಿಸಬೇಕಿದೆ ಎಂಬ ಸಂದೇಶವನ್ನು ಯುಪಿಎಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಪರವಾಗಿ ನೀಡಿದ್ದಾರೆ- ಮಲ್ಲಿಕಾರ್ಜುನ ಖರ್ಗೆ
2:29 PM, 19 Jan

ಸಭೆಯಲ್ಲಿ ಅರವಿಂದ್ ಎಎಪಿಯ ಕೇಜ್ರಿವಾಲ್, ಎನ್ ಸಿಪಿಯ ಶರದ್ ಪವಾರ್, ಓಮರ್ ಅಬ್ದುಲ್ಲಾ ಭಾಗಿ
Advertisement
2:21 PM, 19 Jan

ಇವಿಎಂ ಒಂದು ಕಳ್ಳ ಯಂತ್ರ: ಓಮರ್ ಅಬ್ದುಲ್ಲಾ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ
2:20 PM, 19 Jan

ಒಬ್ಬ ವ್ಯಕ್ತಿಯನ್ನು ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶವಾಗಬಾರದು, ಸಿದ್ಧಾಂತವನ್ನು ನಿರ್ಮೂಲನೆ ಮಾಡಬೇಕು- ಯಶವಂತ್ ಸಿನ್ಹಾ, ಬಿಜೆಪಿ ಮಾಜಿ ನಾಯಕ
2:15 PM, 19 Jan

ನಮ್ಮನ್ನು ಆಡಿಕೊಳ್ಳಲಿ ಬಿಜೆಪಿಯವರು, 'ಮಹಾಘಟಬಂಧನದಲ್ಲಿ ಸಾಕಷ್ಟು ಪ್ರಧಾನಿ ಅಭ್ಯರ್ಥಿಗಳಿದ್ದಾರೆ ಎಂದು ಅಣಕಿಸುತ್ತಅರೆ. ಆದರೆ ಪ್ರಧಾನಿ ಯಾರಾಗಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಚುನಾವಣೆ ಹತ್ತಿರವಾಗುತ್ತಿರುವಾಗ ನೀವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೀರಿ. ನಾವು ಜನರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ' -ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ
1:49 PM, 19 Jan

ಸುಭಾಶ್ ಚಂದ್ರ ಬೋಸ್ ಬ್ರಿಟಿಶರ ವಿರುದ್ಧ ಹೋರಾಡಿದರು. ನಾವು ಕಳ್ಳರ ವಿರುದ್ಧ ಹೋರಾಡಬೇಕಿದೆ: ಹಾರ್ದಿಕ್ ಪಟೇಲ್
1:44 PM, 19 Jan

"ಕಾರ್ಖಾನೆಗಳು ಮುಚ್ಚಿವೆ, ರೈತರು ಬೇಸರದಲ್ಲಿದ್ದಾರೆ, ಅಲ್ಪಸಂಖ್ಯಾತರನ್ನು ನೋಯಿಸಲಾಗುತ್ತಿದೆ. ಅಂಥ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆಯಬೇಕಿದೆ. ನಾವು ಸಂವಿಧಾನವನ್ನು ಕಾಪಾಡಬೇಕೆಂದರೆ ಬಿಜೆಪಿ ಸರ್ಕಾರವನ್ನು ನಿರ್ಮೂಲನೆ ಮಾಡಬೇಕು" - ಎಸ್ ಸಿ ಮಿಶ್ರಾ, ಬಿಎಸ್ಪಿ ನಾಯಕ
Advertisement
1:41 PM, 19 Jan

Rally ಗೆ ಆಗಮಿಸಿದ ಕಾಂಗ್ರೆಸ್ ಮುಖಂಡ, ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
1:36 PM, 19 Jan

"ಮೋದಿ ಎಲ್ಲೇ ಹೋದರೂ ಅವರು ವಿಪಕ್ಷದ ಮೇಲೆ ದಾಳಿ ಮಾಡುತ್ತಾರೆ. ಮೋದಿ ಅವರಿಗೆ ವಿಪಕ್ಷಗಳು ಒಂದಾಗಿರುವುದರಿಂದ ಭಯ ಆರಂಭವಾಗಿದೆ. ಅದಕ್ಕೆಂದೇ ನಮ್ಮ ಮೇಲೆ ಶಾಪ ಹಾಕುತ್ತಿದ್ದಾರೆ. ಭಾರತವನ್ನು ರಕ್ಷಿಸಲು ನಾವೆಲ್ಲ ಒಂದಾಗಬೇಕಿದೆ" -ಎಂ ಕೆ ಸ್ಟಾಲಿನ್, ಡಿಎಂಕೆ ಮುಖಂಡ
1:29 PM, 19 Jan

