ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸರ್ಕಾರಕ್ಕೆ ಹೊಸ ಸವಾಲು ಹಾಕಿದ ಮಮತಾ ಬ್ಯಾನರ್ಜಿ

|
Google Oneindia Kannada News

ಕೋಲ್ಕತಾ, ಆಗಸ್ಟ್ 28: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಡಪಕ್ಷಗಳ ಪ್ರಾಬಲ್ಯವುಳ್ಳ ಪಶ್ಚಿಮ ಬಂಗಾಳದಲ್ಲಿ ಕೂಡ ತನ್ನ ಕರಾಮತ್ತು ತೋರಿಸಿತ್ತು. ಆದರೆ, ಬಿಜೆಪಿಯ ಅಬ್ಬರಕ್ಕೆ ತಾವು ಬೆದರಿ ಮಣಿಯುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಕ್ಕಾಗಿ ಹೇಳಿದ್ದಾರೆ.

'ನೀವು ಜನರಿಗೆ ಧರ್ಮದ ಅಫೀಮಿನ ಮಾದಕವಸ್ತುವನ್ನು ನೀಡಲು ಸಾಧ್ಯವಿಲ್ಲ' ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಮಗು ಎತ್ತಿಕೊಂಡು, 'ಚಾಯ್ ವಾಲಿ'ಯಾದ ಮಮತಾ ದೀದಿ!ಮಗು ಎತ್ತಿಕೊಂಡು, 'ಚಾಯ್ ವಾಲಿ'ಯಾದ ಮಮತಾ ದೀದಿ!

'ಕರ್ನಾಟಕ ಸರ್ಕಾರ ಪತನಗೊಂಡಿದೆ. ಒಬ್ಬರೂ ಒಂದೂ ಮಾತನಾಡುವಂತಿಲ್ಲ. ಕೇಂದ್ರ ಸರ್ಕಾರವು ವಿರೋಧಪಕ್ಷಗಳ ನಾಯಕರನ್ನು ಬೆದರಿಸುತ್ತದೆ ಇಲ್ಲವೇ ಹಣದಿಂದ ಅವರನ್ನು ಖರೀದಿಸುತ್ತದೆ. ಬಂಗಾಳದಲ್ಲಿ ನಾವು ಅವರ ನೀತಿಗಳನ್ನು ಮತ್ತು ಒಡೆಯುವ ರಾಜಕೀಯವನ್ನು ವಿರೋಧಿಸುತ್ತಿದ್ದೇವೆ. ಆದರೆ, ಬಂಗಾಳ ಅಷ್ಟು ಅಗ್ಗವಲ್ಲ. ಬಂಗಾಳದಲ್ಲಿ ನಾವು ಹೋರಾಡುತ್ತೇವೆ' ಎಂದರು.

Mamata Banerjee I Will Not Bow Down Before BJP

'ಕೇಂದ್ರ ಸರ್ಕಾರವು ನನ್ನನ್ನು ಕಂಬಿಯ ಹಿಂದೆ ಬಂಧಿಸಿಡಬಹುದು. ಆದರೆ ನಾನು ಬಿಜೆಪಿಯ ಎದುರು ಮಂಡಿಯೂರುವುದಿಲ್ಲ' ಎಂದು ಅವರು ವಿದ್ಯಾರ್ಥಿಗಳ ಸಮಾವೇಶವೊಂದರಲ್ಲಿ ಹೇಳಿದರು.

ಮಮತಾ ವಿರುದ್ಧ ಕಣಕ್ಕಿಳಿಯಲು ಸಿದ್ಧ ಎಂದ ಆಪ್ತ, ದೀದಿಗೆ ಶಾಕ್!ಮಮತಾ ವಿರುದ್ಧ ಕಣಕ್ಕಿಳಿಯಲು ಸಿದ್ಧ ಎಂದ ಆಪ್ತ, ದೀದಿಗೆ ಶಾಕ್!

'ರಾಜ್ಯವು ಎಲ್ಲ ಧರ್ಮಗಳ ಆಚರಣೆಗಳನ್ನು ನಡೆಸುತ್ತದೆ. ದುರ್ಗಾ ಪೂಜೆ. ಕಾಳಿ ಪೂಜೆ... ನೀವೇನು ಮಾಡುತ್ತೀರಿ? ನೀವು ರಾವಣನನ್ನು ಆರಾಧಿಸುತ್ತೀರಿ' ಎಂದು ಕಿಡಿಕಾರಿದರು.

English summary
West Bengal Chief Minister Mamata Banerjee said that, the central government can put her in jail, but she will not bow down before the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X