ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನೀ ಭಾಷೆಯಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ

|
Google Oneindia Kannada News

ಕೋಲ್ಕತಾ, ಏಪ್ರಿಲ್ 3: ಮತದಾರರನ್ನು ಸೆಳೆಯುವ ಸಲುವಾಗಿ ನಾಯಕರು ಭಾಷೆ, ಧರ್ಮ, ಪ್ರಾದೇಶಿಕ ಭಾವನೆಗಳನ್ನು ಬಳಸುವುದು ಸಾಮಾನ್ಯ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹೊಸ ದಾರಿ ಆಯ್ದುಕೊಂಡಿದ್ದಾರೆ. ಸ್ಥಳಗಳಲ್ಲಿ ಚೀನೀ ಭಾಷೆಯಲ್ಲಿ ಚುನಾವಣಾ ಪ್ರಚಾರದ ಬರಹಗಳನ್ನು ಬರೆಸುವುದು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚೀನಾದ ಮೂಲನಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪೂರ್ವ ಕೋಲ್ಕತಾದ ಚೈನಾಟೌನ್‌ನಲ್ಲಿರುವ ತಂಗ್ರಾ ಎಂಬ ಪ್ರದೇಶದಲ್ಲಿ 'ತೃಣಮೂಲ ಕಾಂಗ್ರೆಸ್‌ಗೆ ಮತ ನೀಡಿ' ಎಂದು ಚೀನೀ ಭಾಷೆಯಲ್ಲಿ ಬರೆಯಲಾಗಿದೆ. ಇಲ್ಲಿನ ಗೋಡೆಗಳಲ್ಲಿ ಚೀನಾ ಭಾಷೆಯ ಮತಪ್ರಚಾರದ ಬರಹಗಳು ರಾರಾಜಿಸುತ್ತಿವೆ.

'ದೀದಿ' ಪಶ್ಚಿಮ ಬಂಗಾಳದಲ್ಲಿ ಸ್ಪೀಡ್ ಬ್ರೇಕರ್ ಇದ್ದಂತೆ : ನರೇಂದ್ರ ಮೋದಿ ವಾಗ್ಬಾಣ 'ದೀದಿ' ಪಶ್ಚಿಮ ಬಂಗಾಳದಲ್ಲಿ ಸ್ಪೀಡ್ ಬ್ರೇಕರ್ ಇದ್ದಂತೆ : ನರೇಂದ್ರ ಮೋದಿ ವಾಗ್ಬಾಣ

ಚೀನಾ ಭಾಷಿಕರು ಇಲ್ಲಿ ವಾಸವಿದ್ದು, ಮತದಾನದ ಹಕ್ಕನ್ನು ಹೊಂದಿದ್ದಾರೆ. ಸುಮಾರು 60 ವರ್ಷಗಳ ಹಿಂದೆ ಇಲ್ಲಿನ ಗೋಡೆಗಳಲ್ಲಿ 'ಚೀನಾ ಅಧ್ಯಕ್ಷ ನಮ್ಮ ಅಧ್ಯಕ್ಷ' ಎಂಬ ಬರಹಗಳನ್ನು ಬರೆಯಲಾಗಿತ್ತು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ಚೀನೀ ಭಾಷೆಯ ಬಳಕೆ ಕಂಡುಬಂದಿರಲಿಲ್ಲ ಎನ್ನಲಾಗಿದೆ.

mamata banerjee chinese language campaign in west bengal east kolkata

ಈಗ ಮತ್ತೆ ಮಮತಾ ಬ್ಯಾನರ್ಜಿ ಚೀನಾ ಮೂಲದ ಜನರ ಮತ ಸೆಳೆಯಲು ಚೀನೀ ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಚೀನೀ ಭಾಷೆಯಲ್ಲಿಯೇ ಕರಪತ್ರಗಳನ್ನು ಸಹ ಮುದ್ರಿಸಿದ್ದಾರೆ. ಇಲ್ಲಿನ ಜನರು ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿಯೇ ಹೆಚ್ಚಾಗಿ ವ್ಯವಹರಿಸುತ್ತಾರೆ.

ಬಿಜೆಪಿ 125ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿ ನೋಡೋಣ: ಮೋದಿಗೆ ದೀದಿ ಸವಾಲು ಬಿಜೆಪಿ 125ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿ ನೋಡೋಣ: ಮೋದಿಗೆ ದೀದಿ ಸವಾಲು

ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಿಡಂಬನೆ ಮಾಡುವ ಚಿತ್ರಗಳನ್ನು ಗೋಡೆಗಳಲ್ಲಿ ಬರೆಸಲಾಗುತ್ತಿದೆ. ಅವುಗಳಲ್ಲಿ ಹೆಚ್ಚು ನರೇಂದ್ರ ಮೋದಿ ಅವರನ್ನು ಲೇವಡಿ ಮಾಡುವ ಚಿತ್ರಗಳೇ ಎಲ್ಲೆಡೆ ಕಾಣಿಸುತ್ತಿವೆ.

English summary
West Bengal Chief Minister's Trinamool Congress using the wall writings in Chinese language to attract china native voters in East Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X