ವೇದಿಕೆಯಲ್ಲಿ ಮೊದಲ ಸಾಲಲ್ಲೇ ಕುಳಿತು ಮಹಾಘಟಬಂಧನಕ್ಕೆ ಬೆಂಬಲ ಸೂಚಿಸಿದ ಎಚ್ ಡಿ ಕುಮಾರಸ್ವಾಮಿ
12:09 PM, 19 Jan

Rally ಯಲ್ಲಿ ಕಿಕ್ಕಿರಿದು ಸೇರಿದ ಜನ. ಭರ್ತಿಯಾದ ಬ್ರಿಗೆಡ್ ಪರೇಡ್ ಮೈದಾನ
12:08 PM, 19 Jan

ವೇದಿಕೆಯಲ್ಲಿ ಮುಂಭಾಗದಲ್ಲೇ ಕುಳಿರುವ ಎಚ್ ಡಿ ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್
11:31 AM, 19 Jan

ಮಮತಾ rally ಯಲ್ಲಿ ಪಾಲ್ಗೊಂಡು ಸಹಸ್ರಾರು ಟಿ ಎಂಸಿ ಕಾರ್ಯಕರ್ತರು. ನಾನಾ ರಾಜ್ಯದಿಂದ ಹರಿದುಬರುತ್ತಿರುವ ಜನಸಾಗರ
11:10 AM, 19 Jan

Rally ಗೆ ಆಗಮಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
10:54 AM, 19 Jan

ಐತಿಹಾಸಿಕ 'ಏಕತಾ ಭಾರತ rally' ಗೆ ಇನ್ನು ಕೆಲವೇ ಕ್ಷಣಗಳಿವೆ. ಬ್ರಿಗೆಡ್ ಪರೇಡ್ ಗ್ರೌಡ್ಸ್ ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಾನು ದೇಶದ ಎಲ್ಲಾ ನಾಯಕರನ್ನೂ ಸ್ವಾಗತಿಸುತ್ತೇನೆ. ಬಲಾಡ್ಯ, ಪ್ರಗತಿಶೀಲ, ಒಗ್ಗಟ್ಟಿನ ಭಾರತಕ್ಕೆ ಇದು ಸ್ಫೂರ್ತಿಯಾಗಲಿ" ಎಂದು ಇಂದು ಬೆಳಗ್ಗೆ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದರು.
10:26 AM, 19 Jan

Rally ಯಲ್ಲಿ ಭಾಗವಹಿಸದಿದ್ದರೂ, ತಾವು ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಮುಖೇನ ಈಗಾಗಲೇ ತಿಳಿಸಿದ್ದಾರೆ.
10:08 AM, 19 Jan

ಶುಕ್ರವಾರ ರಾತ್ರಿಯೇ ಕೋಲ್ಕತ್ತಾ ತಲುಪಿದ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
9:49 AM, 19 Jan

ಡಿಎಂಕೆಯ ಸ್ಟಾಲಿನ್ ಈಗಾಗಲೇ ಕೋಲ್ಕತ್ತಾಕ್ಕೆ ಆಗಮಿಸಿದ್ದಾರೆ.
9:48 AM, 19 Jan

10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ದೇಶದಾದ್ಯಂತ ಸಾವಿರಾರು ಟಿಎಂಸಿ ಕಾರ್ಯಕರ್ತರು ಆಗಮಿಸಲಿದ್ದಾರೆ.
9:46 AM, 19 Jan

Rally ಕಾರಣ ಕೋಲ್ಕತ್ತಾದಾದ್ಯಂತ ಬ್ರಿಗೆಡ್ ಪರೇಡ್ ಮೈದಾನದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ. 20 ವೀಕ್ಷಣಾ ಗೋಪುರ, 1000 ಮೈಕ್ರೋಫೋನ್ ಗಳು, 30 ಎಲ್ ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ.
9:42 AM, 19 Jan

ಅನಾರೋಗ್ಯದ ಕಾರಣ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸುತ್ತಿಲ್ಲ. ವೈಯಕ್ತಿಕ ಕಾರಣಗಳಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಸಭೆಯಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗುತ್ತಿದ್ದು, ಈಗಾಗಲೇ ಅವರು ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ತಮ್ಮ ಬೆಂಬಲ ಸೂಚಿಸಿದ್ದಾರೆ.
9:40 AM, 19 Jan

ಈ rally ಯಲ್ಲಿ ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ, ಶತ್ರುಘ್ನ ಸಿನ್ಹಾ, ಅರುಣ್ ಶೌರಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಂಧ್ರಪ್ರದೇಶ ಮುಖ್ಯಮಂತ್ರಿಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ, ಅಖಿಲೇಶ್ ಯಾದವ್ ಸೇರಿದಂತೆ 20 ಕ್ಕೂ ಹೆಚ್ಚು ಮುಖಂಡರು ಭಾಗಿಯಾಗಲಿದ್ದಾರೆ.

English summary
Opposition rally in Kolkatta, in West Bengal. Top leaders to attend. LIVE Updates in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X