ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ನಾಲ್ವರು ಶಾಸಕರು ಶೀಘ್ರ ಟಿಎಂಸಿ ಸೇರುವ ನಿರೀಕ್ಷೆ

|
Google Oneindia Kannada News

ಕೋಲ್ಕತ್ತಾ, ಅಕ್ಟೋಬರ್ 07: ಬಿಜೆಪಿಯ ನಾಲ್ವರು ಶಾಸಕರು ಶೀಘ್ರವೇ ಟಿಎಂಸಿ ಸೇರುವ ನಿರೀಕ್ಷೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ ಶಾಸಕರ ಸಂಖ್ಯೆ 69 ಕ್ಕಿಂತ ಕೆಳಕ್ಕೆ ಇಳಿದರೆ, ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಕುಸಿಯುತ್ತದೆ. ಪ್ರಸ್ತುತ ಬಲದಿಂದ, ಬಿಜೆಪಿ ಇಬ್ಬರು ಸದಸ್ಯರನ್ನು ಸಂಸತ್ತಿನ ಮೇಲ್ಮನೆಗೆ ಕಳುಹಿಸಬಹುದು.

 ದೀದಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್‌ ಹೆಸರು ಸೇರ್ಪಡೆ ದೀದಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಚುನಾವಣಾ ಚಾಣಕ್ಯ ಪ್ರಶಾಂತ್‌ ಹೆಸರು ಸೇರ್ಪಡೆ

ಈ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಜತೆ ಚರ್ಚಿಸಬೇಕೆಂದು ಬಂಗಾಳದ ಬಿಜೆಪಿ ಹಿರಿಯ ನಾಯಕರು ಒತ್ತಾಯಿಸುತ್ತಿದ್ದಾರೆ.

More BJP Legislators In West Bengal Likely To Switch To Trinamool

ಬಿಜೆಪಿ ಈ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದೆ. ಈ ನಾಲ್ವರು ಶಾಸಕರು ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

ಆದರೂ, ತೃಣಮೂಲ ಕಾಂಗ್ರೆಸ್​​ ನಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ. ಬಿಜೆಪಿ ಶಾಸಕರು ಯಾರೂ ಪಕ್ಷ ತೊರೆಯುತ್ತಿಲ್ಲ. ವದಂತಿಗಳೆಲ್ಲ ನಿರಾಧಾರವಾಗಿವೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಇದೇ ವರ್ಷ ನಡೆದ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ 77 ಶಾಸಕರು ಆಯ್ಕೆಯಾದರು. ಅದರಲ್ಲಿ ನಿಶಿತ್​ ಪ್ರಮಾಣಿಕ ಮತ್ತು ಜಗನ್ನಾಥ್ ಸರ್ಕಾರ್ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ನಾಲ್ವರು ಎಂಎಲ್​ಎಗಳು ರಾಜೀನಾಮೆ ನೀಡಿದ್ರು. ಶಾಸಕ ಕೃಷ್ಣ ಕಲ್ಯಾಣಿ ಪಕ್ಷ ತೊರೆದಿದ್ದು ಸದ್ಯ ಬಿಜೆಪಿಯಲ್ಲಿ 70 ಶಾಸಕರಿದ್ದಾರೆ.

ಕೃಷ್ಣ ಕಲ್ಯಾಣಿ ಕೂಡ ಟಿಎಂಸಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಬಿಜೆಪಿ ಹೆಚ್ಚು ಶಾಸಕರನ್ನು ಕಳೆದುಕೊಂಡರೆ, ಪಕ್ಷಕ್ಕೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖರಗ್‌ಪುರದ ಹಿರಣ್ ಚಟ್ಟೋಪಾಧ್ಯಾಯ, ಡಾರ್ಜಿಲಿಂಗ್‌ನ ನೀರಜ್ ಜಿಂಬಾ, ಕೂಚ್ ಬೆಹಾರ್ (ಉತ್ತರ)ದ ಸುಕುಮಾರ್ ರಾಯ್ ಮತ್ತು ಬಂಕುರಾ ಜಿಲ್ಲೆಯ ಸೋನಾಮುಖಿಯಿಂದ ದಿವಾಕರ್ ಘರಾಮಿ ಬಿಜೆಪಿ ತೊರೆಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗ್ತಿದೆ.

ನಾಲ್ವರು ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಮಾತ್ರವಲ್ಲದೇ, ರಾಜ್ಯ ಬಿಜೆಪಿ ಘಟಕಕ್ಕೆ ನೇಮಕಗೊಂಡಿದ್ದ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮಕ್ಕೂ ಇವರು ಹಾಜರಾಗಿರಲಿಲ್ಲ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್​ ಘೋಷ್, ಸಭೆಯಲ್ಲಿ ಎಲ್ಲರೂ ಹಾಜರಿರುವಂತೆ ಸೂಚಿಸಿದ್ದರೂ ಇವರು ಹಾಜರಾಗಿರಲಿಲ್ಲ. ಶಾಸಕರ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬಾಗ್ದಾ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್ ಅವ ಮತ್ತೆ ಟಿಎಂಸಿ ಸೇರ್ಪಡೆಯಾಗಿದ್ದರು. ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಕೇಸರಿ ಪಕ್ಷ ತೊರೆಯುತ್ತಿರುವ ಮೂರನೇ ಶಾಸಕರಾಗಿದ್ದಾರೆ. ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದ ದಾಸ್ 2019ರಲ್ಲಿ ಬಿಜೆಪಿ ಸೇರಿದ್ದರು. ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಬಾಗ್ದಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ಮತ್ತೊಬ್ಬ ಬಿಜೆಪಿ ಶಾಸಕ ತನ್ಮಯ್ ಘೋಷ್ ಅವರು ಟಿಎಂಸಿಗೆ ಮರಳಿದ್ದರು. ಈ ಹಿಂದೆ, ಜೂನ್ ನಲ್ಲಿ, ಬಿಜೆಪಿ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತೊರೆದು ನಾಲ್ಕು ವರ್ಷಗಳ ನಂತರ ಮತ್ತೆ ಟಿಎಂಸಿಗೆ ಸೇರಿಕೊಂಡಿದ್ದರು.

English summary
The exodus of BJP lawmakers to West Bengal’s ruling Trinamool Congress is not going to stop easily. After speculations of Sabhasachi Dutta leaving the party, there are strong indications that four more legislators are likely to switch camps, compelling BJP President J.P. Nadda to intervene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X