• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿಗೆ ಆಕ್ರೋಶಭರಿತ ಪತ್ರ

|

ಕೋಲ್ಕತ್ತಾ, ಸೆ 2: ರಾಜ್ಯಗಳಿಗೆ ಸಿಗಬೇಕಾಗಿರುವ ಜಿಎಸ್​​​ಟಿ ವಿಚಾರದಲ್ಲಿ, ಬಿಜೆಪಿಯೇತರ ರಾಜ್ಯಗಳು ಕೇಂದ್ರ ಸರಕಾರದ ವಿರುದ್ದ ತಿರುಗಿಬಿದ್ದಿವೆ. ಈ ಸಂಬಂಧ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿಗೆ ಖಡಕ್ ಪತ್ರ ಬರೆದಿದ್ದಾರೆ.

   Narendra Modiಯವರ Twitter ಹಾಗು Website hacked | Oneindia Kannada

   "ಜಿಎಸ್​​​ಟಿ ರಾಜ್ಯದ ಪಾಲಿನ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಗೊಂದಲವನ್ನು ಬಗೆಹರಿಸಿ"ಎಂದು ಮಮತಾ, ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.

   ಜಿಎಸ್‌ಟಿ ನಷ್ಟ ಪರಿಹಾರ, ಕೇಂದ್ರ ಸರ್ಕಾರದ ವಿರುದ್ಧ ನಿಂತ ಕೇರಳ

   "ಕೇಂದ್ರ ಸರಕಾರ ನೀಡಿರುವ ಎರಡೂ ಆಯ್ಕೆಗಳು ಏಕಪಕ್ಷೀಯ ನಿರ್ಧಾರವಾಗಿದೆ. ಈ ಮೂಲಕ, ಕೋಟ್ಯಾಂತರ ರೂಪಾಯಿ ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗಲಿದೆ. ನಮ್ಮ ಸರಕಾರೀ ನೌಕರರಿಗೆ ವೇತನ ನೀಡುವಲ್ಲಿ ಕಷ್ಟ ಪಡುತ್ತಿರುವಂತಹ ಈ ಸಮಯದಲ್ಲಿ ಇದು ಉತ್ತಮ ಬೆಳವಣಿಗೆಯಲ್ಲ"ಎಂದು ಮಮತಾ ಪತ್ರದ ಮೂಲಕ ಸಿಟ್ಟು ಹೊರಹಾಕಿದ್ದಾರೆ.

   "ಒಂದು ದೇಶ, ಒಂದು ತೆರಿಗೆ ಎನ್ನುವ ನೆಪದಲ್ಲಿ ಜಿಎಸ್​​​ಟಿ ಜಾರಿಗೆ ತರಲಾಯಿತು. ನಮಗೀಗ ಕೇಂದ್ರ ಸರಕಾರದ ಮೇಲಿದ್ದ ನಂಬಿಕೆ ಸಂಪೂರ್ಣವಾಗಿ ಹೋಗಿದೆ. ರಾಜ್ಯಗಳನ್ನು ನಂಬಿಸಿ ಜಿಎಸ್​​ಟಿ ತೆರಿಗೆ ಸಂಗ್ರಹ ಮಾಡಿದ ಕೇಂದ್ರ ಸರಕಾರ, ರಾಜ್ಯ ಸರಕಾರದ ಬೆನ್ನಿಗೆ ಚೂರಿ ಹಾಕಿದೆ"ಎಂದು ಮಮತಾ ಬ್ಯಾನರ್ಜಿ, ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

   "ರಾಜ್ಯಗಳಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಬೇಕಾಗಿರುವ ಕೇಂದ್ರ ಸರಕಾರ, ಇನ್ನಷ್ಟು ತೊಂದರೆಯನ್ನು ನೀಡುತ್ತಿದೆ. ನಿಮ್ಮ ಸರಕಾರ ನೀಡಿದ ಎರಡೂ ಆಯ್ಕೆಗಳನ್ನು ನಾವು ತಿರಸ್ಕರಿಸುತ್ತೇವೆ" ಮಮತಾ ಬ್ಯಾನರ್ಜಿ ಪತ್ರದಲ್ಲಿ ಬರೆದಿದ್ದಾರೆ.

   ಆಗಸ್ಟ್‌ ತಿಂಗಳಿನಲ್ಲಿ ಭಾರತದ ಜಿಎಸ್‌ಟಿ ಆದಾಯ 86,449 ಕೋಟಿ ರೂಪಾಯಿ

   "ವ್ಯಾಟ್ ಮುಂತಾದವುಗಳನ್ನು ಜಿಎಸ್​​​ಟಿಗೋಸ್ಕರ ಕೈಬಿಡಲಾಯಿತು. ರಾಜ್ಯ ದಾಯಿತ್ವದ ಶೇ.70ರಷ್ಟು ತೆರಿಗಾ ಪದ್ದತಿಯನ್ನು ಕೇಂದ್ರಕ್ಕೆ ಬಿಟ್ಟು ಕೊಡಲಾಯಿತು. ರಾಜ್ಯದ ಪಾಲಿನ ಜಿಎಸ್​​​ಟಿಯನ್ನು ಯಾವುದೇ ಷರತ್ತಿಲ್ಲದೇ ನೀಡುವುದಾಗಿ ಕೇಂದ್ರ ಒಪ್ಪಿಕೊಂಡ ನಂತರ, ನಾವು ಹೊಸ ತೆರಿಗೆ ಪದ್ದತಿಗೆ ಒಪ್ಪಿಗೆ ಸೂಚಿಸಿದ್ದೆವು"ಎಂದು ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

   English summary
   Mamata Banerjee Writes Letter To PM Modi Over GST Dues, Urges Him To Intervene.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X