ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೀ ಭಾಷಣ ಮಾಡೋದಲ್ಲಾ, ರೇಶನ್ ಕೂಡಾ ಕೊಡಿ: ಮೋದಿ ವಿರುದ್ದ ಮಮತಾ ಗರಂ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 28: "ಕೊರೊನಾ ವಿಚಾರದಲ್ಲಿ ಕೇಂದ್ರ ಸರಕಾರದ ಜೊತೆಗೆ, ಯಾವುದೇ ಜಿದ್ದಾಟ ಮಾಡುವ ಉದ್ದೇಶವಿಲ್ಲ. ಕೇಂದ್ರ ಏನು ಮಾರ್ಗದರ್ಶನ ನೀಡುತ್ತದೋ, ಅದನ್ನು ಪಶ್ಚಿಮ ಬಂಗಾಳ ಸರಕಾರ ಪಾಲಿಸುತ್ತದೆ" ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

"ಕೇಂದ್ರ ಸರಕಾರದಿಂದ ಯಾವುದೇ ಆರ್ಥಿಕ ಸಹಾಯ ರಾಜ್ಯಕ್ಕೆ ಬರುತ್ತಿಲ್ಲ. ಈಗ ಏನಿದ್ದರೂ ಹಣ ಖಾಲಿಯಾಗುತ್ತಿದೆಯೇ ಹೊರತು, ಯಾವುದೇ ಆದಾಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಕೊರೊನಾ ಅಥವಾ ಇನ್ಯಾವುದಕ್ಕೋ, ವಿನಿಯೋಗಿಸಲು ಹಣ ಎಲ್ಲಿಂದ ಬರಬೇಕು" ಎಂದು ಮಮತಾ ಪ್ರಶ್ನಿಸಿದ್ದಾರೆ.

ಭಾರತ ಲಾಕ್ ಡೌನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲವೇ ಎಂದ ದೀದಿ! ಭಾರತ ಲಾಕ್ ಡೌನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲವೇ ಎಂದ ದೀದಿ!

"ಕೇಂದ್ರದಿಂದ ಯಾವುದೇ ಆರ್ಥಿಕ ನೆರವು ಬರದೇ ಇದ್ದಾಗ, ಹೇಗೆ ಸರಕಾರ ನಡೆಸಲು ಸಾಧ್ಯ. ಬರೀ ಭಾಷಣ ಮಾಡಿದರೆ ಸಾಲುವುದಿಲ್ಲ, ಜನರಿಗೆ ರೇಶನ್ ಕೂಡಾ ನೀಡಬೇಕು. ರೇಶನ್ ಅಂದರೆ ಬರೀ ಅಕ್ಕಿಯಲ್ಲ, ದೈನಂದಿನ ಜೀವನಕ್ಕೆ ಏನು ಬೇಕೋ ಅದನ್ನೆಲ್ಲಾ ಕೇಂದ್ರ ನೀಡಬೇಕು" ಎಂದು ಮಮತಾ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

Not Just Bhashan, Give Ration Also: Mamata Banerjee Swipe At Modi Government

"ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ಎಲ್ಲಾ ದಾರಿಗಳು ಬಂದ್ ಆಗಿವೆ. ರಾಜ್ಯ ಸರಕಾರದ ನೌಕರರಿಗೆ ವೇತನ ನೀಡಲು ಖಜಾನೆ ಖಾಲಿಯಾಗಿದೆ" ಎಂದು ಕೇಂದ್ರ ಸರಕಾರದ ವಿರುದ್ದ ಮಮತಾ ಕಿಡಿಕಾರಿದ್ದಾರೆ.

"ಕೇಂದ್ರ ಸರಕಾರದ ಎಲ್ಲಾ ಗೈಡ್ಲೈನ್ಸ್ ಗಳನ್ನು ನಾವು ಪಾಲಿಸುತ್ತೇವೆ. ಆದರೆ, ಎಲ್ಲವೂ ಪಾರದರ್ಶಕವಾಗಿರಬೇಕು ಮತ್ತು ಕೇಂದ್ರದ ಹಸ್ತಕ್ಷೇಪ ಇರಬಾರದು" ಎಂದು ಮಮತಾ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗಿದ್ದರೆ ಮೋದಿಗೆ ಖುಷಿಯೋ ಖುಷಿ: ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗಿದ್ದರೆ ಮೋದಿಗೆ ಖುಷಿಯೋ ಖುಷಿ: ಮಮತಾ ಬ್ಯಾನರ್ಜಿ

"ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಯಾವ ರೀತಿ ಲಾಕ್ ಡೌನ್ ಮುಂದುವರಿಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ" ಎಂದು ಮಮತಾ, ಮೋದಿ ಸರಕಾರದ ವಿರುದ್ದ ಹರಿಹಾಯ್ದಿದಿದ್ದಾರೆ.

English summary
Not Just Bhashan, Give Ration Also: Mamata Banerjee Swipe At Modi Government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X