ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆ ಪ್ರಕರಣ: ಎನ್‌ಐಎಯಿಂದ ಟಿಎಂಸಿ ಮುಖಂಡನ ಬಂಧನ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 28: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್‌ಐಎ ತೃಣಮೂಲ ಕಾಂಗ್ರೆಸ್ ಮುಖಂಡ ಛತ್ರಧರ್ ಮಹತೊ ಎಂಬುವವರನ್ನು ಬಂಧಿಸಿದೆ. ಪಶ್ಚಿಮ ಬಂಗಾಳದಲ್ಲಿ 2009ರಲ್ಲಿ ನಡೆದಿದ್ದ ಸಿಪಿಐ-ಎಂ ನಾಯಕರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಛದ್ರಧರ್‌ ಅವರನ್ನು ಬಂಧಿಸಲಾಗಿದೆ.

2009ರಲ್ಲಿ ನಡೆದಿದ್ದ ಸಿಪಿಐ-ಎಂ ನಾಯಕ ಪ್ರಬೀರ್ ಮಹತೂ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಛತ್ರದರ್ ಮಹತೂ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮಬಂಗಾಳ: ಬಿಜೆಪಿ ಅಭ್ಯರ್ಥಿ ಅಣ್ಣನ ಮೇಲೆ ದಾಳಿ ನಡೆಸಿತಾ ಟಿಎಂಸಿ?ಪಶ್ಚಿಮಬಂಗಾಳ: ಬಿಜೆಪಿ ಅಭ್ಯರ್ಥಿ ಅಣ್ಣನ ಮೇಲೆ ದಾಳಿ ನಡೆಸಿತಾ ಟಿಎಂಸಿ?

ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಮತ್ತು ಮಾಜಿ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರ ಬೆಂಗಾವಲು ಪಡೆ ಗುರಿಯಾಗಿಸಿಕೊಂಡು ಸಾಲ್ಬೊನಿಯಲ್ಲಿ 2008ರಲ್ಲಿ ಮಾವೋವಾದಿಗಳು ನಡೆಸಿದ ಸ್ಫೋಟದಲ್ಲಿ ಭಾಗಿಯಾಗಿದ್ದಕ್ಕಾಗಿ 50 ವರ್ಷದ ಮಹತೊ ಈ ಹಿಂದೆ 10 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದರು.

 NIA Arrests TMC Leader Chhatradhar Mahato In Murder Case

ಮಹತೊ ಅವರು ಮಾವೋವಾದಿ ಬೆಂಬಲಿತ ಪಿಸಿಪಿಎ ಸಂಘಟನೆಯ ಸಂಚಾಲಕರಾಗಿದ್ದರು. ಜಾರ್ಗ್ರಾಮ್ ಜಿಲ್ಲೆಯಲ್ಲಿನ ಮನೆಯೊಂದರಿಂದ ತಲೆಮರೆಸಿಕೊಂಡಿದ್ದ ಮಹತೊ 40ರಿಂದ 45 ಜನರನ್ನೊಳಗೊಂಡ ಎನ್ ಎಐ ತಂಡ ಶನಿವಾರ ಬಂಧಿಸಿದೆ.

ಈ ಪ್ರಕರಣದ ತನಿಖೆಗೆ ಸಹಕರಿಸಲು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಮಹತೊ ಅವರನ್ನು ವಾರಕ್ಕೆ ಮೂರು ಬಾರಿ ಎನ್‌ಐಎ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸಿತ್ತು.

English summary
The National Investigation Agency (NIA) arrested Trinamool Congress leader Chhatradhar Mahato on Sunday in connection with the murder of a local CP I(M) leader in 2009 at Lalgarh in the Jangalmahal region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X