ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪ ಹಚ್ತೀರಾ ಅಂದ್ರೆ, ನಿದ್ದೆ ಬಂದ್ರೆ ಮಾಡ್ತೀನಿ, ಇದು ನನ್ನ ವೈಯಕ್ತಿಕ ಅಂದ್ರು ದೀದಿ

|
Google Oneindia Kannada News

ಕೊಲ್ಕತ್ತ, ಏಪ್ರಿಲ್ 4: ಮನೆಯ ಮುಂದೆ ದೀಪ ಬೆಳಗೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರೆ, ಇನ್ನೊಂದೆಡೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದು ನನ್ನ ವೈಯಕ್ತಿಕ ವಿಷಯ ನನಗೆ ನಿದ್ದೆ ಬಂದರೆ ನಿದ್ದೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಜಗತ್ತಿಗೆ ಸಾರಿ ಹೇಳಲು ಭಾನುವಾರ ಮನೆಯ ಮುಂದೆ 9 ನಿಮಿಷಗಳ ಕಾಲ ದೀಪವನ್ನು ಹಚ್ಚಿ , ಮನೆಯ ಎಲೆಕ್ಟ್ರಿಕ್ ದೀಪವನ್ನು ಆರಿಸಿ ಎಂದಿದ್ದರು.

ಮೋದಿಯ ಈ ಪರಿಕಲ್ಪನೆ ಟೀಕೆಯಾಗಿ ಮಾರ್ಪಟ್ಟಿದೆ. ಹಲವು ರಾಜಕೀಯ ಮುಖಂಡರುಗಳು , ಜನಸಾಮಾನ್ಯರು ವ್ಯಂಗ್ಯವಾಡುತ್ತಿದ್ದಾರೆ.

Mamata Banerjee Says Personal Matter Will Sleep If I Like

ಮೋದಿಯವರ ಈ ಸೂಚನೆ ಬಗ್ಗೆ ಮಮತಾ ಬ್ಯಾನರ್ಜಿಯವರನ್ನು ಪ್ರಶ್ನಿಸಿದ್ದಕ್ಕೆ ಪ್ರಧಾನಿ ಮೋದಿ ಹೇಳಿರುವುದು ಒಳ್ಳೆಯದು ಎನಿಸಿದವರು ಪಾಲಿಸಲಿ. ಆ ಹೊತ್ತಲ್ಲಿ ನನಗೆ ನಿದ್ದೆ ಮಾಡಬೇಕು ಎನಿಸಿದರೆ ಮಾಡುವೆ ಎಂದು ಖಾರವಾಗಿ ನುಡಿದಿದ್ದಾರೆ.

ನಾನ್ಯಾಕೆ ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿ, ಇದರಲ್ಲಿ ರಾಜಕೀಯವನ್ನು ಬೆರೆಸಲು ಯತ್ನಿಸುತ್ತಿದ್ದೀರಾ, ನಾನು ಕೊರೊನಾ ವೈರಸ್ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಜಗಳ ಮಾಡಲು ಸಮವಿಲ್ಲ ಎಂದು ಹೇಳಿದ್ದಾರೆ.

ಮೋದಿಯವರು ತಮಗೇನು ಬೇಕೋ ಅದನ್ನು ಮಾತನಾಡುತ್ತಾರೆ. ನಾನು ನನಗೇನು ಮಾಡಬೇಕು ಅನಿಸುತ್ತದೆಯೋ ಅದನ್ನು ಮಾಡುತ್ತೇನೆ ಎಲ್ಲರದ್ದೂ ಅವರವರ ವೈಯಕ್ತಿಕ ನಿರ್ಧಾರ ಎಂದರು.

English summary
West Bengal Chief Minister Mamata Banerjee on Friday refused to politicize Prime Minister Narendra Modi’s call to light lamps on April 5, saying that it was a “personal decision” and “she would sleep if she felt like it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X