ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿ ನಡೆವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಮಮತಾ ಬ್ಯಾನರ್ಜಿ ಕಿಡಿ

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ 16: ಪುಲ್ವಾಮಾ ದಾಳಿ ನಡೆಯುವ ಹೊತ್ತಿಗೆ ಗುಪ್ತಚರ ಇಲಾಖೆ, ರಾಷ್ಟ್ರೀಯ ಭದ್ರತಾ ದಳ ಏನು ಮಾಡುತ್ತಿತ್ತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಉಗ್ರ ದಾಳಿ: ಮದುವೆ ಸಂಭ್ರಮದ ನಡುವೆ ಮಾನವೀಯತೆ ಮೆರೆದ ನವಜೋಡಿಉಗ್ರ ದಾಳಿ: ಮದುವೆ ಸಂಭ್ರಮದ ನಡುವೆ ಮಾನವೀಯತೆ ಮೆರೆದ ನವಜೋಡಿ

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ, ಸ್ಫೋಟಕ ಹೊತ್ತ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ 44 ಯೋಧರು ಹುತಾತ್ಮರಾಗಿದ್ದರು. ಇದು ಇತ್ತೀಚಿನ ಮೂರು ದಶಕಗಳಲ್ಲಿ ನಡೆದ ಹೀನಾತಿಹೀನ ಕೃತ್ಯ ಎನ್ನಿಸಿಕೊಂಡಿತ್ತು.

ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ ನಮ್ಮ ದೇಶದೊಳಗಿರುವ 'ಪಾಕಿಸ್ತಾನಿ'ಗಳನ್ನು ಮೊದಲು ಹೊರಗಟ್ಟಬೇಕಿದೆ

ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ನಾವು ಭಯೋತ್ಪಾದನೆಯನ್ನು ಕಟುಶಬ್ದಗಳಿಂದ ಟೀಕಿಸುತ್ತೇವೆ. ಅಕಸ್ಮಾತ್ ಇದರಲ್ಲಿ ಪಾಕಿಸ್ತಾನದ ಪಾತ್ರವಿದ್ದರೆ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬ್ಯಾನರ್ಜಿ ಗರ್ಜಿಸಿದರು.

Mamata Banerjee asks about Pulwama attack: What was NSA, intelligence doing?

"ಅಷ್ಟಕ್ಕೂ ಈ ಘಟನೆ ನಡೆವಾದ ಗುಪ್ತಚರ ಇಲಾಖೆ, ರಾಷ್ತ್ರೀಯ ಭದ್ರತಾ ದಳ ಏನು ಮಾಡುತ್ತಿತ್ತು. ಇದು ಗುಪ್ತಚರ ಇಲಾಖೆಯ ವೈಫಲ್ಯ. ಅಷ್ಟೊಂದು ಬಸ್ಸುಗಳು ಒಟ್ಟಾಗಿ ಹೋಗುತ್ತಿದ್ದುದು ಏಕೆ? ಭದ್ರತೆಯ ಸಮಸ್ಯೆ ಇದ್ದಾಗಿಯೂ ಅಷ್ಟೂ ಬಸ್ಸುಗಳನ್ನು ಒಟ್ಟಿಗೇ ಬಿಟ್ಟಿದ್ದು ಸರಿಯೇ" ಎಂದು ಅವರು ಪ್ರಶ್ನಿಸಿದ್ದಾರೆ.

English summary
West Bengal chief minister Mamata Banerjee on Friday hit out at the intelligence department as she expressed her grief over the demise of 40 CRPF personnel in Pulwama terror attack on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X