ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಮತಾ ಬ್ಯಾನರ್ಜಿ ಅವರ ಸಂಪುಟ ಬುಧವಾರ ಪುನಾರಚನೆ

|
Google Oneindia Kannada News

ಕೊಲ್ಕತ್ತಾ, ಆ.01: ಪಶ್ಚಿಮ ಬಂಗಾಳ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವ ಬೆನ್ನಲ್ಲೇ ಬುಧವಾರ (ಆ.3) ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದರು.

ತನ್ನ ಸಂಪುಟದ ಮಾಜಿ ಸಚಿವ ಮತ್ತು ಆಪ್ತ ಪಾರ್ಥ ಚಟರ್ಜಿ ಮೇಲೆ ಇತ್ತೀಚೆಗೆ ನಡೆದ ದಾಳಿಗಳ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ, ಬುಧವಾರ ರಾಜ್ಯದಲ್ಲಿ ನಾಲ್ಕು ಅಥವಾ ಐದು ಹೊಸ ಮುಖಗಳನ್ನು ಒಳಗೊಂಡ ಸಂಪುಟ ಪುನಾರಚನೆ ನಡೆಯಲಿದೆ ಎಂದು ಘೋಷಿಸಿದರು.

ಬಲಗೈ ಬಂಟರಂತಿದ್ದ ಪಾರ್ಥ ಚಟರ್ಜಿಯನ್ನು ಸಿಎಂ ಮಮತಾ ಕೈಬಿಟ್ಟಿದ್ದೇಕೆ?ಬಲಗೈ ಬಂಟರಂತಿದ್ದ ಪಾರ್ಥ ಚಟರ್ಜಿಯನ್ನು ಸಿಎಂ ಮಮತಾ ಕೈಬಿಟ್ಟಿದ್ದೇಕೆ?

"ನಾವು ಸಚಿವರಾದ ಸುಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಪಾರ್ಥ ಚಟರ್ಜಿ ಅವರು ಜೈಲಿನಲ್ಲಿದ್ದಾರೆ. ಆದ್ದರಿಂದ ಅವರ ಎಲ್ಲಾ ಕೆಲಸಗಳನ್ನು ಮಾಡಬೇಕು. ನಾನು ಒಬ್ಬಂಟಿಯಾಗಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

Mamata Banerjees Cabinet Reshuffle On Wednesday

ಜೊತೆಗೆ ಇಡೀ ಸಚಿವ ಸಂಪುಟವನ್ನು ವಿಸರ್ಜಿಸಿ ಹೊಸ ಸಂಪುಟವನ್ನು ರಚಿಸುವ ಯೋಜನೆ ಇಲ್ಲ ಎಂದು ಹೇಳಿದರು.

ಪಶ್ಚಿಮ ಬಂಗಾಳ ಶಾಲಾ ಉದ್ಯೋಗ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ನಂತರ ಪಶ್ಚಿಮ ಬಂಗಾಳ ಸರ್ಕಾರ ಜುಲೈ 28 ರಂದು ಅವರನ್ನು ಅವರ ಸಚಿವ ಸ್ಥಾನದಿಂದ ವಜಾಗೊಳಿಸಿತು.

Mamata Banerjees Cabinet Reshuffle On Wednesday

ಇತ್ತ, ಕೋಲ್ಕತ್ತಾದಲ್ಲಿರುವ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಗಳಿಂದ ರಾಶಿಗಟ್ಟಲೆ ನಗದು ಮತ್ತು ಕಿಲೋಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡ ದಿನಗಳ ನಂತರ, ಹಣವು ತನಗೆ ಸೇರಿದ್ದಲ್ಲ ಎಂದು ಪಾರ್ಥ ಚಟರ್ಜಿ ಹೇಳಿದ್ದು, ತನ್ನನ್ನು ಬಂಧಿಸುವ ಷಡ್ಯಂತ್ರ ಇದಾಗಿದೆ ಎಂದಿದ್ದಾರೆ.

ಜಿಲ್ಲೆಗಳ ಸಂಖ್ಯೆ 23 ರಿಂದ 30 ಕ್ಕೆ ಹೆಚ್ಚಿಸಲಾಗಿದೆ.

"ಮೊದಲು ಬಂಗಾಳದಲ್ಲಿ 23 ಜಿಲ್ಲೆಗಳಿದ್ದವು. ಈಗ ಅದನ್ನು 30 ಕ್ಕೆ ಹೆಚ್ಚಿಸಲಾಗಿದೆ. ಸುಂದರ್ಬನ್, ಇಚ್ಚೆಮಟಿ, ರಾಣಘಾಟ್, ಬಿಷ್ಣುಪುರ್, ಜಂಗಿಪುರ್, ಬೆಹ್ರಾಂಪುರ ಮತ್ತು ಇಬಸಿರ್ಹತ್ ಎಂದು ಜಿಲ್ಲೆಗಳಿಗೆ ಹೆಸರಿಸಲಾಗುವುದು" ಎಂದರು.

Recommended Video

ಫಾಝಿಲ್ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಚೇಸ್ ಮಾಡಿ ಅರೆಸ್ಟ್ ಮಾಡಿದ್ದು ಹೇಗೆ? | *Crime |Oneindia Kannada

English summary
West Bengal Chief Minister Mamata Banerjee monday announced that there will be a cabinet reshuffle in the state on Wednesday. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X