• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ನಿಮ್ಮ ಪಕ್ಷದ ಸದಸ್ಯೆ ಅಲ್ಲ ಎಂದು ಮೋದಿಗೆ ಮಮತಾ ಟಾಂಗ್

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 2: ನಾನು ನಿಮ್ಮ ಪಕ್ಷದ ಸದಸ್ಯೆ ಅಲ್ಲ, ಮೊದಲು ನೀವು ನಿಮ್ಮ ಗೃಹ ಸಚಿವರನ್ನು ನಿಯಂತ್ರಿಸಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.

ನಂದಿಗ್ರಾಮದಲ್ಲಿ ತಾವು ಭರ್ಜರಿ ಜಯಗಳಿಸುವುದಾಗಿ ಪ್ರತಿಪಾದಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ದೀದಿ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ? ಎಂದು ಪ್ರಶ್ನಿಸಿದ ಪ್ರಧಾನಿ ನರೇಂದ್ರ ಮೋದಿಯವರ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಮತಾ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಮೋದಿಗೆ ಟಿಎಂಸಿ ತಿರುಗೇಟುಮಮತಾ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಮೋದಿಗೆ ಟಿಎಂಸಿ ತಿರುಗೇಟು

ಇನ್ನೊಂದು ಸ್ಥಾನದಿಂದ ಸ್ಪರ್ಧಿಸುವಂತೆ ನೀವು ನನಗೆ ಸಲಹೆ ನೀಡಲು ನಾನು ನಿಮ್ಮ ಪಕ್ಷದ ಸದಸ್ಯೆಯಲ್ಲ, ನಾನು ನಂದಿಗ್ರಾಮದಿಂದ ಸ್ಪರ್ಧಿಸಿದ್ದೇನೆ ಮತ್ತು ಅಲ್ಲಿಂದ ಗೆದ್ದೇ ಗೆಲ್ಲುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆ ಅಗತ್ಯ ಇಲ್ಲ ಎಂದು ಮೋದಿಗೆ ತಿರುಗೇಟು ನೀಡಿದ ದೀದಿ, ನೀವು ಮೊದಲು ನಿಮ್ಮ ಗೃಹ ಸಚಿವರನ್ನು ನಿಯಂತ್ರಿಸಿ. ನಂತರ ನಮ್ಮನ್ನು ನಿಯಂತ್ರಿಸಲು ಪ್ರಯತ್ನಿಸಿ ಎಂದು ಪ್ರಧಾನಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ನಿನ್ನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ದೀದಿ, ನೀವು ಮತ್ತೊಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದೀರಿ ಎಂಬ ವದಂತಿಗಳಿವೆ. ಇದು ನಿಜವೇ? ಎಂದು ಪ್ರಶ್ನಿಸಿದ್ದರು.

ಉತ್ತರ ಬಂಗಾಳ ಜಿಲ್ಲೆಯ ದಿನ್ಹಾಟದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನೀವು ನಮ್ಮನ್ನು ನಿಯಂತ್ರಿಸಲು ನಾವು ನಿಮ್ಮ ಪಕ್ಷದ ಸದಸ್ಯರಲ್ಲ ಎಂದಿದ್ದಾರೆ.

English summary
Asserting that she was winning the election from Nandigram, Chief Minister Mamata Banerjee on Friday hit back at Prime Minister Narendra Modi and said that she does not need his "suggestion" on contesting from any other seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X