ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥ ಹೋರಾಟ ದೀದಿ... ಮಮತಾಗೆ ವಿಪಕ್ಷಗಳಿಂದ ಶುಭಾಶಯಗಳ ಮಹಾಪೂರ

|
Google Oneindia Kannada News

ಕೋಲ್ಕತ್ತಾ, ಮೇ 5: ಬಿಜೆಪಿಯಿಂದ ಎದುರಾದ ಭಾರೀ ಪೈಪೋಟಿ ನಡುವೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದು, ಬುಧವಾರ ಮಮತಾ ಬ್ಯಾನರ್ಜಿ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರೂ ಪಕ್ಷದ ಸದಸ್ಯರ ಒಮ್ಮತದ ಮೇರೆಗೆ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

3ನೇ ಬಾರಿ ಸಿಎಂ ಆಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ ವಚನ 3ನೇ ಬಾರಿ ಸಿಎಂ ಆಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ ವಚನ

ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಹಲವು ಅಹಿತಕರ ಘಟನೆಗಳೂ ನಡೆದಿದ್ದವು. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ನ ಪ್ರತಿ ಚುನಾವಣಾ ಸಮಾವೇಶದಲ್ಲಿಯೂ ಜಿದ್ದಾಜಿದ್ದಿನ ಸ್ಪರ್ಧೆ ಗೋಚರಿಸುತ್ತಿತ್ತು. ಇದಾಗ್ಯೂ 210 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಟಿಎಂಸಿ ಸರ್ಕಾರ ರಚನೆ ಮಾಡಿದೆ. ಬಿಜೆಪಿ 77 ಸ್ಥಾನಗಳನ್ನು ಒಲಿಸಿಕೊಂಡಿದೆ.

ಈ ಚುನಾವಣೆ ಬಿಜೆಪಿಯ ಸೋಲಿಗೆ ಅತ್ಯುತ್ತಮ ಉದಾಹರಣೆ. ಬಂಗಾಳ ಇಂದು ಇಡೀ ದೇಶವನ್ನು ರಕ್ಷಿಸಿದೆ ಎಂದು ಮಮತಾ ಬ್ಯಾನರ್ಜಿ ಗೆಲುವು ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಮಮತಾ ಬ್ಯಾನರ್ಜಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ಮೋದಿ ಒಳಗೊಂಡಂತೆ ವಿರೋಧ ಪಕ್ಷಗಳ ನಾಯಕರು ದೀದಿಗೆ ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡುತ್ತಿದ್ದಾರೆ. ಮುಂದೆ ಓದಿ...

 ಪಶ್ಚಿಮ ಬಂಗಾಳದಲ್ಲಿ ವಿಜಯ ಪತಾಕೆ; ವೈರಲ್ ಆಯ್ತು ಮಮತಾ ಹಳೇ ಫೋಟೊ ಪಶ್ಚಿಮ ಬಂಗಾಳದಲ್ಲಿ ವಿಜಯ ಪತಾಕೆ; ವೈರಲ್ ಆಯ್ತು ಮಮತಾ ಹಳೇ ಫೋಟೊ

 ಮೋದಿಗೆ ಧನ್ಯವಾದ ಹೇಳಿದ ಮಮತಾ ಬ್ಯಾನರ್ಜಿ

ಮೋದಿಗೆ ಧನ್ಯವಾದ ಹೇಳಿದ ಮಮತಾ ಬ್ಯಾನರ್ಜಿ

ಪ್ರಧಾನಿ ಮೋದಿ ಮಮತಾ ಬ್ಯಾನರ್ಜಿಗೆ ಶುಭಾಶಯ ಕೋರಿದ್ದು, ಪಶ್ಚಿಮ ಬಂಗಾಳಕ್ಕೆ ಎಲ್ಲ ರೀತಿಯಿಂದಲೂ ಕೇಂದ್ರದಿಂದ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, "ಕೇಂದ್ರದಿಂದ ಪಶ್ಚಿಮ ಬಂಗಾಳ ನಿರಂತರ ಬೆಂಬಲ ಬಯಸುತ್ತದೆ. ಪಶ್ಚಿಮ ಬಂಗಾಳದ ಹಿತವನ್ನು ಬಯಸಿದ್ದಕ್ಕೆ ಧನ್ಯವಾದ. ಕೊರೊನಾ ವಿರುದ್ಧ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಕೇಂದ್ರ-ರಾಜ್ಯದ ಸಂಬಂಧಕ್ಕೆ ಹೊಸ ಮೈಲುಗಲ್ಲು ಸೃಷ್ಟಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

 ದೀದಿಗೆ ಅಖಿಲೇಶ್ ಯಾದವ್ ಹಾರೈಕೆ

ದೀದಿಗೆ ಅಖಿಲೇಶ್ ಯಾದವ್ ಹಾರೈಕೆ

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಚುನಾವಣೆಗೆ ಮುನ್ನವೇ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ಘೋಷಿಸಿದ್ದರು. ಬಂಗಾಳ ನಿಮ್ಮ ನೇತೃತ್ವದಲ್ಲಿ ಹೊಸ ಅಭಿವೃದ್ಧಿ ಕಾಣಲಿ ಎಂದು ಅಖಿಲೇಶ್ ಯಾದವ್ ಶುಭ ಹಾರೈಸಿದ್ದು, ಇದಕ್ಕೆ ದೀದಿ ಈ ರೀತಿ ಉತ್ತರ ನೀಡಿದ್ದಾರೆ. "ಪಶ್ಚಿಮ ಬಂಗಾಳದ ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ. ನನ್ನ ಜನರ ಪರವಾಗಿ, ನನ್ನ ಪಕ್ಷದ ಕಾರ್ಯಕರ್ತರ ಪರವಾಗಿ ಅಖಿಲೇಶ್ ಅವರಿಗೆ ಧನ್ಯವಾದ" ಎಂದು ಟ್ವೀಟ್ ಮಾಡಿದ್ದಾರೆ.

