ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದಲ್ಲಿ ನೀಟ್ ಪರೀಕ್ಷಾರ್ಥಿಗಳಿಗಾಗಿ 66 ವಿಶೇಷ ಮೆಟ್ರೋ ರೈಲು

|
Google Oneindia Kannada News

ಕೋಲ್ಕತ್ತಾ, ಸಪ್ಟೆಂಬರ್.09: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಪ್ಟೆಂಬರ್.13ರಂದು ವಿಶೇಷ ಮೆಟ್ರೋ ರೈಲುಗಳ ಸೌಲಭ್ಯ ಒದಗಿಸುವುದಾಗಿ ಕೋಲ್ಕತ್ತಾ ಮೆಟ್ರೋ ಪ್ರಾಧಿಕಾರವು ತಿಳಿಸಿದೆ.

2020ನೇ ಸಾಲಿನ ನೀಟ್ ಪರೀಕ್ಷೆ ಬರೆಯುವುದಕ್ಕೆ ಹೊರಡುವ ವಿದ್ಯಾರ್ಥಿಗಳಿಗೆ ಮೆಟ್ರೋ ಸೇವೆ ಒದಗಿಸುವ ಬಗ್ಗೆ ಪ್ರಾಧಿಕಾರವು ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ಮೆಟ್ರೋ ಟೋಕನ್ ನೀಡುವ ವ್ಯವಸ್ಥೆ ಇರುವುದಿಲ್ಲ. 2020ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆಯುವುದಕ್ಕೆ 15.97 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ದೇಶಾದ್ಯಂತ ನೀಟ್ ಪರೀಕ್ಷೆಗಾಗಿ 3842 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ನೀಟ್ ಪರೀಕ್ಷೆಗೆ ಅಡ್ಡಿಯಿಲ್ಲ: ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರನೀಟ್ ಪರೀಕ್ಷೆಗೆ ಅಡ್ಡಿಯಿಲ್ಲ: ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ

ನೀಟ್ ಪರೀಕ್ಷಾ ಪ್ರಮಾಣ ಪತ್ರವನ್ನು ಮೆಟ್ರೋ ನಿಲ್ದಾಣದ ದ್ವಾರದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೋಲ್ಕತ್ತಾ ಮೆಟ್ರೋ ಪ್ರಾಧಿಕಾರವು ತಿಳಿಸಿದೆ.

NEET 2020: 66 Special Metro Trains Service To Help Students


ಸಪ್ಟೆಂಬರ್.13ರಂದು 66 ಮೆಟ್ರೋ ರೈಲುಗಳ ಸಂಚಾರ:

ನೀಟ್ ಪರೀಕ್ಷೆಗಳು ನಡೆಯುವ ಸಪ್ಟೆಂಬರ್.13ರಂದು ಕೋಲ್ಕತ್ತಾದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೂ 66 ಮೆಟ್ರೋ ರೈಲುಗಳು ಸಂಚರಿಸಲಿವೆ. ನೋಬಾರಾ ಕಡೆಯಿಂದ 33 ಮತ್ತು ಕಾವಿ ಸುಭಾಶ್ ನಿಲ್ದಾಣದ ಕಡೆಯಿಂದ 33 ಬಾರಿ ಮೆಟ್ರೋ ಸಂಚಾರ ನಡೆಸಲಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಕೋಲ್ಕತ್ತಾದಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಅನುಮತಿ ನೀಡಿರಲಿಲ್ಲ.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

English summary
NEET 2020: 66 Special Metro Trains Service To Help Students On Sept.13 At Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X