• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮೋದಿ ಜಿ, ಇದು ವೈಯಕ್ತಿಕವಲ್ಲ': ಪೆಗಾಸಸ್ ವಿಚಾರದಲ್ಲಿ ದೀದಿ ವಾಗ್ದಾಳಿ

|
Google Oneindia Kannada News

ಕೋಲ್ಕತ್ತಾ, ಜು.21: ಪೆಗಾಸಸ್ ಹಗರಣದ ಹಿನ್ನೆಲೆ ಕಣ್ಗಾವಲು ರಾಷ್ಟ್ರ ಎಂದು ಉಲ್ಲೇಖ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವಕ್ಕೆ "ಬೆದರಿಕೆಯನ್ನು ಒಡ್ಡಿದ ಬಿಜೆಪಿಯ ವಿರುದ್ದ ಒಗ್ಗೂಡಬೇಕೆಂದು ಕರೆ ನೀಡಿದರು.

ರಾಜ್ಯ ಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿದ ಮೊದಲ ಬಾರಿಗೆ ಹುತಾತ್ಮರ ದಿನದಂದು ಜನರನ್ನು ಆನ್‌ಲೈನ್‌ನಲ್ಲಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಜುಲೈ 27 ಅಥವಾ 28 ರಂದು ದೆಹಲಿಗೆ ಹೋಗುವುದಾಗಿ ಹೇಳಿದರು. ಹಲವಾರು ವಿರೋಧ ಪಕ್ಷದ ನಾಯಕರು ದೆಹಲಿ ಮತ್ತು ಇತರ ನಗರಗಳಲ್ಲಿ ದೀದಿ ಭಾಷಣವನ್ನು ಆನ್‌ಲೈನ್ ಮೂಲಕ ವೀಕ್ಷಿಸಿದ್ದಾರೆ.

2019 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಉರುಳಿಸುವಲ್ಲಿ ಪಾತ್ರ ವಹಿಸಿದ್ದ ಪೆಗಾಸಸ್‌!2019 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಉರುಳಿಸುವಲ್ಲಿ ಪಾತ್ರ ವಹಿಸಿದ್ದ ಪೆಗಾಸಸ್‌!

"ಮೂರು ವಿಷಯಗಳು ಪ್ರಜಾಪ್ರಭುತ್ವವನ್ನು ರೂಪಿಸುತ್ತವೆ. ಅವು ಮಾಧ್ಯಮ, ನ್ಯಾಯಾಂಗ ಮತ್ತು ಚುನಾವಣಾ ಆಯೋಗ. ಆದರೆ ಪೆಗಾಸಸ್ ಈ ಮೂರನ್ನೂ ವಶಪಡಿಸಿಕೊಂಡಿದೆ," ಎಂದು ದೀದಿ ಹೇಳಿದ್ದಾರೆ. ಇನ್ನು ಸೋರಿಕೆಯಾದ ಕಣ್ಗಾವಲು ಪಟ್ಟಿಗಳನ್ನು ತನಿಖೆ ಮಾಡಿದ 17 ಅಂತಾರಾಷ್ಟ್ರೀಯ ಮಾಧ್ಯಮಗಳು ಬ್ಯಾನರ್ಜಿ ಸೋದರಳಿಯ, ಪಕ್ಷದ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಸಹ ಈ ಬೇಹುಗಾರಿಕೆಗೆ ಗುರಿಯಾಗಿದ್ದಾರೆ ಎಂದು ತಿಳಿಸಿದೆ.

ಇಸ್ರೇಲಿ ಮಿಲಿಟರಿ ದರ್ಜೆಯ ಸ್ಪೈವೇರ್ ಅನ್ನು "ಅಪಾಯಕಾರಿ" ಮತ್ತು "ಉಗ್ರ" ಎಂದು ಕರೆದ ಮಮತಾ ಬ್ಯಾನರ್ಜಿ, ತನ್ನ ಫೋನ್ ಅನ್ನು ಸಹ ಟ್ಯಾಪ್ ಮಾಡಿರುವುದರಿಂದ ಇತರ ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು.

"ನಾನು ನಿಮ್ಮೊಂದಿಗೆ ಮಾತನಾಡಲು ಸಾಧ್ಯವಿಲ್ಲ. ದೆಹಲಿ ಮುಖ್ಯಮಂತ್ರಿ, ಗೋವಾ ಮುಖ್ಯಮಂತ್ರಿ ಶರದ್ ಪವಾರ್ ಅವರೇ. ನಾನು ನನ್ನ (ಫೋನ್) ಕ್ಯಾಮೆರಾದಲ್ಲಿ ಲ್ಯುಕೋಪ್ಲ್ಯಾಸ್ಟ್ ಹಾಕಿದ್ದೇನೆ. ಈ ಸರ್ಕಾರಕ್ಕೂ ಸಹ ಪ್ಲ್ಯಾಸ್ಟರ್ ಹಾಕಬೇಕು," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ತುರ್ತುಪರಿಸ್ಥಿತಿಗಿಂತ ಪೆಗಾಸಸ್‌ ದಾಳಿ ಅಪಾಯಕಾರಿ': ಜೆಪಿಸಿ ತನಿಖೆಗೆ ಶಿವಸೇನೆ ಆಗ್ರಹ'ತುರ್ತುಪರಿಸ್ಥಿತಿಗಿಂತ ಪೆಗಾಸಸ್‌ ದಾಳಿ ಅಪಾಯಕಾರಿ': ಜೆಪಿಸಿ ತನಿಖೆಗೆ ಶಿವಸೇನೆ ಆಗ್ರಹ

