ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಆಸ್ತಿ ಆರೋಪ: ರಾಬರ್ಟ್ ವಾದ್ರಾ ಬೆಂಬಲಕ್ಕೂ ಬಂದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತಾ, ಫೆಬ್ರವರಿ 7: ವಿದೇಶದಲ್ಲಿ ಬೇನಾಮಿ ಆಸ್ತಿ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಅವರ ಪರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬ್ಯಾಟಿಂಗ್ ಮಾಡಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೂಡಿ ಬಿಜೆಪಿಯನ್ನು ಎದುರಿಸಲು ಸಿದ್ಧರಾಗಿರುವ ಮಮತಾ, ಪ್ರಕರಣದಲ್ಲಿ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದ ರಾಬರ್ಟ್ ವಾದ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಬಿಐನಿಂದ ವಿಚಾರಣೆಗೆ ಒಳಪಡಬೇಕಿರುವ ಪೊಲೀಸ್ ಆಯುಕ್ತರ ರಕ್ಷಣೆಗೆ ಮಮತಾ ಧಾವಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಇಂದೂ ನಡೆಯಲಿದೆ ವಾದ್ರಾ ವಿಚಾರಣೆ, ಕಾಂಗ್ರೆಸ್ ಗೆ ನಡುಕ? ಇಂದೂ ನಡೆಯಲಿದೆ ವಾದ್ರಾ ವಿಚಾರಣೆ, ಕಾಂಗ್ರೆಸ್ ಗೆ ನಡುಕ?

ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಬಂಧಿಸಲು ತೆರಳಿದ್ದ ಸಿವಿಐ ಅಧಿಕಾರಿಗಳನ್ನೇ ಮಮತಾ ಸರ್ಕಾರ ಬಂಧಿಸಿತ್ತು. ಬಳಿಕ ಮಮತಾ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಮಹಾಮೈತ್ರಿಕೂಟದ ಎಲ್ಲ ಪಕ್ಷಗಳೂ ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ಧಾವಿಸಿದ್ದವು. ಈಗ ಅದಕ್ಕೆ ಪ್ರತಿಯಾಗಿ ಮಮತಾ, ಕಾಂಗ್ರೆಸ್ ಪರ ನಿಂತಿರುವುದಾಗಿ ಹೇಳಿಕೊಂಡಿದ್ದಾರೆ.

ನಾವೆಲ್ಲ ಒಗ್ಗಟ್ಟಾಗಿದ್ದೇವೆ

ನಾವೆಲ್ಲ ಒಗ್ಗಟ್ಟಾಗಿದ್ದೇವೆ

'ಇದೇನು ಗಂಭೀರವಾದ ಪ್ರಕರಣವಲ್ಲ. ಏನೂ ಇಲ್ಲ, ಎಲ್ಲರಿಗೂ ಮಾಮೂಲಿಯಂತೆ ನೋಟಿಸ್ ಕಳುಹಿಸುವುದು ಸಾಮಾನ್ಯ. ನಾವು ಜತೆಯಾಗಿ ನಿಂತಿದ್ದೇವೆ, ನಾವು ಒಗ್ಗಟ್ಟಾಗಿದ್ದೇವೆ' ಎಂದು ಮಮತಾ ಕಾಂಗ್ರೆಸ್‌ ಮತ್ತು ವಾದ್ರಾ ಬೆಂಬಲಕ್ಕೆ ನಿಂತಿದ್ದಾರೆ.

ಕೇಂದ್ರ ಸರ್ಕಾರವು ಚುನಾವಣೆಗೂ ಮುನ್ನ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಅವರು ನನ್ನ ಗಂಡ : ರಾಬರ್ಟ್ ಬೆಂಬಲಕ್ಕೆ ನಿಂತ ಪ್ರಿಯಾಂಕಾ