 ಬಿಜೆಪಿ ಸೋಲಿಸಿದ್ದಕ್ಕೆ ಶುಭ ಕೋರಿದ ರಾಹುಲ್ ಗಾಂಧಿ

ಬಿಜೆಪಿ ಸೋಲಿಸಿದ್ದಕ್ಕೆ ಶುಭ ಕೋರಿದ ರಾಹುಲ್ ಗಾಂಧಿ

ಬಿಜೆಪಿಯನ್ನು ಸೋಲಿಸಿದ್ದಕ್ಕೆ ಮಮತಾ ಜೀ ಹಾಗೂ ಪಶ್ಚಿಮ ಬಂಗಾಳದ ಜನರಿಗೆ ಶುಭ ಹಾರೈಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, "ಪಶ್ಚಿಮ ಬಂಗಾಳ ಜನರು ಇಡೀ ದೇಶಕ್ಕೆ ದಾರಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿಯ ದ್ವೇಷ ರಾಜಕಾರಣ ಶೀಘ್ರವಾಗಿ ಭಾರತದಿಂದ ತೊಲಗುತ್ತದೆ" ಎಂದು ಮಮತಾ ಬ್ಯಾನರ್ಜಿ ಉತ್ತರಿಸಿದ್ದಾರೆ.

"ಇದು ನೆನಪಿನಲ್ಲಿಟ್ಟುಕೊಳ್ಳುವಂಥ ಗೆಲುವು"

ಪಶ್ಚಿಮ ಬಂಗಾಳದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂಥ ಗೆಲುವನ್ನು ಟಿಎಂಸಿ ಪಡೆದಿದೆ. ಬಿಜೆಪಿ ಹಾಗೂ ಚುನಾವಣಾ ಆಯೋಗ ನಿಮ್ಮ ಸೋಲಿಗೆ ಏನೆಲ್ಲಾ ಪ್ರಯತ್ನಿಸಿದ್ದರೂ ನೀವು ಗೆದ್ದಿರಿ. ಮುಂದಿನ ಐದು ವರ್ಷಗಳ ಆಡಳಿತಕ್ಕೆ ನನ್ನ ಹಾರೈಕೆ ಎಂದು ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಜನರು ದ್ವೇಷ ರಾಜಕೀಯಕ್ಕೆ ಇತಿ ಹಾಡಿದ್ದಾರೆ. ಶಾಂತಿ ಹಾಗೂ ಪ್ರಗತಿಪೂರ್ಣ ರಾಜಕೀಯ ಮುಂದುವರೆಯಲಿದೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.

 ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಶುಭ ಹಾರೈಕೆ

ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಶುಭ ಹಾರೈಕೆ

ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಕೂಡ ಶುಭಾಶಯ ಕೋರಿದ್ದು, ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೀದಿ ನಾಗರಿಕರ ರಕ್ಷಣೆ ಕುರಿತು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯಿದೆ. ನಿಮ್ಮ ಆಡಳಿತದ ಇನ್ನೊಂದು ಮಜಲು ಯಶಸ್ವಿಯಾಗಲಿ ಎಂದಿದ್ದು, ನಿಮ್ಮ ಗೆಲುವಿಗೂ ನನ್ನ ಧನ್ಯವಾದ. ತಮಿಳುನಾಡು ನಿಮ್ಮ ನೇತೃತ್ವದಲ್ಲಿ ಪ್ರಗತಿಯನ್ನು ಕಾಣಲಿ ಎಂದು ಮಮತಾ ಬ್ಯಾನರ್ಜಿ ಆಶಿಸಿದ್ದಾರೆ.

"ದೀದಿ, ಎಂಥ ಹೋರಾಟ ನಿಮ್ಮದು"

ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಈ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕೆ ಶುಭಾಶಯ. ಒಳ್ಳೆಯ ಆರೋಗ್ಯ ನಿಮ್ಮದಾಗಲಿ. ದೀದಿಗೆ ಮತ ಚಲಾಯಿಸಿದ ಪಶ್ಚಿಮ ಬಂಗಾಳ ಜನರಿಗೆ ಧನ್ಯವಾದ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆಶಿಸಿದ್ದು, ಭಾರತವನ್ನು ರಕ್ಷಿಸಲು ಪಶ್ಚಿಮ ಬಂಗಾಳ ಜನರು ಈ ಬಾರಿ ಟಿಎಂಸಿಗೆ ಮತ ಹಾಕಿದ್ದಾರೆ. ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಅಶೋಕ್ ಗೆಹ್ಲೋಟ್, ಅರವಿಂದ್ ಕೇಜ್ರಿವಾಲ್ ಕೂಡ ಮಮತಾ ಬ್ಯಾನರ್ಜಿಗೆ ಶುಭ ಹಾರೈಸಿದ್ದು, "ಎಂಥ ಗೆಲುವು ನಿಮ್ಮದು, ಎಂಥ ಹೋರಾಟ" ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ನಿಮ್ಮ ಬೆಂಬಲವನ್ನು ನಿರಂತರ ಬಯಸುತ್ತೇನೆ ಎಂದು ದೀದಿ ಪ್ರತಿಕ್ರಿಯಿಸಿದ್ದಾರೆ.

English summary
Mamata Banerjee took oath as west bengal cm third time today. Here is some opposition leaders wishes to her,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X