• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್ಚು ಲಸಿಕೆ, ಔಷಧಿಗಳಿಗೆ ಮೋದಿ ಬಳಿ ಮಮತಾ ಬ್ಯಾನರ್ಜಿ ಮನವಿ

|

ಕೋಲ್ಕತ್ತಾ, ಏಪ್ರಿಲ್ 19: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೆಚ್ಚುವರಿ ಲಸಿಕೆಗಳು ಹಾಗೂ ಔಷಧಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಜೊತೆಗೆ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಮಿತಿ ಮೀರುತ್ತಿರುವುದರ ಕುರಿತು ಪರಿಸ್ಥಿತಿ ನಿಭಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಇನ್ನು ಚುನಾವಣಾ ಪ್ರಚಾರ ನಡೆಸುವುದಿಲ್ಲ: ಟಿಎಂಸಿಮಮತಾ ಬ್ಯಾನರ್ಜಿ ಇನ್ನು ಚುನಾವಣಾ ಪ್ರಚಾರ ನಡೆಸುವುದಿಲ್ಲ: ಟಿಎಂಸಿ

ಕೊರೊನಾ ವಿರುದ್ಧದ ಹೋರಾಟಕ್ಕೆ ರಾಜ್ಯದ ಯೋಜನೆಗಳ ಕುರಿತು ಸೋಮವಾರ ರಾಜ್ಯ ಮುಖ್ಯ ಕಾರ್ಯದರ್ಶಿ ಮಾಧ್ಯಮ ಗೋಷ್ಠಿ ನಡೆಸಲಿರುವುದಾಗಿ ತಿಳಿಸಿದ್ದಾರೆ.

"ಭಾರತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಪಶ್ಚಿಮ ಬಂಗಾಳ ಸರ್ಕಾರವು ತನ್ನ ಜನರ ರಕ್ಷಣೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಧಾನಿಯವರ ಬಳಿ ಹೆಚ್ಚುವರಿ ಔಷಧಿಗಳು ಹಾಗೂ ಲಸಿಕೆಗಳಿಗೆ ಮನವಿ ಮಾಡಲಾಗಿದೆ" ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭಾನುವಾರ 8,419 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 28 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ
Know all about
ಮಮತಾ ಬ್ಯಾನರ್ಜಿ

English summary
West Bengal Chief Minister Mamata Banerjee on Monday reached out to Prime Minister Narendra Modi seeking additional medicines and vaccines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X