ದೇಶದ ನೆರವಿಗೆ ಬರಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ ದೀದಿ, "ದೇಶವನ್ನು, ಪ್ರಜಾಪ್ರಭುತ್ವ ಉಳಿಸಿ, ಎಲ್ಲಾ ಫೋನ್‌ಗಳನ್ನು ಟ್ಯಾಪ್ ಮಾಡಿದಂತೆ ನೀವು ಸುಮೊ ಮೋಟು ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ತನಿಖೆ ನಡೆಸಲು ಸಮಿತಿ ರಚಿಸಿ. ದೇಶವನ್ನು ಇನ್ನು ನ್ಯಾಯಾಂಗ ಮಾತ್ರ ಉಳಿಸಬಹುದು ಎಂದಿದ್ದಾರೆ.

ನಂತರ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿದ ದೀದಿ, "ಮಿಸ್ಟರ್ ಮೋದಿ, ಪರವಾಗಿಲ್ಲ. ನಾನು ನಿಮ್ಮ ಮೇಲೆ ವೈಯಕ್ತಿಕವಾಗಿ ಹಲ್ಲೆ ಮಾಡುತ್ತಿಲ್ಲ. ಆದರೆ ನೀವು ಮತ್ತು ಗೃಹ ಸಚಿವರಾಗಿರಬಹುದು, ನೀವು ವಿರೋಧ ಪಕ್ಷದ ನಾಯಕರ ವಿರುದ್ಧ ಏಜೆನ್ಸಿಗಳನ್ನು ನಿಯೋಜಿಸುತ್ತಿದ್ದೀರಿ. ನೀವು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ," ಎಂದು ಆರೋಪಿಸಿದರು.

"ಪಿಎಂ ಮೋದಿ ಸರ್ಕಾರವು ಜನರ ಕಲ್ಯಾಣಕ್ಕೆ ಬದಲಾಗಿ ಸ್ಪೈವೇರ್‌ಗಾಗಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ. ಪೆಟ್ರೋಲ್ ಬೆಲೆಯನ್ನು ನೋಡಿ. ಭಾರತ ಸರ್ಕಾರವು ಇಂಧನ ತೆರಿಗೆಯಿಂದಲೇ 3.7 ಲಕ್ಷ ಕೋಟಿ ಸಂಗ್ರಹಿಸಿದೆ. ಹಣ ಎಲ್ಲಿಗೆ ಹೋಗುತ್ತಿದೆ?," ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.

"ಯಾವುದೇ ಲಸಿಕೆಗಳು ಲಭ್ಯವಿಲ್ಲ. ಆದರೆ ನೀವು ಕಣ್ಗಾವಲು ದೇಶವನ್ನು ರಚಿಸಲು ಬಯಸುತ್ತೀರಿ. ಮಂತ್ರಿಗಳ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ. ನ್ಯಾಯಾಧೀಶರ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ. ಪೆಗಾಸಸ್ ಸ್ಪೈವೇರ್ ನ್ಯಾಯಾಂಗ, ರಾಜಕಾರಣಿಗಳು, ಮಾಧ್ಯಮ ವ್ಯಕ್ತಿಗಳ ಫೋನ್‌ಗಳನ್ನು ತಡೆದಿದೆ," ಎಂದು ವಾಗ್ದಾಳಿ ನಡೆಸಿದರು.

"ಇಂದು ಜನರು ಸ್ವಾತಂತ್ರ್ಯ ಮತ್ತು ಪ್ರಗತಿ, ಉತ್ತಮ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಉದ್ಯೋಗಗಳನ್ನು ಬಯಸಿದಾಗ, ಕೇಂದ್ರ ಸರ್ಕಾರವು ಆಸಕ್ತಿ ವಹಿಸುತ್ತಿರುವುದು ಹಿಂಸೆ, ವಿಭಜಕ ರಾಜಕೀಯ, ಘರ್ಷಣೆಗಳು, ಜನರಲ್ಲಿ ಅಪನಂಬಿಕೆ ಮೂಡಿಸುವ ವಿಚಾರದಲ್ಲಿ. ಆದರೆ ಭಾರತಕ್ಕೆ ಇದು ಬೇಕಾಗಿಲ್ಲ," ಎಂದರು. ಬಂಗಾಳದ ಜನರು, "ಅಭಿವೃದ್ಧಿ, ಸಾಮರಸ್ಯವನ್ನು ಬಯಸುತ್ತಾರೆ, ಅದಕ್ಕಾಗಿಯೇ ಬಂಗಾಳದ ಜನರು ನಿಮ್ಮನ್ನು ಬೆಂಬಲಿಸಲಿಲ್ಲ. ಎಲ್ಲಾ ದೇಶ, ಪ್ರಪಂಚವು ಬಂಗಾಳ ಚುನಾವಣೆಯನ್ನು ವೀಕ್ಷಿಸುತ್ತಿತ್ತು," ಎಂದು ಇದೇ ವೇಳೆ ಹೇಳಿದರು.

(ಒನ್‌ಇಂಡಿಯಾ ಸುದ್ದಿ)

English summary
Mamata Banerjee slams PM Narendra modi and says Media, judiciary and the Election Commission these Three things make democracy. Pegasus has captured all three.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X