• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

130 ಕೋಟಿ ಜನರನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲಾರದು: ಮೋದಿ

|

ಕೋಲ್ಕತಾ, ಜನವರಿ 23: ದೇಶವನ್ನು 'ಆತ್ಮನಿರ್ಭರ ಭಾರತ'ವನ್ನಾಗಿ ಮಾಡುವಲ್ಲಿ 130 ಕೋಟಿ ಭಾರತೀಯರನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ವಿಕ್ಟೋರಿಯಾ ಸ್ಮಾರಕದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನ ಆಚರಣೆ ಅಂಗವಾಗಿ ಶುಕ್ರವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಧನಕರ್ ಅವರ ವೇದಿಕೆ ಹಂಚಿಕೊಂಡರು.

ದೇಶಕ್ಕೆ ನಾಲ್ಕು ರಾಜಧಾನಿ ಬೇಕು: ಮಮತಾ ಬ್ಯಾನರ್ಜಿ ಒತ್ತಾಯ

'ಎರಡನೇ ವಿಶ್ವಯುದ್ಧ ಮತ್ತು ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ನಡುವೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಏಕೆ ಪ್ರತಿ ದೇಶಗಳಿಗೆ ತೆರಳಿ ಸಹಾಯ ಕೋರಿದರು? ಅದು ನಮ್ಮ ಸ್ವಾತಂತ್ರ್ಯಕ್ಕಾಗಿ! ಭಾರತದ ವಿಮೋಚನೆಗಾಗಿ! ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಋಣಿಯಾಗಿರಬೇಕು' ಎಂದು ಮೋದಿ ಹೇಳಿದರು.

'ಜಗತ್ತು ಎಲ್‌ಎಸಿಯಿಂದ ಎಲ್‌ಒಸಿವರೆಗಿನ ಭಾರತದ ಅವತಾರವನ್ನು ನೋಡುತ್ತಿದೆ. ಇಂದಿನ ಭಾರತವನ್ನು ಕಂಡು ನೇತಾಜಿ ಅವರು ಹೆಮ್ಮೆ ಪಡುತ್ತಾರೆ' ಎಂದು ತಿಳಿಸಿದರು. ಮುಂದೆ ಓದಿ.

ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ?

ಮಹಿಳೆಯರಲ್ಲಿ ಹೋರಾಟದ ಛಲ ಮೂಡಿಸಿದರು

ಮಹಿಳೆಯರಲ್ಲಿ ಹೋರಾಟದ ಛಲ ಮೂಡಿಸಿದರು

'ಜಗತ್ತು ಮಹಿಳೆಯರ ಮೂಲ ಹಕ್ಕುಗಳ ಬಗ್ಗೆ ಚರ್ಚೆ ಮಾಡುತ್ತಿರುವಾಗ ನೇತಾಜಿ ಅವರು ರಾಣಿ ಝಾನ್ಸಿ ರೆಜಿಮೆಂಟ್ ನಿರ್ಮಿಸಿ ಅವರನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಥಳಕು ಹಾಕಿದರು. ಅವರಿಗೆ ತರಬೇತಿ ನೀಡಿದರು. ದೇಶದ ಕುರಿತ ಒಲವು ಹಾಗೂ ಅದಕ್ಕಾಗಿ ಹೋರಾಡುವ ಛಲವನ್ನು ಮೂಡಿಸಿದರು' ಎಂದು ಮೋದಿ ಶ್ಲಾಘಿಸಿದರು.

ಪ್ರತಿ ವರ್ಷ ಪರಿಕ್ರಮ ದಿವಸ

ಪ್ರತಿ ವರ್ಷ ಪರಿಕ್ರಮ ದಿವಸ

'ಕೊರೊನಾ ವೈರಸ್ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಭಾರತವು ಇತರೆ ದೇಶಗಳಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ನೇತಾಜಿ ಹೆಮ್ಮೆ ಪಡುತ್ತಿದ್ದರು. ನೇತಾಜಿ ಅವರ ಕನಸುಗಳನ್ನು ಈಡೇರಿಸುವುದಾಗಿ ನಾವು ಭರವಸೆ ನೀಡುತ್ತೇವೆ. ನೇತಾಜಿ ಅವರ ಜನ್ಮದಿನವನ್ನು ನಾವು ಇನ್ನು ಪ್ರತಿ ವರ್ಷ ಪರಿಕ್ರಮ ದಿವಸವನ್ನಾಗಿ ಆಚರಿಸಲಿದ್ದೇವೆ' ಎಂದು ಮೋದಿ ತಿಳಿಸಿದರು.

ಪಶ್ಚಿಮ ಬಂಗಾಳ; "ಗೋಲಿಮಾರೋ" ಘೋಷಣೆ ಕೂಗಿದ ಮೂವರು ಬಿಜೆಪಿ ಕಾರ್ಯಕರ್ತರ ಬಂಧನ

ಮೋದಿ ಪರ ಘೋಷಣೆ

ಮೋದಿ ಪರ ಘೋಷಣೆ

ತೃಣಮೂಲ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಷಣಕ್ಕೆ ಎದ್ದು ನಿಂತಾಗ 'ಮೋದಿ ಮೋದಿ', 'ಭಾರತ್ ಮಾತಾ ಕಿ ಜೈ' ಎಂದು ಬೆಂಬಲಿಗರು ಕೂಗಿದರು. ಅದಕ್ಕೂ ಮೊದಲು ಮಮತಾ ಬ್ಯಾನರ್ಜಿ ಭಾಷಣಕ್ಕೆ ತೆರಳಿದಾಗಲೂ ಇದೇ ರೀತಿ ಘೋಷಣೆ ಕೂಗಿದರು. ಇದರಿಂದ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಮುಖಂಡರಿಗೆ ಇರಿಸುಮುರಿಸು ಉಂಟಾಯಿತು.

ಮಮತಾ ಅಸಮಾಧಾನ

ಮಮತಾ ಅಸಮಾಧಾನ

ಮಮತಾ ಬ್ಯಾನರ್ಜಿ ಅವರು ಮೋದಿ ಸಮ್ಮುಖದಲ್ಲಿ ವೇದಿಕೆಯಲ್ಲಿ ಮಾತನಾಡಲು ನಿರಾಕರಿಸಿದರು. ಪರಾಕ್ರಮ ದಿವಸ ಆಚರಣೆಯ ಘೋಷಣೆಗೂ ಮುನ್ನ ತಮ್ಮ ಸರ್ಕಾರವನ್ನು ಕೇಂದ್ರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮಮತಾ ಅಸಮಾಧಾನ ವ್ಯಕ್ತಪಡಿಸಿದರು.

English summary
PM Narendra Modi said no force in the world can stop 130 crore Indians from making Aatmanirbhar Bharat'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X