ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಚುನಾವಣೆ; ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 04: ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. 294 ಸೀಟುಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಸಿದ್ಧತೆಯಲ್ಲಿರುವ ತೃಣಮೂಲ ಕಾಂಗ್ರೆಸ್ ಮಾರ್ಚ್ 5ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ.

"ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ, ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಕರಡು ಪಟ್ಟಿ ಸಿದ್ಧವಾಗಿತ್ತು. ಮೊದಲು ಹಂತ ಹಂತವಾಗಿ ಪಟ್ಟಿ ಬಿಡುಗಡೆ ಮಾಡಲು ಯೋಜಿಸಿದ್ದೆವು. ಇದೀಗ 294 ಅಭ್ಯರ್ಥಿಗಳ ಪಟ್ಟಿಯನ್ನು ಒಟ್ಟಿಗೇ ಬಿಡುಗಡೆಗೊಳಿಸುತ್ತೇವೆ" ಎಂದು ತೃಣಮೂಲ ಕಾಂಗ್ರೆಸ್ ಹಿರಿಯ ಮುಖಂಡರು ತಿಳಿಸಿದ್ದಾರೆ.

ಬರೀ ಮಾತು ಬಿಡಿ, ಮೊದಲು ಚುನಾವಣೆ ಗೆದ್ದು ನೋಡಿ; ಬಿಜೆಪಿಗೆ ಪ್ರಶಾಂತ್ ಹೊಸ ಸವಾಲುಬರೀ ಮಾತು ಬಿಡಿ, ಮೊದಲು ಚುನಾವಣೆ ಗೆದ್ದು ನೋಡಿ; ಬಿಜೆಪಿಗೆ ಪ್ರಶಾಂತ್ ಹೊಸ ಸವಾಲು

ಮಾರ್ಚ್ 9ಕ್ಕೆ ಟಿಎಂಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಲಿದೆ. ಸದ್ಯಕ್ಕೆ 80 ವರ್ಷ ಅಥವಾ ಅದಕ್ಕಿಂತ ಅಧಿಕ ವಯಸ್ಸಾಗಿರುವ ಶಾಸಕರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲು ಟಿಎಂಸಿ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಹೆಚ್ಚು ಯುವಜನರನ್ನು, ಮಹಿಳೆಯರನ್ನು ಅಭ್ಯರ್ಥಿಗಳಾಗಿ ನೇಮಿಸುತ್ತಿರುವುದಾಗಿ ತಿಳಿದುಬಂದಿದೆ. 294 ಕ್ಷೇತ್ರಗಳಲ್ಲಿ ಶೇ.30ರಷ್ಟು ಕ್ಷೇತ್ರಗಳು ಹೊಸ ಅಭ್ಯರ್ಥಿಗಳನ್ನು ಕಾಣಲಿವೆ.

Mamata Banerjee To Announce Full List Of Assembly Election Candidates On March 5

2016ರಲ್ಲಿ ನಡೆದ ಚುನಾವಣೆಯಲ್ಲಿ 294 ಕ್ಷೇತ್ರಗಳ ಪೈಕಿ ಟಿಎಂಸಿ 211 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಎಡ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿ 77 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಿಜೆಪಿಗೆ ಕೇವಲ ಮೂರು ಕ್ಷೇತ್ರಗಳು ಲಭಿಸಿದ್ದವು. ಆದರೆ ಈ ಬಾರಿ ಬಿಜೆಪಿ ತೃಣಮೂಲ ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧಿಯಾಗಿದೆ.

English summary
Trinamool Congress Supremo and West bengal CM Mamata Banerjee is likely to release its full list of candidates for upcoming assembly poll on march 5,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X