ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಇಳಿಕೆ ಚುನಾವಣಾ ಸ್ಟಂಟ್ ಎಂದ ಮಮತಾ

|
Google Oneindia Kannada News

ಕೋಲ್ಕತ್ತಾ ಮೇ 23: ಉಜ್ವಲ ಯೋಜನೆಯಡಿ ಇಂಧನ ಮತ್ತು ಅಡುಗೆ ಅನಿಲದ ಮೇಲಿನ ಸಬ್ಸಿಡಿಯಲ್ಲಿ ಕೇಂದ್ರದ ಇತ್ತೀಚಿನ ಕಡಿತವನ್ನು ಚುನಾವಣಾ ಸ್ಟಂಟ್ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಬಡತನ ಮಟ್ಟಕ್ಕಿಂತ ಕೆಳಗಿರುವ (ಬಿಪಿಎಲ್ ವರ್ಗ) ಕೆಲವೇ ಜನರು ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಇದರೊಂದಿಗೆ ಮಮತಾ ಬ್ಯಾನರ್ಜಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿದೆ. ಮಮತಾ ಬ್ಯಾನರ್ಜಿ ಅವರು ಪೆಟ್ರೋಲ್ ಮೇಲೆ 2.80 ರೂಪಾಯಿ ಮತ್ತು ಡೀಸೆಲ್ ಮೇಲೆ 2.03 ರೂಪಾಯಿ ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಸಚಿವರ ಮಗಳನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಿದ ಹೈಕೋರ್ಟ್ಸಚಿವರ ಮಗಳನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಿದ ಹೈಕೋರ್ಟ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಇಂಧನ ದರವನ್ನು ಕಡಿತಗೊಳಿಸಿರುವುದು ಮತ್ತು ಉಜ್ವಲ ಯೋಜನೆಯಡಿ ಅಡುಗೆ ಅನಿಲದ ಮೇಲೆ 200 ರೂ.ಗಳ ಸಬ್ಸಿಡಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದರು, "ಅವರು (ಬಿಜೆಪಿ) ಯಾವುದೇ ಚುನಾವಣೆಯಲ್ಲಿ ಜನರಿಗೆ ಸುಳ್ಳಿ ಹೇಳಿ ಮತ ಚಲಾಯಿಸಿಕೊತ್ತಾರೆ. ಉಜ್ವಲ ಯೋಜನೆಯಡಿಯಲ್ಲಿ ಬಿಪಿಎಲ್ ವರ್ಗದ ಒಂದು ಸಣ್ಣ ಭಾಗ ಮಾತ್ರ ಇದೆ. ಬಡವರು ₹800 ನೀಡಿ ಗೃಹಬಳಕೆಯ ಗ್ಯಾಸ್ ಖರೀದಿಸುವುದು ಹೇಗೆ?' ಎಂದು ಪ್ರಶ್ನಿಸಿದ ಸಿಎಂ ಬ್ಯಾನರ್ಜಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇಂಧನ ದರಗಳಲ್ಲಿ ಇಳಿಕೆ ಮತ್ತು ಅಡುಗೆ ಅನಿಲದ ಮೇಲೆ 200 ರೂ.ಗಳ ಸಬ್ಸಿಡಿಯನ್ನು ಘೋಷಿಸಿದರು.

Mamata says oil price drop is an election stunt

ಅಷ್ಟೇ ಅಲ್ಲ, ರಾಜ್ಯದ ವ್ಯವಹಾರಗಳಲ್ಲಿ ಕೇಂದ್ರೀಯ ಸಂಸ್ಥೆಗಳ ಬಳಕೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡರು. ''ಭಾರತದ ಒಕ್ಕೂಟ ರಚನೆಯನ್ನು ಬಿಜೆಪಿ ಸರಕಾರ ನಾಶ ಮಾಡುತ್ತಿದೆ. ಏಜೆನ್ಸಿಗಳನ್ನು ಬಳಸಿಕೊಂಡು ರಾಜ್ಯದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಮಾಡುತ್ತಿದೆ. ಈ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಬೇಕು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ''

Mamata says oil price drop is an election stunt

ಕೇಂದ್ರ ಸರ್ಕಾರ ಅಬಕಾರಿ ತೆರಿಗೆಯಲ್ಲಿ ಕಡಿತವನ್ನು ಘೋಷಿಸುತ್ತದೆ. ಆದರೆ ಹೆಚ್ಚುವರಿ ಶುಲ್ಕವನ್ನು ಎಂದಿಗೂ ಕಡಿತಗೊಳಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಏಕೆಂದರೆ ಕೇಂದ್ರ ಸರ್ಕಾರ ಹೆಚ್ಚುವರಿ ಶುಲ್ಕದ ಸಂಪೂರ್ಣ ಮೊತ್ತವನ್ನು ಪಡೆಯುತ್ತದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹಣ ನೀಡಿದರೆ, ವಿರೋಧ ಪಕ್ಷದ ರಾಜ್ಯಗಳಿಗೆ ಹಣ ನೀಡುವುದಿಲ್ಲ. ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ನಂತರವೂ ಮೋದಿ ಸರಕಾರ ಇಂಧನ ಬೆಲೆಯನ್ನು ಇಳಿಸಿಲ್ಲ. ದೇಶದ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

English summary
West Bengal chief minister and Trinamool Congress chief Mamata Banerjee on Monday said the Center's latest cut in fuel and cooking gas subsidy is an election stunt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X