ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರದ ಸ್ಟಿಂಗ್ ಪ್ರಕರಣ: ಪಶ್ಚಿಮ ಬಂಗಾಳದ ಇಬ್ಬರು ಸಚಿವರ ಸಹಿತ ನಾಲ್ವರನ್ನು ಬಂಧಿಸಿದ ಸಿಬಿಐ

|
Google Oneindia Kannada News

ಕೊಲ್ಕತ್ತಾ, ಮೇ 17: ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಇಂದು ಸಿಬಿಐ ಇಬ್ಬರು ಸಚಿವರ ಸಹಿತ ನಾಲ್ವರನ್ನು ಬಂಧಿಸಿದೆ. ಪಶ್ಚಿಮ ಬಂಗಾಳದ ಕ್ಯಾಬಿನೆಟ್ ಸಚಿವರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಜೊತೆಗೆ ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಮಾಜಿ ಸಚಿವ ಸೋವನ್ ಚಟರ್ಜಿ ಅವರನ್ನು ಬಂಧಿಸಲಾಗಿದೆ.

ಈ ಬೆಳವಣಿಗೆ ಆದ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಗೆ ಧಾವಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಮಾಹಿತಿಯಿರುವ ಟಿಎಂಸಿ ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದು "ಮಮತಾ ಸಿಬಿಐ ಅಧಿಕಾರಿಗಳಲ್ಲಿ ತನ್ನನ್ನು ಕೂಡ ಬಂಧಿಸಬೇಕು" ಎಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

'ನಾರದಾ ಸ್ಟಿಂಗ್': 13 ಟಿಎಂಸಿ ನಾಯಕರ ಮೇಲೆ ಸಿಬಿಐನಿಂದ ಎಫ್ಐಆರ್'ನಾರದಾ ಸ್ಟಿಂಗ್': 13 ಟಿಎಂಸಿ ನಾಯಕರ ಮೇಲೆ ಸಿಬಿಐನಿಂದ ಎಫ್ಐಆರ್

2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಾರದ ನ್ಯೂಸ್ ಪೋರ್ಟಲ್ ರಹಸ್ಯ ಕಾರ್ಯಾಚರಣೆಯೊಂದನ್ನು ನಡೆಸಿತ್ತು. ಈ ಸ್ಟಿಂಗ್ ಆಪರೇಶನ್‌ನಲ್ಲಿ ಟಿಎಂಸಿ ಪಕ್ಷದ ಕೆಲ ಪ್ರಮುಖ ನಾಯಕರು ಲಂಚವನ್ನು ಸ್ವೀಕರಿಸಿರುವುದು ದಾಖಲಾಗಿತ್ತು. 2017ರಲ್ಲಿ ಈ ಪ್ರಕರಣವನ್ನು ಕೋರ್ಟ್ ಸಿಬಿಐಗೆ ವಹಿಸಿತ್ತು.

Narada sting case: 2 ministers 1 MLA and 1 former minister arrested by CBI

ಬಂಧನಕ್ಕೊಳಗಾದ ನಾಲ್ವರು ಕೂಡ ಸೋಮವಾರ ಸಂಜೆ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 120 ಬಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 13 (1)(ಎ) 13 (1)(ಬಿ) ಅಡಿಯಲ್ಲಿ ಇವರ ಬಂಧನವಾಗಿದೆ.

ಇನ್ನು ತೃಣಮೂಲ ಕಾಂಗ್ರೆಸ್ ಇತ್ತೀಚಿನ ವಿಧಾನ ಸಭಾ ಸೋಲಿನಲ್ಲಿ ಬಿಜೆಪಿ ಸೋಲು ಕಂಡಿರುವುದಕ್ಕೆ ಈ ರೀತಿಯಾಗಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪವನ್ನು ಮಾಡಿದೆ.

English summary
Narada sting operation case, 2 West Bengal ministers 1 MLA and 1 former minister arrested in kolkata by CBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X