ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನು ನಂಬುವುದಿಲ್ಲ...' ಪದ್ಯದ ಮೂಲಕ ಫಲಿತಾಂಶಕ್ಕೆ ದೀದಿ ಪ್ರತಿಕ್ರಿಯೆ

|
Google Oneindia Kannada News

Recommended Video

ನಾನು ನಂಬುವುದಿಲ್ಲ...' ಪದ್ಯದ ಮೂಲಕ ಫಲಿತಾಂಶಕ್ಕೆ ದೀದಿ ಪ್ರತಿಕ್ರಿಯೆ

ಕೋಲ್ಕತ್ತಾ, ಮೇ 25: ಲೋಕಸಭೆ ಚುನಾವಣೆಯ ಆಘಾತಕಾರಿ ಸೋಲು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅನಿರೀಕ್ಷಿತ ಸಾಧನೆಯ ನಂತರ ಮುಖಭಂಗ ಅನುಭವಿಸಿದ ಮಮತಾ ಬ್ಯಾನರ್ಜಿ ಕವನದ ಮೂಲಕ ತಮ್ಮ ಮನದ ಭಾವನೆಗಳನ್ನು ಹೊರಹಾಕಿದ್ದಾರೆ.

ಭಾರೀ ಮುಖಭಂಗದ ನಂತರ ದೀದಿ ಮೊದಲ ಟ್ವೀಟ್! ಭಾರೀ ಮುಖಭಂಗದ ನಂತರ ದೀದಿ ಮೊದಲ ಟ್ವೀಟ್!

ನಅನು ನಂಬುವುದಿಲ್ಲ ಎಂಬ ಶೀರ್ಷಿಕೆಯ ಈ ಕವನದಲ್ಲಿ ಅವರು ಕೋಮುವಾದ, ಧಾರ್ಮಿಕ ಆಕ್ರಮಣಶೀಲತೆಯ ಬಗ್ಗೆ ಕಿಡಿಕಾರಿದ್ದಾರೆ. ಪರೋಕ್ಷವಾಗಿ ಬಲಪಂಥೀಯ ಬಿಜೆಪಿಗೆ ಚುರುಕು ಮುಟ್ಟಿಸುವ ಯತ್ನವನ್ನು ಮಮತಾ ಬ್ಯಾನರ್ಜಿ ಮಾಡಿದ್ದಾರೆ.

Mamata Banerjee writes a poem after lok sabha election results 2019

ನಾನು ನಂಬುವುದಿಲ್ಲ,
ಕೋಮುವಾದದ ಬಣ್ಣಗಳನ್ನು
ನಾನು ನಂಬುವುದಿಲ್ಲ
ಪ್ರತಿ ಧರ್ಮದಲ್ಲೂ ಆಕ್ರಮಣಶೀಲತೆ ಇದೆ, ಸಹಿಷ್ಣುತೆಯೂ ಇದೆ
ನಾನು ಬಂಗಾಳದ ಪುನರುತ್ಥಾನದ ಒಬ್ಬ ವಿಧೇಯ ಸೇವಕಿ ಮಾತ್ರ
ಧಾರ್ಮಿಕ ಆಕ್ರಮಣಕಾರಿತ್ವವನ್ನು ಮಾರಾಟ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ
ನನಗೆ ಮಾನವೀಯತೆಯಲ್ಲಿ ಬೆಳಕು ಮೂಡಿಸುವ ಧರ್ಮದಲ್ಲಿ ನಂಬಿಕೆ
ಧರ್ಮವನ್ನು ಟ್ರಂಪ್ ಕಾರ್ಡ್ ಆಗಿ ಬಳಸುವವರು ಮತ್ತು ಶ್ರೀಮಂತರ ಪರವಾಗಿ ನಿಲ್ಲುವವರನ್ನು ನಾನು ನಂಬುವುದಿಲ್ಲ
ನಾನು ನನ್ನ ಲೆಕ್ಕವಿಲ್ಲದಷ್ಟು ಕರ್ತವ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ
ಹಿಂಸೆಯನ್ನು ನಾನೆಂದಿಗೂ ಒಪ್ಪುವುದಿಲ್ಲ
ನೀವ್ಯಾಕೆ ಧರ್ಮದಲ್ಲಿ ಆಕ್ರಮಣಶೀಲತೆಯನ್ನು ಮಾರಾಟ ಮಾಡುತ್ತಿದ್ದೀರಿ?
ಯಾರ್ಯಾರಿಗೆ ಸಹಿಷ್ಣುತೆಯಲ್ಲಿ ನಂಬಿಕೆ ಇದೆಯೋ
ಅವರೆಲ್ಲ ಒಂದಾಗೋಣ ಬನ್ನಿ
ಇಡೀ ಜತ್ತು ಒಂದಾಗದಿದ್ದರೂ ಒಂದು ರಾಷ್ಟ್ರವನ್ನು ಒಂದಾಗಿಸೋಣ
ಯಾಕೆ ಈ ಆಕ್ರಮಣಶೀಲತೆಯನ್ನೇ ಸದ್ಗುಣ ಎಂದುಲೆಕ್ಖಾಕಲಾಗುತ್ತಿದೆ..?

ಮೇ 23 ರಂದು ಫಲಿತಾಂಸದ ದಿನವೂ ಸೋಲಿನ ನಂತರ ಮೊದಲ ಟ್ವೀಟ್ ಮಾಡಿದ್ದ ಮಮತಾ ಬ್ಯಾನರ್ಜಿ, "ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳು. ಆದರೆ ಸೋತವರದ್ದು ಸೋಲಲ್ಲ. ನಾವು ಈ ಕುರಿತು ಪುನರ್ವಿಮರ್ಶೆ ಮಾಡಬೇಕು. ಫಲಿತಾಂಶ ಸಂಪೂರ್ಣ ಮುಗಿದು ವಿವಿ ಪ್ಯಾಟ್ ಜೊತೆ ತಾಳೆಯಾಗಬೇಕು" ಎಂದಿದ್ದರು.

ಪಶ್ಚಿಮ ಬಂಗಾಳದಲ್ಲಿ ದೀದಿಗೆ 'ಪ್ರಜಾಪ್ರಭುತ್ವದ ಕಪಾಳಮೋಕ್ಷ!' ಪಶ್ಚಿಮ ಬಂಗಾಳದಲ್ಲಿ ದೀದಿಗೆ 'ಪ್ರಜಾಪ್ರಭುತ್ವದ ಕಪಾಳಮೋಕ್ಷ!'

ಪಶ್ಚಿಮ ಬಂಗಾಳದಲ್ಲಿ 2014 ರಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿ ಈ ಬಾರಿ ಸುಮಾರು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಮೊಟ್ಟ ಮೊದಲ ಬಾರಿಗೆ ಎಡಪಕ್ಷಗಳ ನಾಡಲ್ಲಿ, ದೀದಿ ಭದ್ರಕೋಟೆಯಲ್ಲಿ ಎರಡಂಕಿಯನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿದೆ.

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಫಲಿತಾಂಶ ಹೊರಬಿದ್ದಿತ್ತು..

English summary
After stunning 2019 lok sabha election results WB CM Mamata Banerjee writes a poem with title of "I Do Not Agree" and expresses her opinion. 'ನಾನು ನಂಬುವುದಿಲ್ಲ...' ಪದ್ಯದ ಮೂಲಕ ಫಲಿತಾಂಶಕ್ಕೆ ದೀದಿ ಪ್ರತಿಕ್ರಿಯೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X