ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ದೀದಿ ಕ್ಲೀನ್ ಬೋಲ್ಡ್: ಪ್ರಧಾನಿ ಮೋದಿ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 12: ಪಶ್ಚಿಮ ಬಂಗಾಳದಲ್ಲಿ ನಡೆದಿರುವ ನಾಲ್ಕು ಹಂತಗಳ ಚುನಾವಣೆಯಲ್ಲಿ ಮತದಾರರು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕ್ಲೀನ್ ಬೋಲ್ಡ್ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪುರ್ಬಾ ಬರ್ಧಾಮನ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರು ಬಿಜೆಪಿ ಪರ ಫೋರ್ ಮತ್ತು ಸಿಕ್ಸರ್ ಬಾರಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಶತಕವನ್ನು ಬಾರಿಸಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತಬೇಟೆಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತಬೇಟೆ

ಬಂಗಾಳದ ಮತದಾರರು ಮಮತಾ ಬ್ಯಾನರ್ಜಿ ಅವರಿಗೆ ಈ ಮಟ್ಟಿಗೆ ಕಹಿರುಚಿ ನೀಡುತ್ತಾರೆ ಎಂದು ಭಾವಿಸಿರಲಿಲ್ಲ. ದೀದಿ ಅವರ ಸಿಟ್ಟು, ನೋವು ಮತ್ತು ಖಿನ್ನತೆ ಹೆಚ್ಚಾಗುತ್ತಿದೆ. ಆದ್ದರಿಂದಲೇ ಕಳೆದ ನಾಲ್ಕು ಹಂತದ ಚುನಾವಣೆಯಲ್ಲಿ ಮತದಾರರು ಟಿಎಂಸಿಯನ್ನು ಕ್ಲೀನ್ ಬೋಲ್ಡ್ ಮಾಡಿದ್ದಾರೆ. ಮತದಾರರು ಬಾರಿಸಿದ ಫೋರ್ ಮತ್ತು ಸಿಕ್ಸರ್ ಸಹಾಯದಿಂದ ಬಿಜೆಪಿ ಶತಕವನ್ನು ಬಾರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Mamata Banerjee Out By West Bengal Voters, Say PM Narendra Modi

"ನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿ ಬೋಲ್ಡ್":

"ನೀವು ಯಾರೊಂದಿಗೆ ಆಟ ಶುರು ಮಾಡಬೇಕು ಎಂದುಕೊಂಡಿದ್ದೀರೋ ಅವರ ಜೊತೆಗೆ ಜನರೇ ಆಟ ಶುರು ಮಾಡಿದ್ದಾರೆ. ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದ ಜನರಿಂದ ದೀದಿ ಅವರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬಂಗಾಳದ ಜನರು ದೀದಿ ಯೋಜನೆಗಳನ್ನು ವಿಫಲಗೊಳಿಸಿದ್ದಾರೆ. ದೀದಿ ಅವರು ನಾಯಕತ್ವವನ್ನು ಅಳಿಯನಿಗೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಸರಿಯಾದ ಸಮಯದಲ್ಲಿ ಜನರು ಅವರ ಆಟ ನಿಲ್ಲಿಸುವಂತೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಆಟದ ಮೈದಾನದಿಂದ ದೀದಿ ತಂಡ ಔಟ್:

ಪಶ್ಚಿಮ ಬಂಗಾಳದಲ್ಲಿ ಆಟದ ಮೈದಾನದಿಂದ ಮಮತಾ ಬ್ಯಾನರ್ಜಿ ಅವರ ಸಂಪೂರ್ಣ ತಂಡ ಹೊರ ಹೋಗುವಂತೆ ಮತದಾರರು ಹೇಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಮ್ಮೆ ಮೈದಾನದಿಂದ ಹೊರ ಹೋದ ಬಳಿಕ ಮತ್ತೆಂದು ವಾಪಸ್ ಬಂದಿಲ್ಲ ಈ ಬಗ್ಗೆ ಸ್ವತಃ ದೀದಿ ಅವರಿಗೂ ಗೊತ್ತಿದೆ. ಇದೀಗ ಟಿಎಂಸಿ ಕೂಡಾ ಆಟದ ಮೈದಾನದಿಂದ ಹೊರ ಹೋಗುವ ಕಾಲ ಬಂದಿದೆ. ದೀದಿ ಅವರೇ ನೀವೊಮ್ಮೆ ಆಟದ ಮೈದಾನದಿಂದ ಹೊರಗೆ ಹೋದರೆ ಮತ್ತೆಂದು ವಾಪಸ್ ಬರುವುದಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾರ್ಚ್ 27ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ, ಏಪ್ರಿಲ್ 6ರಂದು ಮೂರನೇ ಹಂತ, ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನ ನಡೆದಿದೆ. ಉಳಿದಂತೆ ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.

English summary
Mamata Banerjee Out By West Bengal Voters, Say PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X