ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಧೀಶ: ದೀದಿಗೆ 5 ಲಕ್ಷ ದಂಡ

|
Google Oneindia Kannada News

ಕೋಲ್ಕತ್ತಾ, ಜು. 07: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಂದಿಗ್ರಾಮ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅರ್ಜಿ ವಿಚಾರಣೆಯಿಂದ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೌಶಿಕ್ ಚಂದಾ ಬುಧವಾರ ಹಿಂದೆ ಸರಿದಿದ್ದಾರೆ.

ಆದರೆ ಈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾಯಮೂರ್ತಿಗಳನ್ನು ಕೇಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ದೀದಿಗೆ ಕೋಲ್ಕತ್ತಾ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

 ಚುನಾವಣಾ ನಂತರದ ಹಿಂಸಾಚಾರ: ದೀದಿ ಸರ್ಕಾರ‌ದ ವಿರುದ್ದ ಹೈಕೋರ್ಟ್ ತರಾಟೆ ಚುನಾವಣಾ ನಂತರದ ಹಿಂಸಾಚಾರ: ದೀದಿ ಸರ್ಕಾರ‌ದ ವಿರುದ್ದ ಹೈಕೋರ್ಟ್ ತರಾಟೆ

''ಅರ್ಜಿದಾರರ ಪ್ರಕರಣವನ್ನು ಆಲಿಸಲು ನನಗೆ ಯಾವುದೇ ವೈಯಕ್ತಿಕ ಒಲವು ಇಲ್ಲ. ಹಾಗೆಯೇ ಈ ಪ್ರಕರಣವನ್ನು ತೆಗೆದುಕೊಳ್ಳಲು ನನಗೆ ಯಾವುದೇ ಹಿಂಜರಿಕೆಯೂ ಇಲ್ಲ. ಸಿಜೆ ನನಗೆ ನಿಯೋಜಿಸಿರುವ ಪ್ರಕರಣವನ್ನು ಆಲಿಸುವುದು ನನ್ನ ಸಾಂವಿಧಾನಿಕ ಕರ್ತವ್ಯವಾಗಿದೆ. ಆದರೆ ಈ ಪ್ರಕರಣದಿಂದ ನಾನು ಹಿಂದೆ ಸರಿಯಲು ನಿರ್ಧರಿಸಿದ್ದೇನೆ,'' ಎಂದು ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೌಶಿಕ್ ಚಂದಾ ಹೇಳಿದ್ದಾರೆ.

Nandigram Recount Case: Calcutta HC Judge Recuses From Hearing Mamata’s Plea, Slaps Rs 5 Lakh Fine

ನನ್ನ ಮುಂದೆ ಪ್ರಕರಣ ವಿಚಾರಣೆಗೆ ಜೂ.18ರಂದು ಬಂದಾಗ ಈ ಪ್ರಕರಣದಿಂದ ಹಿಂದೆ ಸರಿಯುವಂತೆ ಯಾವ ಮನವಿಯನ್ನೂ ಮಾಡಲಾಗಿಲ್ಲ. ಆದರೆ, ವಿಚಾರಣೆಯ ಬಳಿಕ ತೃಣಮೂಲ ಕಾಂಗ್ರೆಸ್‌ನ ನಾಯಕರು ಬಿಜೆಪಿಯೊಂದಿಗಿನ ನಂಟನ್ನು ತೋರಿಸುವ ಫೋಟೋಗಳು, ಮಾಹಿತಿಯ ಬಗ್ಗೆ ಅನೇಕ ಟ್ವೀಟ್‌ಗಳನ್ನು ಮಾಡಿದ್ದಾರೆ ಎಂದಿದ್ದಾರೆ.

ಪ್ರಧಾನಿ ಮೋದಿಗೆ ಬಂಗಾಳದ ಸಿಹಿ ಮಾವು ಕಳುಹಿಸಿದ ಸಿಎಂ ದೀದಿ ಪ್ರಧಾನಿ ಮೋದಿಗೆ ಬಂಗಾಳದ ಸಿಹಿ ಮಾವು ಕಳುಹಿಸಿದ ಸಿಎಂ ದೀದಿ

ನ್ಯಾಯಮೂರ್ತಿ ಕೌಶಿಕ್ ಚಂದಾ ಸಕ್ರಿಯ ಬಿಜೆಪಿ ಸದಸ್ಯರಾಗಿದ್ದರಿಂದ ವಿಚಾರಣೆಯ ಸಮಯದಲ್ಲಿ ಯಾವುದೇ ಪೂರ್ವಾಗ್ರಹವನ್ನು ತಪ್ಪಿಸುವ ಸಲುವಾಗಿ ಈ ಪ್ರಕರಣದ ವಿಚಾರಣೆಯಿಂದ ಚಂದಾರನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಜೂನ್ 24 ರಂದು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಮನವಿ ಸಲ್ಲಿಸಿದ್ದರು.

ತಾವು ಈ ಪ್ರಕರಣದಿಂದ ಹಿಂದೆ ಸರಿಯುವ ಬಗ್ಗೆ ಮಾತನಾಡಿದ ಚಂದಾ, ನ್ಯಾಯಮೂರ್ತಿಗಳು ಕೂಡಾ ಮತದಾನದ ಹಕ್ಕನ್ನು ಹೊಂದಿದ್ದಾರೆ. ರಾಜಕೀಯ ಒಲವನ್ನು ಕೂಡಾ ಹೊಂದಿರುತ್ತಾರೆ. ಈ ಹಿಂದೆ ಒಂದು ರಾಜಕೀಯ ಪಕ್ಷದೊಂದಿಗೆ ಓರ್ವ ನ್ಯಾಯಮೂರ್ತಿ ಗುರುತಿಸಿಕೊಂಡಿದ್ದರು ಎಂಬ ಕಾರಣಕ್ಕೆ ಪಕ್ಷಪಾತ ಮಾಡಬಹುದು ಎನ್ನುವುದು ಸರಿಯಲ್ಲ ಎಂದೂ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಯ ವಿರುದ್ದದ ಗೆಲುವನ್ನು ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಎಣಿಕೆಯ ಪ್ರಕ್ರಿಯೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು (ಇವಿಎಂ) ಮತ್ತು ಫೌಲ್ ಪ್ಲೇ ಅನ್ನು ಹಾಳು ಮಾಡಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ.

ಜೂನ್ 18 ರಂದು, ಮಮತಾ ಬ್ಯಾನರ್ಜಿ ವಕೀಲರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದಿದ್ದಾರೆ. ಪ್ರಸ್ತುತ ನ್ಯಾಯಮೂರ್ತಿ ಕೌಶಿಕ್ ಚಂದಾ ಏಕ-ನ್ಯಾಯಾಧೀಶರ ಪೀಠದ ಮುಂದೆ ಇರುವ ನಂದಿಗ್ರಾಮ ಮರು ಎಣಿಕೆ ಪ್ರಕರಣ ವಿಚಾರಣೆಯನ್ನು ಮರು ನಿಯೋಜಿಸುವಂತೆ ಕೋರಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Nandigram Recount Case: Calcutta HC Judge Recuses From Hearing Mamata’s Plea, Slaps Rs 5 Lakh Fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X