ಮಮತಾಗೂ ಬೆಂಬಲ ದೊರಕಿತ್ತು

ಮಮತಾಗೂ ಬೆಂಬಲ ದೊರಕಿತ್ತು

ಸಿಬಿಐ ವಿವಾದದಲ್ಲಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಾಗ ಬಿಜೆಪಿ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಮಮತಾ ಅವರಿಗೆ ಬೆಂಬಲ ನೀಡಿತ್ತು. 'ನಾನು ಮಮತಾ ದೀದಿ ಅವರೊಂದಿದೆ ಮಾತನಾಡಿದ್ದೇನೆ. ನಿಮ್ಮೊಂದಿಗೆ ಹೆಗಲಿಗೆ ಹೆಗಲಾಗಿರುತ್ತೇವೆ ಎಂದು ಅವರಿಗೆ ತಿಳಿಸಿದ್ದೇನೆ. ಬಂಗಾಳದಲ್ಲಿ ನಡೆಯುತ್ತಿರುವುದು ಮೋದಿ ಮತ್ತು ಬಿಜೆಪಿ ಸರ್ಕಾರ ಭಾರತದ ಸಂಸ್ಥೆಗಳ ಮೇಲೆ ನಡೆಸುತ್ತಿರುವ ದಾಳಿಯ ಉದಾಹರಣೆ. ಎಲ್ಲ ವಿರೋಧಪಕ್ಷಗಳೂ ಒಂದಾಗಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುತ್ತವೆ' ಎಂದು ರಾಹುಲ್ ಹೇಳಿದ್ದರು.

ಮನಿ ಲಾಂಡ್ರಿಂಗ್ ಕೇಸ್: 'ಇಡಿ' ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರುಮನಿ ಲಾಂಡ್ರಿಂಗ್ ಕೇಸ್: 'ಇಡಿ' ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರು

ರಾಬರ್ಟ್ ವಾದ್ರಾ ವಿಚಾರಣೆ

ರಾಬರ್ಟ್ ವಾದ್ರಾ ವಿಚಾರಣೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ ಮುಂದೆ ಬುಧವಾರ ವಿಚಾರಣೆಗೆ ಹಾಜರಾಗಿದ್ದರು. ಎಸ್‌ಪಿಜಿ ಭದ್ರತೆಯೊಂದಿಗೆ ಬಂದಿದ್ದ ರಾಬರ್ಟ್ ವಾದ್ರಾ ಅವರ ಜತೆ ಪ್ರಿಯಾಂಕಾ ಗಾಂಧಿ ಕೂಡ ಇದ್ದರು. ವಾದ್ರಾ ಅವರು ಕಚೇರಿಗೆ ತೆರಳಿದ ಬಳಿಕ ಪ್ರಿಯಾಂಕಾ ಭದ್ರತಾ ವಾಹನಗಳೊಂದಿಗೆ ತೆರಳಿದ್ದರು. ಸುಮಾರು 5 ಗಂಟೆಗಳ ಕಾಲ ವಾದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಗುರುವಾರವೂ ಅವರ ವಿಚಾರಣೆ ಮುಂದುವರಿಯಲಿದೆ.

ವಾದ್ರಾ ವಿರುದ್ಧ ಆರೋಪಗಳೇನು?

ವಾದ್ರಾ ವಿರುದ್ಧ ಆರೋಪಗಳೇನು?

ಗುರುಗ್ರಾಮದಲ್ಲಿ ಡಿಎಲ್‌ಎಫ್ ಮತ್ತು ಓಂಕಾರೇಶ್ವರ ಪ್ರಾಪರ್ಟೀಸ್ ಮೂಲಕ ಗುರುಗ್ರಾಮದಲ್ಲಿ ಅಕ್ರಮ ಭೂ ಖರೀದಿ ಮತ್ತು ವಾದ್ರಾ ಅವರ ಕಂಪೆನಿಯಾದ ಸ್ಕೈಲೈಟ್ ಹಾಸ್ಪಿಟಾಲಿಟಿ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದು ಹಾಗೂ ವಿದೇಶಗಳಲ್ಲಿ ಬೇನಾಮಿ ಆಸ್ತಿ ಹೊಂದಿರುವ ಪ್ರಕರಣಗಳು ವಾದ್ರಾ ಮೇಲಿದ್ದು, ಅವುಗಳ ವಿಚಾರಣೆ ನಡೆಸಲಾಗುತ್ತಿದೆ.

ಲಂಡನ್ ಮತ್ತು ಇತರೆಡೆ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ವಾದ್ರಾ ಮೇಲಿದೆ. 2005-2010 ರ ಅವಧಿಯಲ್ಲಿ ಸುಮಾರು ಐದಕ್ಕೂ ಹೆಚ್ಚು ಮನೆಗಳನ್ನು ವಾದ್ರಾ ಖರೀದಿಸಿದ್ದು, ಅವುಗಳಲ್ಲಿ ಎರಡು ಐಷಾರಾಮಿ ವಿಲ್ಲಾ ಬೆಲೆಯೇ 83 ಕೋಟಿ ರೂ. ಇದೆ ಎನ್ನಲಾಗಿದೆ.

English summary
West Bengal Cheif Minister Mamata Banerjee stood by Sonia Gandhi's Son-in Law Robert Vadra in money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X