ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ದರ ಏರಿಕೆ; ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

|
Google Oneindia Kannada News

ಕೋಲ್ಕತ್ತಾ, ಜುಲೈ 05: ದೇಶದಲ್ಲಿ ನಿರಂತರವಾಗಿ ಇಂಧನ ದರ ಏರಿಕೆಯಾಗುತ್ತಿರುವುದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಜುಲೈ 05ರಂದು ಪೆಟ್ರೋಲ್ ಬೆಲೆ ಸರಾಸರಿ 31 ರಿಂದ 39 ಪೈಸೆ ಪ್ರತಿ ಲೀಟರ್ ಏರಿಕೆ ಕಂಡಿದೆ. ಈ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ.

ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ, 100 ರು ಕ್ಲಬ್‌ನತ್ತ ದೆಹಲಿ, ಕೋಲ್ಕತಾಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ, 100 ರು ಕ್ಲಬ್‌ನತ್ತ ದೆಹಲಿ, ಕೋಲ್ಕತಾ

ಇಂಧನ ದರ ಏರಿಕೆಯನ್ನು "ಕ್ರೂರ" ಎಂದು ಕರೆದಿರುವ ಮಮತಾ ಬ್ಯಾನರ್ಜಿ, "ದರ ಏರಿಕೆ ಜನರಿಗೆ ದೊಡ್ಡ ಸಂಕಟ ತಂದಿದೆ. ಮೇ ತಿಂಗಳಿನಿಂದ ಇಂಧನ ದರವನ್ನು ಎಂಟು ಬಾರಿ ಏರಿಕೆ ಮಾಡಲಾಗಿದೆ. ಜೂನ್ ತಿಂಗಳೊಂದರಲ್ಲಿಯೇ ಆರು ಬಾರಿ ಬೆಲೆ ಏರಿಕೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

Mamata Banerjee Writes Letter To PM On Fuel Prices

"ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂ ಗಡಿ ದಾಟಿದೆ" ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಕೊರೊನಾದಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಇಂಧನ ದರ ಇಳಿಕೆ ಮಾಡುವುದು ಜನರಿಗೆ ಅತ್ಯವಶ್ಯಕವಾಗಿದೆ ಎಂದಿದ್ದಾರೆ.

ದೇಶದ ಒಟ್ಟಾರೆ ಹಣದುಬ್ಬರಕ್ಕೆ ಇಂಧನ ದರ ಏರಿಕೆಯನ್ನು ತಳಕು ಹಾಕಿರುವ ಮಮತಾ ಬ್ಯಾನರ್ಜಿ, "ಬೆಲೆ ಏರಿಕೆ ಸಾಮಾನ್ಯ ಜನರ ಆದಾಯವನ್ನು ತಗ್ಗಿಸುತ್ತದೆ" ಎಂದಿದ್ದಾರೆ. "ಕೇಂದ್ರದ ತೆರಿಗೆ ಸಂಗ್ರಹವು 2014-15ರಿಂದ ಶೇ 370ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಇಂಧನ ಬೆಲೆ ಏರಿಕೆ ಖಂಡಿಸಿ ಜುಲೈ 10 ಹಾಗೂ 11ರಂದು ತೃಣಮೂಲ ಕಾಂಗ್ರೆಸ್ ಬಂಗಾಳದ ಪ್ರತಿ ಬ್ಲಾಕ್‌ನಲ್ಲಿಯೂ ಪ್ರತಿಭಟನೆ ನಡೆಸಲಿದೆ.

English summary
West bengal cm Mamata Banerjee writes letter to PM Modi on fuel price hike
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X