ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ-ಮಮತಾ ಬ್ಯಾನರ್ಜಿ ಭೇಟಿ

|
Google Oneindia Kannada News

ಕೊಲ್ಕತ್ತಾ, ಜನವರಿ 11: ಒಬ್ಬರ ವಿರುದ್ಧ ಮತ್ತೊಬ್ಬರು ಭರಪೂರ ಟೀಕಾ ಪ್ರಹಾರಗಳನ್ನು ಮಾಡಿಕೊಳ್ಳುವ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರಸ್ಪರ ಭೇಟಿ ಮಾಡಿದ್ದಾರೆ.

ಸಿಎಎ ವಿರುದ್ಧ ದೇಶದಾದ್ಯಂತ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಹೆಚ್ಚಾಗಿ ನಡೆಯುತ್ತಿರುವ ವೇಳೆಯೇ ಈ ಭೇಟಿ ನಡೆದಿರುವುದು ಭಾರಿ ಕುತೂಹಲ ಕೆರಳಿಸಿದೆ.

ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಕಾರ್ಯಕ್ರಮಕ್ಕಾಗಿ ಭೇಟಿ ನೀಡಿದ್ದು, ಕೊಲ್ಕತ್ತಾದ ರಾಜ ಭವನದಲ್ಲಿ ಪ್ರಧಾನಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ಮಾಡಿದ್ದಾರೆ.

Narendra Modi Mamata Banarjee Met In Kolkatta

ಕೋಲ್ಕತ್ತಾ ಬಂದರು ಟ್ರಸ್ಟ್‌ನ 150 ನೇ ವಾರ್ಷಿಕೋತ್ಸವ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿಯಾಗಲಿದ್ದು, ಕೆಲವು ಕಾರ್ಯಕ್ರಮಗಳಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸಹ ಮೋದಿ ಅವರಿಗೆ ಜೊತೆಯಾಗಲಿದ್ದಾರೆ.

'ಸಿಎಎ ಪಶ್ಚಿಮ ಬಂಗಾಳದಲ್ಲಿ ಜಾರಿ ಆಗಲು ಬಿಡುವುದಿಲ್ಲ, ಸಿಎಎ-ಎನ್‌ಆರ್‌ಸಿ ಜಾರಿ ಆಗುವುದಾದರೆ ನನ್ನ ಶವದ ಮೇಲೆ ಆಗಲಿ' ಎಂದು ಮಮತಾ ಬ್ಯಾನರ್ಜಿ ಅವರು ಇತ್ತೀಚೆಗಷ್ಟೆ ಅಬ್ಬರಿಸಿದ್ದರು. ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಮಮತಾ ಬ್ಯಾನರ್ಜಿ ನಡೆಯನ್ನು ಟೀಕಸಿದ್ದರು.

English summary
Prime minister Narendra Modi West Bengal CM Mamata Banarjee met in West Bengal today. Modi visit West Bengal for two day tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X