• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಅಲ್‌-ಖೈದಾ ಭಯೋತ್ಪಾದಕನ ಬಂಧನ

|

ಕೊಲ್ಕತ್ತಾ, ಸೆಪ್ಟೆಂಬರ್ 28: ಪಾಕಿಸ್ತಾನ ಪ್ರಾಯೋಜಿತ ಅಲ್-ಖೈದಾದ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಎನ್‌ಐಎ ಶನಿವಾರ ಜಲಂಗಿಯಲ್ಲಿರುವ ಅವರ ನಿವಾಸದಿಂದ ಶಮೀಮ್ ಅನ್ಸಾರಿ ಅವರನ್ನು ಬಂಧಿಸಿದೆ ಎಂದು ಅವರು ಹೇಳಿದರು.

ಜಮ್ಮು-ಕಾಶ್ಮೀರ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರಿಗೆ ಹೆಡೆಮುರಿ

"ಈ ಹಿಂದೆ ಬಂಧಿಸಲ್ಪಟ್ಟವರೊಂದಿಗೆ ಆತನ ಪಾಲ್ಗೊಳ್ಳುವಿಕೆಯನ್ನು ನಾವು ಕಂಡುಕೊಂಡಿದ್ದೇವೆ. ನಾವು ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದೇವೆ. ಅವರ ವಿಚಾರಣೆ ನಡೆಸಲಾಗುತ್ತಿದೆ" ಎಂದು ಅಧಿಕಾರಿ ಹೇಳಿದರು.

ಪಾಕಿಸ್ತಾನ ಪ್ರಾಯೋಜಿತ ಅಲ್-ಖೈದಾದ ಒಡನಾಟಕ್ಕಾಗಿ ಈ ಹಿಂದೆ ಪಶ್ಚಿಮ ಬಂಗಾಳದಿಂದ ಆರು ಮತ್ತು ಕೇರಳದ ಮೂವರನ್ನು ಸೇರಿ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅನ್ಸಾರಿ ಈ ಹಿಂದೆ ಕೆಲಸಕ್ಕಾಗಿ ಕೇರಳಕ್ಕೆ ಹೋಗಿ ತನ್ನೂರಿಗೆ ಮರಳಿದ್ದ ಎಂದು ತಿಳಿದುಬಂದಿದೆ.

English summary
NIA has arrested another person from West Bengal's Murshidabad district for his alleged involvement with a Pakistan-sponsored module of the al-Qaeda, a senior officer said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X