ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ದ ಮಮತಾ ದೀದಿಯ ಮುಂದುವರಿದ ಅಸಹಿಷ್ಣುತೆ

|
Google Oneindia Kannada News

Recommended Video

ಬಿಜೆಪಿ ವಿರುದ್ದ ಮಮತಾ ದೀದಿಯ ಮುಂದುವರಿದ ಅಸಹಿಷ್ಣುತೆ | Oneindia Kannada

ಕೋಲ್ಕತ್ತಾ, ಫೆ 6: ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಬಿಜೆಪಿ ಮುಖಂಡರ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಅನುಮತಿ ನಿರಾಕರಿಸುವ ಪಶ್ಚಿಮ ಬಂಗಾಳದ ಪರ್ವ ಮುಂದುವರಿದಿದೆ.

ಅಮಿತ್ ಶಾ, ಯೋಗಿ ಆದಿತ್ಯನಾಥ್ ನಂತರ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಇದರ ಬಿಸಿಮುಟ್ಟಿದೆ. ಬುಧವಾರ (ಫೆ 6) ರಾಜ್ಯದ ಬೆಹ್ರಾಂಪುರ ನಗರದಲ್ಲಿನ ಸಾರ್ವಜನಿಕ ಸಭೆಯಲ್ಲಿ ಶಿವರಾಜ್ ಸಿಂಗ್ ಭಾಗವಹಿಸ ಬೇಕಾಗಿತ್ತು.

ಮೋದಿ ಭೀತಿಯಲ್ಲಿ ದೀದಿ? ಕೋಲ್ಕತ್ತಾದಲ್ಲಿ ಪ್ರಜಾತಂತ್ರದ ಭಾರೀ ಅಣಕಮೋದಿ ಭೀತಿಯಲ್ಲಿ ದೀದಿ? ಕೋಲ್ಕತ್ತಾದಲ್ಲಿ ಪ್ರಜಾತಂತ್ರದ ಭಾರೀ ಅಣಕ

ಸುದ್ದಿಗಾರರೊಂದಿಗೆ ಈ ಸಂಬಂಧ ಮಾತನಾಡಿದ ಶಿವರಾಜ್ ಸಿಂಗ್, ಬಿಜೆಪಿ ಮೇಲಿನ ಭಯದಿಂದ ಮಮತಾ ಸರಕಾರ ಇಂತಹ ಕ್ರಮಕ್ಕೆ ಮುಂದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ತಮ್ಮ ಅಭಿಪ್ರಾಯವನ್ನು ಮಂಡಿಸಲು ಅವಕಾಶವಿದೆ ಎಂದು ಚೌಹಾಣ್ ಹೇಳಿದ್ದಾರೆ.

Mamata government denies permission to land chopper of Shivraj Singh Chouhan

ಬೆಹ್ರಾಂಪುರದಲ್ಲಿ ಪಕ್ಷದ ಸಭೆಯನ್ನು ಆಯೋಜಿಸಲಾಗಿದೆ. ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡದೇ ಇರುವುದು ಒಂದು ಮತ್ತು ಸಭೆ ನಡೆಸುವ ಸ್ಥಳಕ್ಕೂ ಮಮತಾ ಸರಕಾರ ಅನುಮತಿ ನಿರಾಕರಿಸುವ ಮೂಲಕ ಉದ್ದಟತನ ತೋರಿದೆ ಎಂದು ಶಿವರಾಜ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆ ದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆ

ಮಂಗಳವಾರ (ಫೆ 5) ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಣಿಸುವ ಹೆಲಿಕಾಪ್ಟರ್ ಇಳಿಸಲು ಮಮತಾ ನಿರಾಕರಿಸಿತ್ತು.

ಹಾಗಾಗಿ, ಪುರುಲಿಯಾದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಗೆ ಯೋಗಿ ಆದಿತ್ಯನಾಥ್, ರಾಂಚಿ ಮೂಲಕ ವಿಮಾನದಲ್ಲಿ ಬಂದು, ಅಲ್ಲಿಂದ ಬೊಕಾರೋ (ಜಾರ್ಖಂಡ್ ವ್ಯಾಪ್ತಿ) ವರೆಗೆ ಹೆಲಿಕಾಪ್ಟರ್ ಬಲ್ಲಿ ಬಂದು ಅಲ್ಲಿಂದ ರಸ್ತೆಯ ಮೂಲಕ ಸಭೆಯ ಸ್ಥಳಕ್ಕೆ ಯೋಗಿ ಆಗಮಿಸಿದ್ದರು.

ಪಶ್ಚಿಮ ಬಂಗಾಳದ ನೆಲದಲ್ಲಿ ಬಿಜೆಪಿ ನಾಯಕರ ಸಾರ್ವಜನಿಕ ಸಭೆಗೆ, ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಒಂದಲ್ಲಾ ಒಂದು ತೊಂದರೆ ಕೊಡುವ ಮಮತಾ ಬ್ಯಾನರ್ಜಿ ಸರಕಾರದ ಹಠಮಾರಿ ಧೋರಣೆ ಮುಂದುವರಿಯುತ್ತಲೇ ಇದೆ.

English summary
Mamata Banerjee government in West Bengal denies permission to land chopper, said former Madya Pradesh CM Shivraj Singh Cahuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X