• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸದೆಯಾಗಿ ಪ್ರಮಾಣ ಸ್ವೀಕರಿಸುವ ಮೊದಲೇ ನುಸ್ರತ್ ಮದುವೆ

|

ಕೋಲ್ಕತಾ, ಜೂನ್ 20 : ಪಶ್ಚಿಮ ಬಂಗಾಳದ ಬಸಿರ್ಹಾತ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ, ರೂಪದರ್ಶಿ ನುಸ್ರತ್ ಜಹಾನ್ ಅವರು ನಿಖಿಲ್ ಜೈನ್ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದು, ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

29 ವರ್ಷದ ನಟಿ, ರೂಪದರ್ಶಿ, ಸುಂದರಿ ಮತ್ತು ಇದೀಗ ಸಂಸದೆಯಾಗಿರುವ ನುಸ್ರತ್ ಜಹಾನ್ ಅವರು, ಟರ್ಕಿಯ ಬೋದ್ರಮ್ ಎಂಬ ನಗರದಲ್ಲಿ ಕುಟುಂಬದ ಸದಸ್ಯರು ಮತ್ತು ಕೆಲ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿರುವ ನವನವೋನ್ಮೇಷಶಾಲಿನಿಯರು

ನುಸ್ರತ್ ಜಹಾನ್ ಅವರೊಂದಿಗೆ ಸ್ನೇಹಿತೆ ಮತ್ತು ಟಿಎಂಸಿಯಿಂದಲೇ ಜಾದವಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮತ್ತೊಬ್ಬ ನಟಿ ಮಿಮಿ ಚಕ್ರಬೊರ್ತಿ ಅವರು ಜೂನ್ 15ರಂದೇ ಬೋದ್ರಮ್ ಗೆ ತೆರಳಿದ್ದರು. ಮದುವೆ ಸಿಕ್ಸ್ತ್ ಸೆನ್ಸ್ ಕಪಲಂಕಾಯ ಹೋಟೆಲಿನಲ್ಲಿ ಸಾಂಪ್ರದಾಯಿಕವಾಗಿ ಜರುಗಿದೆ.

ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರಬೊರ್ತಿ ಅವರು ಸಂಸತ್ತನ್ನು ಪ್ರಥಮ ಬಾರಿಗೆ ಪ್ರವೇಶಿಸಿದ ದಿನ ಆಧುನಿಕ ದಿರಿಸಿನಲ್ಲಿ ಬಂದು ಎಲ್ಲ ಕಣ್ಣು ಕುಕ್ಕಿದ್ದರು. ಇಂಥ ಮಾಡ್ ಡ್ರೆಸ್ ನಲ್ಲಿ ಬರುವ ಬದಲು ಸಾಂಪ್ರದಾಯಿಕ ತೊಡುಗೆಯಲ್ಲಿ ಬರಲಿಕ್ಕಾಗುತ್ತಿರಲಿಲ್ಲವೆ ಎಂದು ಹಲವರು ಸಂಪ್ರದಾಯವಾದಿಗಳು ಅವರನ್ನು ಪ್ರಶ್ನಿಸಿದ್ದರು.

ಮದುವೆಯ ಕಾರಣದಿಂದ ಚಳಿಗಾಲದ ಅಧಿವೇಶನ ಆರಂಭವಾಗುವ ಮೊದಲೇ ನುಸ್ರತ್ ಮತ್ತು ಮಿಮಿ ಟರ್ಕಿಗೆ ತೆರಳಿರುವುದರಿಂದ ಇಬ್ಬರೂ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಕರ್ನಾಟಕದ ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರಮಾಣ ವಚನ ಸ್ವೀಕರಿಸದ ಇನ್ನೂ ಹಲವರ ಪಟ್ಟಿಗೆ ಇವರಿಬ್ಬರೂ ಸೇರಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸದಿದ್ದರೇನಂತೆ, ನುಸ್ರತ್ ಜಹಾನ್ (ಇನ್ನು ಮುಂದೆ ನುಸ್ರತ್ ಜೈನ್) ಅವರು ಅಗ್ನಿಸಾಕ್ಷಿಯಾಗಿ ಉತ್ತಮ ವೈವಾಹಿಕ ಜೀವನ ನಡೆಸುವುದಾಗಿ, ಸಮಸ್ತ ಬಂಧುಗಳ ಸಮಕ್ಷಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಬದುಕು ಉಜ್ವಲವಾಗಿರಲಿ.

ನುಸ್ರತ್ ಜಹಾನ್ ಅವರು ಬಿಜೆಪಿಯ ಸಯಂತನ್ ಘೋಷ್ ಅವರನ್ನು 3,50,369 ಮತಗಳ ಭಾರೀ ಅಂತರದಿಂದ ಬಸಿರ್ಹಾತ್ ಕ್ಷೇತ್ರದಲ್ಲಿ ಸೋಲಿಸಿದ್ದರು. ಮಿಮಿ ಚಕ್ರಬೊರ್ತಿ ಅವರು ಕೂಡ ಬಿಜೆಪಿಯ ಅಭ್ಯರ್ಥಿ ಅನುಪಮ್ ಹಜ್ರಾ ಅವರನ್ನು 2.9 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

English summary
Model cum actress Nusrat Jahan gets married before taking oath as Member of Parliament. First time MP Nusrat married Nikhil Jain in Turkey city Bodram. Another MP Mimi Chakraborthy accompanied her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more