ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳ ಚುನಾವಣೆ ಹಿಂಸಾಚಾರದ ಕುರಿತು 'ಬಿಜೆಪಿ ಪ್ರಶ್ನೆ': ಯುಪಿಎಸ್‌ಸಿ ವಿರುದ್ದ ಮಮತಾ ಆಕ್ರೋಶ

|
Google Oneindia Kannada News

ಕೋಲ್ಕತ್ತಾ, ಆ. 13: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಪ್ರವೇಶಿಸಲು 200 ಪದಗಳ ಪ್ರಶ್ನೆಯೊಂದರಲ್ಲಿ, ಅಭ್ಯರ್ಥಿಗಳು "ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ" ದ ಬಗ್ಗೆ ವರದಿಯನ್ನು ಬರೆಯುವಂತೆ ತಿಳಿಸಲಾಗಿದೆ. ಈ ಹಿನ್ನೆಲೆ ಕೇಂದ್ರ ಪೊಲೀಸ್ ಪಡೆಗಳಲ್ಲಿನ ಉದ್ಯೋಗಗಳಿಗಾಗಿ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಪ್ರಶ್ನೆಯು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರದ ನಡುವಿನ ಇನ್ನೊಂದು ಘರ್ಷಣೆಗೆ ಕಾರಣವಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ, ''ಕೇಂದ್ರೀಯ ಸೇವಾ ಸೇವಾ ಆಯೋಗವು (ಯುಪಿಎಸ್‌ಸಿ) ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಸೇವೆಗಳಿಗಾಗಿ ರಾಷ್ಟ್ರೀಯ ಪರೀಕ್ಷೆಗಳನ್ನು ನಡೆಸುತ್ತದೆ, 'ಬಿಜೆಪಿ ನೀಡಿದ' ಪರೀಕ್ಷಾ ಪ್ರಶ್ನೆಗಳನ್ನು ಕೇಳುತ್ತಿದೆ, ಮತ್ತು ನಿಷ್ಪಕ್ಷಪಾತ ಸಂಸ್ಥೆಯಾಗಿ ಅದರ ಅಡಿಪಾಯವನ್ನು ದುರ್ಬಲಗೊಳಿಸುತ್ತಿದೆ,'' ಎಂದು ಆರೋಪ ಮಾಡಿದ್ದಾರೆ.

'ಪ್ರಜಾಪ್ರಭುತ್ವ ಮುಂದುವರಿಯುತ್ತದೆ': ದೆಹಲಿಯಿಂದ ಹಿಂದಿರುವಾಗ ಮಮತಾ ಪ್ರತಿಕ್ರಿಯೆ'ಪ್ರಜಾಪ್ರಭುತ್ವ ಮುಂದುವರಿಯುತ್ತದೆ': ದೆಹಲಿಯಿಂದ ಹಿಂದಿರುವಾಗ ಮಮತಾ ಪ್ರತಿಕ್ರಿಯೆ

"ಯುಪಿಎಸ್‌ಸಿ ಬಿಜೆಪಿಯ ಪ್ರಶ್ನೆಗಳನ್ನು ಕೇಳುತ್ತಿದೆ. ಯುಪಿಎಸ್‌ಸಿ ನಿಷ್ಪಕ್ಷಪಾತವಾಗಿತ್ತು ಆದರೆ ಬಿಜೆಪಿಯು ಕೇಂದ್ರೀಯ ಸೇವಾ ಸೇವಾ ಆಯೋಗಕ್ಕೆ ಪರೀಕ್ಷೆಯಲ್ಲಿ ಕೇಳಲು ಪ್ರಶ್ನೆಗಳನ್ನು ನೀಡುತ್ತಿದೆ. ಯುಪಿಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ರೈತರ ಪ್ರತಿಭಟನೆಯ ಪ್ರಶ್ನೆಯು ರಾಜಕೀಯ ಪ್ರೇರಿತವಾಗಿದೆ," ಎಂದು ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಹಾಗೆಯೇ ''ಯುಪಿಎಸ್‌ಸಿಯಂತಹ ಸಂಸ್ಥೆಗಳನ್ನು ಬಿಜೆಪಿ ನಾಶಪಡಿಸುತ್ತಿದೆ,'' ಎಂದು ಮಮತಾ ಬ್ಯಾನರ್ಜಿ ದೂರಿದ್ದಾರೆ.

Mamata Banerjee criticises UPSC for asking Bengal poll Violence question, Calls BJP Question

ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಹೇರಳಾಗಿದ್ದ ಕೋವಿಡ್ -19 ನಿರ್ಬಂಧಗಳನ್ನು ಸಡಿಲಗೊಳಿಸುವುದನ್ನು ಘೋಷಿಸುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ, ಆದರೂ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸ್ವತಃ ಸೋತರು. ಚುನಾವಣೆಯಲ್ಲಿ ಸೋಲಿನ ನಂತರ ವಿಶೇಷವಾಗಿ ತನ್ನ ಬೆಂಬಲಿಗರು ಮತ್ತು ನಾಯಕರನ್ನು ಗುರಿಯಾಗಿಸಿಕೊಂಡ ಚುನಾವಣೋತ್ತರ ಹಿಂಸಾಚಾರವನ್ನು ತಡೆಯಲು ರಾಜ್ಯವು ಸಫಲವಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ.

