ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ಖಾತೆಗೆ 10 ಸಾವಿರ ರೂ. ಹಾಕಿ: ದೀದಿ ಕೇಂದ್ರಕ್ಕೆ ಆಗ್ರಹ

|
Google Oneindia Kannada News

ಕೊಲ್ಕತಾ,ಜೂನ್3: ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರಲ್ಲಿ ವಲಸೆ ,ಅಸಂಘಟಿತ ವಲಯದ ಕಾರ್ಮಿಕರೇ ಹೆಚ್ಚು.ಹೀಗಾಗಿ ಅವರ ಖಾತೆಗಳಿಗೆ 10 ಸಾವಿರ ರೂ ಜಮೆ ಮಾಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

Recommended Video

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು | virat kohli | Oneindia Kannada

ಸಾಕಷ್ಟು ವಲಸೆ ಕಾರ್ಮಿಕರಿಗೆ ಕೆಲಸವೂ ಇಲ್ಲ, ತಮ್ಮ ಊರಿಗೆ ಹಿಂದಿರುಗಿದರೆ ಮನೆಯಲ್ಲೂ ಹಣವಿಲ್ಲ, ಆಹಾರವನ್ನು ಪಡೆಯುವುದೂ ಕೂಡ ಕಷ್ಟವಾಗಿದೆ. ಬಹಳಷ್ಟು ಮಂದಿ ಊರಿಗೆ ತೆರಳಲು ವಾಹನಗಳ ವ್ಯವಸ್ಥೆ ಇಲ್ಲದೆ ನಡೆದುಕೊಂಡು, ಸೈಕಲ್ ನಲ್ಲಿ ಬಂದು, ಯಾವುದೋ ಟ್ರಕ್ ಗಳಲ್ಲಿ ಬಂದು ಹಸಿವು ತಾಳಲಾರದೆ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾ

ಹೀಗಾಗಿ ಕೊರೊನಾ ಲಾಕ್ಡೌನ್ ಇಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಪಾರು ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರದ ಬಳಿ ಇರುವ ಪಿಎಂ ಕೇರ್ಸ್ ನಿಧಿಯಿಂದ ಪ್ರತಿಯೊಬ್ಬರ ಖಾತೆಗೆ 10 ಸಾವಿರ ರೂ. ಹಣೆ ಜಮೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

 Mamata Banerjee Appeals Transfer Rs 10 Thousand To Each Migrant Labours

ಪಶ್ಚಿಮ‌ ಬಂಗಾಳಕ್ಕೆ ಸಾಕಷ್ಟು ಮಂದಿ‌ ವಲಸೆ ಕಾರ್ಮಿಕರು ಬೇರೆ ಬೇರೆ ಊರುಗಳಿಂದ ಆಗಮಿಸಿದ್ದಾರೆ. ಆದರೆ ಅವರು ಊರುಗಳಿಗೆ ಕಾಲಿಟ್ಟ ಸಂದರ್ಭದಲ್ಲಿಯೇ ಚಂಡ ಮಾರುತ ಸಂಭವಿಸಿ ಬಹಳಷ್ಟು ಮಂದಿ‌ಮನೆಯನ್ನೂ ಕಳೆದುಕೊಂಡು ದಿಕ್ಕಾಪಾಲಾಗಿದ್ದಾರೆ. ಅವರಿಗೆ ತುರ್ತು ಸಹಾಯ ಮಾಡುವ ಅಗತ್ಯವಿದೆ ಎಂದರು.

English summary
West Bengal Chief minister Mamata Banerjee appealed that transfer 10 thousand Rupees to each migrant workers from PM Cares Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X