ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮುನಿಸು ತರವೇ?! ಪ್ರಧಾನಿ ಮೋದಿ ಕರೆ ಮಾಡಿದರೂ ಕ್ಯಾರೆ ಎನ್ನದ ದೀದಿ!

|
Google Oneindia Kannada News

Recommended Video

ಮಮತಾ ಬ್ಯಾನರ್ಜಿಗೆ ಮೋದಿ ಕರೆ ಮಾಡಿದ್ದು ಯಾಕೆ ಗೊತ್ತಾ..!? | Oneindia Kannada

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿ ಸೃಷ್ಟಿಸಿರುವ ಫೋನಿ ಚಂಡಮಾರುತದ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದರೂ, ಅವರ ಕರೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಂದಿಸಿಲ್ಲ ಎಂದು ಕೆಲವು ವರದಿಗಳು ತಿಳಿಸಿವೆ.

ಶನಿವಾರದಂದು ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಎರಡೂ ಬಾರಿ ಕರೆ ಮಾಡಿದ್ದರು. ಆದರೆ ಅವರ ಕರೆಯನ್ನು ಸ್ವೀಕರಿಸದೆ, ನಂತರ ಕರೆಯನ್ನೂ ಮಾಡದೆ ಮೋದಿ ಅವರ ಮೇಲಿನ ತಮ್ಮ ಮುನಿಸನ್ನು ಮಮತಾ ಬ್ಯಾನರ್ಜಿ ಹೊರಹಾಕಿದ್ದಾರೆ.

ಮೋದಿ, ಹಿಟ್ಲರ್‌ನ ತಾತ, ಅತ್ಯಂತ ಅಯೋಗ್ಯ ಪ್ರಧಾನಿ: ಮಮತಾ ಬ್ಯಾನರ್ಜಿ ವಾಗ್ದಾಳಿಮೋದಿ, ಹಿಟ್ಲರ್‌ನ ತಾತ, ಅತ್ಯಂತ ಅಯೋಗ್ಯ ಪ್ರಧಾನಿ: ಮಮತಾ ಬ್ಯಾನರ್ಜಿ ವಾಗ್ದಾಳಿ

ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು, ಮಮತಾ ಬ್ಯಾನರ್ಜಿ ಅವರು ನನಗೆ ವರ್ಷಕ್ಕೆರಡು ಕುರ್ತಾ ಕಳಿಸುತ್ತಾರೆ, ಬಂಗಾಳದ ಪ್ರಸಿದ್ಧ ಸಿಹಿತಿನಿಸುಗಳನ್ನೂ ಕಳಿಸುತ್ತಾರೆ ಎಂದಿದ್ದರು.

Mamata Banerjee does not attend call from PM Modi

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದೀದಿ, 'ಈ ಬಾರಿ ಮೋದಿ ಅವರಿಗೆ ಕಲ್ಲು, ಮಣ್ಣಿನಿಂದ ಮಾಡಿದ ರಸಗುಲ್ಲ ಕಳಿಸುತ್ತೇನೆ' ಎಂದಿದ್ದರು.

ಅದೂ ಆಲ್ಲದೆ, ಟಿಎಂಸಿಯ ನಲವತ್ತು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮೋದಿ ಹೇಳಿಕೆ ಮಮತಾ ಬ್ಯಾನರ್ಜಿ ಅವರಲ್ಲಿ ಆತಂಕ ಮೂಡಿಸಿತ್ತು.

ಕಲ್ಲು, ಮಣ್ಣಿನ ರಸಗುಲ್ಲ: ದೀದಿಗೆ ಧನ್ಯವಾದ ಹೇಳಿದ ಮೋದಿಕಲ್ಲು, ಮಣ್ಣಿನ ರಸಗುಲ್ಲ: ದೀದಿಗೆ ಧನ್ಯವಾದ ಹೇಳಿದ ಮೋದಿ

ಇಬ್ಬರ ನಡುವೆ ನಿರಂತರವಾಗಿ ನಡೆದ ವಾಗ್ದಾಳಿ ಮತ್ತು ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನಡೆದ ಪರಸ್ಪರ ಕೆಸರೆರಚಾಟದ ನಂತರ ಇಬ್ಬರ ಸಂಬಂಧವೂ ಬಿಗುಡಾಯಿಸಿದ್ದು, ಮಮತಾ ಅವರು ಫೋನ್ ಕರೆ ಸ್ವೀಕರಿಸದೆ ಇರುವುದು ಅದಕ್ಕೆ ಬಹುಮುಖ್ಯ ಸಾಕ್ಷಿ ಎನ್ನಿಸಿದೆ.

ದೀದಿ ನಿಮ್ಮ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮೋದಿ ಬಾಂಬ್ದೀದಿ ನಿಮ್ಮ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮೋದಿ ಬಾಂಬ್

ಎರಡು ಬಾರಿ ಕರೆ ಆಡಿದರೂ ಮಮತಾ ಬ್ಯಾನರ್ಜಿ ಅವರು ಕರೆ ಸ್ವೀಕರಿಸದೆ ಇದ್ದಿದ್ದರಿಂದ, ಸೈಕ್ಲೋನ್ ಕುರಿತು ಮಾಹಿತಿ ಪಡೆಯಲು ಮೋದಿ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರಿಗೆ ಕರೆ ಮಾಡಿದ್ದರು.

English summary
Prime minister Narendra Modi called West Bengal chief minister Mamata banerjee to discuss about cyclone Fani on saturday. But She did not attend his call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X