2024 ರ ಲೋಕಸಭಾ ಚುನಾವಣೆ: ಬಿಜೆಪಿ ವಿರುದ್ಧ ಪಕ್ಷಗಳನ್ನು ಒಟ್ಟುಗೂಡಿಸುತ್ತಾರಾ ಮಮತಾ?2024 ರ ಲೋಕಸಭಾ ಚುನಾವಣೆ: ಬಿಜೆಪಿ ವಿರುದ್ಧ ಪಕ್ಷಗಳನ್ನು ಒಟ್ಟುಗೂಡಿಸುತ್ತಾರಾ ಮಮತಾ?

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ ಪಕ್ಷ ಮತ್ತು ಪಶ್ಚಿಮ ಬಂಗಾಳ ಸರ್ಕಾರವು ಚುನಾವಣೆಯ ನಂತರದ ಹಿಂಸಾಚಾರದ ವರದಿಗಳಿಗೆ ನಕಲಿ ವೀಡಿಯೊಗಳು ಮತ್ತು ಚಿತ್ರಗಳೊಂದಿಗೆ ಬಹಳ ಕೆಟ್ಟದಾಗಿ ಪರಿಣಾಮ ಬೀರಿದೆ. ರಾಜ್ಯ ಪೋಲಿಸ್ ಅಧೀನದಲ್ಲಿದ್ದಾಗ ಚುನಾವಣಾ ಆಯೋಗದ ನಿಯಂತ್ರಣದಲ್ಲಿ ಮೇ 2 ರಂದು ಎಣಿಕೆಯ ದಿನದಂದು ನಡೆದ ಬಹುತೇಕ ಹಿಂಸಾಚಾರದ ಘಟನೆಗಳು ಆಗಿದೆ ಎಂದು ಬಿಜೆಪಿಯು ಹೇಳಿಕೊಂಡಿದೆ.

ಕಳೆದ ತಿಂಗಳು, ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಚಿಸಿದ ಸಮಿತಿಯು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ ಆಡಳಿತದಲ್ಲಿ ನಡೆದ ಹಿಂಸಾಚಾರದ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ರಾಜ್ಯದ ಪರಿಸ್ಥಿತಿಯು "ಕಾನೂನಿನ ನಿಯಮ" ಬದಲಿಗೆ "ಆಡಳಿತಗಾರನ ಕಾನೂನು" ಯ ಅಭಿವ್ಯಕ್ತಿ ಎಂಬಂತೆ ಆಗಿದೆ ಎಂದು ಉಲ್ಲೇಖ ಮಾಡಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮಿತಿಯಲ್ಲಿದ್ದ ಒಬ್ಬ ವ್ಯಕ್ತಿ "ಬಿಜೆಪಿ ವ್ಯಕ್ತಿ" ಎಂದು ಬೇಗನೆ ತೋರಿಸಿದರು, ಮತ್ತು ಚುನಾವಣೆಯ ನಂತರದ ಹಿಂಸಾಚಾರದ ಕಥೆಯನ್ನು ಬಿಜೆಪಿಯು ರಚಿಸಿದೆ ಎಂದು ಹೇಳಿಕೊಂಡರು. "ಒಬ್ಬ ಎನ್‌ಎಚ್‌ಆರ್‌ಸಿ ಸದಸ್ಯರು ಬಿಜೆಪಿಯ ವ್ಯಕ್ತಿಯಾಗಿದ್ದಾರೆ. ಆ ವ್ಯಕ್ತಿ ಈ ಹಿಂದೆ ಎಬಿವಿಪಿಯ ಮುಂಚೂಣಿಯ ನಾಯಕರು ಆಗಿದ್ದರು. ಆ ಎನ್‌ಎಚ್‌ಆರ್‌ಸಿ ಸದಸ್ಯರು ಕೇವಲ ಬಿಜೆಪಿ ಏನು ಹೇಳಿದೆ ಅದನ್ನು ಕೇಳಿದ್ದಾರೆ, ಬಳಿಕ ತನ್ನದೇ ಆದ ವರದಿಯೊಂದನ್ನು ಮಾಡಿಕೊಂಡಿದ್ದಾರೆ," ಎಂದು ಜುಲೈ 22 ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡುತ್ತಾ ಮಮತಾ ಬ್ಯಾನರ್ಜಿ ದೂರಿದ್ದಾರೆ. ಆದರೆ ಕೋಲ್ಕತ್ತಾ ಹೈಕೋರ್ಟ್ ಮಾತ್ರ ಮೇ ತಿಂಗಳಲ್ಲಿ ಭುಗಿಲೆದ್ದ ಚುನಾವಣಾ ನಂತರದ ಹಿಂಸಾಚಾರದ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
Mamata Banerjee criticises UPSC for asking Bengal poll Violence question, Calls BJP Question.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X