ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಳಿಯಿಂದಲೂ ಕೊರೊನಾ: ಕಡ್ಡಾಯವಾಗಿ ಮಾಸ್ಕ್ ಧರಿಸಲು ಮಮತಾ ಸೂಚನೆ

|
Google Oneindia Kannada News

ಕೊಲ್ಕತ್ತ, ಅಕ್ಟೋಬರ್ 07: ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ.

'ನಾನು ನೋಡಿದಂತೆ ಸಾಕಷ್ಟು ಮಂದಿ ಮಾಸ್ಕ್ ಧರಿಸುತ್ತಿಲ್ಲ, ದುರ್ಗಾ ಪೂಜೆಯ ವೇಳೆ ಸರ್ಕಾರ ಹಾಗೂ ಪೊಲೀಸರು ಕಡ್ಡಾಯವಾಗಿ ಮಾಸ್ಕ್ ಹಂಚಿಕೆ ಮಾಡಬೇಕು, ಜನರು ಮಾಸ್ಕ್‌ ಧರಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಅರಿತುಕೊಳ್ಳಬೇಕು' ಎಂದರು.

ಪಶ್ಚಿಮ ಬಂಗಾಳ: ದುರ್ಗಾ ಪೂಜೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳ: ದುರ್ಗಾ ಪೂಜೆಗೆ ಭರ್ಜರಿ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ

ಯಾರು ನಂಬುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಕೊರೊನಾ ಸೋಂಕು ಇದೀಗ ಗಾಳಿಯ ಮೂಲಕವೂ ಹುಟ್ಟಿಕೊಳ್ಳುತ್ತಿದೆ. ನಮ್ಮ ಮನೆಯಲ್ಲಿ ನನಗೆ ಟೀ ನೀಡುತ್ತಿದ್ದ ಮನೆಕೆಲಸದವನಿಗೂ ಕೂಡ ಕೊರೊನಾ ತಗುಲಿದೆ, ಹೀಗಿ ಸೋಂಕು ಗಾಳಿಯಿಂದ ಹರಡುತ್ತಿದೆ ಎಂಬುದು ಸಾಬೀತಾಗಿದೆ.

Mamata Banerjee Says Covid-19 Has Reached The Stage Of Being Airborne

ಕೇಂದ್ರ ಆರೋಗ್ಯ ಇಲಾಖೆಯು ಇಲ್ಲಿಯವರೆಗೆ ಗಾಳಿಯಿಂದ ಕೂಡ ಕೊರೊನಾ ಸೋಂಕು ಹರಡುತ್ತದೆ ಎನ್ನುವಂತಹ ಎಚ್ಚರಿಕೆಯ ಸಂದೇಶವನ್ನು ರವಾನಿಸಿಲ್ಲ. ಈ ಹಿಂದೆ ಮಮತಾ ಬ್ಯಾನರ್ಜಿಯವರು ಸಮುದಾಯ ಸೋಂಕಿನ ಕುರಿತು ಕೂಡ ಎಚ್ಚರಿಕೆ ನೀಡಿದ್ದರು. ದುರ್ಗಾ ಪೂಜೆಯ ವೇಳೆ ಹಲವು ನಿರ್ಬಂಧಗಳನ್ನು ಹೇರಬೇಕಾಗಿದೆ.

ಹೆಚ್ಚು ಮಂದಿ ಸೇರುವುದನ್ನು ತಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದುರ್ಗಾ ಪೂಜೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 3370 ಪ್ರಕರಣಗಳು ಪತ್ತೆಯಾಗಿವೆ.63 ಮಂದಿ ಸಾವನ್ನಪ್ಪಿದ್ದಾರೆ.

Recommended Video

ಒನ್‌ ಇಂಡಿಯಾ ಫಲಶ್ರುತಿ: ನೀಗಿತು ಹಾಸ್ಮಿನಗರ ಬಡಾವಣೆ ಜನರ ಬವಣೆ.. ವಿದ್ಯುತ್ ಕಂಬ, ತಂತಿಗಳ ತ್ವರಿತ ದುರಸ್ತಿ

English summary
Mamata Banerjee, West Bengal Chief Minister became the first chief of any state administration in India to admit Covid-19 has reached the stage of being airborne.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X