ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಬಂದಾಗಲೇ ಉಗ್ರರ ದಾಳಿ ನಡೆದಿದ್ದು ಹೇಗೆ?: ಮಮತಾ ಬ್ಯಾನರ್ಜಿ ಮತ್ತೆ ವಿವಾದ

|
Google Oneindia Kannada News

ಕೋಲ್ಕತಾ, ಫೆ 18: ಪುಲ್ವಾಮಾ ಉಗ್ರರ ದಾಳಿ ಕೃತ್ಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಭಯೋತ್ಪಾದನಾ ದಾಳಿ ನಡೆದ ಸಮಯವನ್ನು ಪ್ರಶ್ನಿಸುವ ಮೂಲಕ ಪುನಃ ವಿವಾದ ಸೃಷ್ಟಿಸಿದ್ದಾರೆ.

2019 ಲೋಕಸಭೆ ಚುನಾವಣೆ ಸಮೀಪದಲ್ಲಿ ಇರುವಾಗಲೇ ಈ ಸಮಯಕ್ಕೆ ಸರಿಯಾಗಿ ಹೇಗೆ ಭಯಾನಕ ದಾಳಿ ನಡೆದಿದೆ? ಕಳೆದ ಐದು ವರ್ಷಗಳಿಂದ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಏಕೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ದಾಳಿ ನಡೆವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಮಮತಾ ಬ್ಯಾನರ್ಜಿ ಕಿಡಿದಾಳಿ ನಡೆವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಮಮತಾ ಬ್ಯಾನರ್ಜಿ ಕಿಡಿ

ಅಲ್ಲದೆ, ಇದು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಸಲುವಾಗಿ ನಡೆಸಿರುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

Mamata banejree attacks Modi government over Pulwama attack, asks Why this happened before elections?

ಎನ್‌ಎಸ್‌ಎ ಮತ್ತು ಗುಪ್ತಚರ ಸಂಸ್ಥೆಗಳು ಏನು ಮಾಡುತ್ತಿವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದು ಗುಪ್ತಚರ ವೈಫಲ್ಯ. ಭದ್ರತಾ ಬೆದರಿಕೆ ಇರುವ ಸಂದರ್ಭದಲ್ಲಿ ಇಷ್ಟು ಬಸ್‌ಗಳನ್ನು ಸೈನಿಕರನ್ನು ಕಳುಹಿಸಿದ್ದು ಏಕೆ ಎಂದು ಕಿಡಿಕಾರಿದ್ದಾರೆ.

ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧುಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು

ಬೇಹುಗಾರಿಕಾ ಸಂಸ್ಥೆಗಳು ಪೆ. 8ರಂದೇ ಈ ದಾಳಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದವು. ಲೋಕಸಭೆ ಚುನಾವಣೆಗೆ ಮುನ್ನವೇ ಇಂತಹ ಘಟನೆ ಸಂಭವಿಸಬಹುದು ಎಂದು ತಿಳಿಸಿದ್ದವು. ಆದರೆ, ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? 78 ಬಸ್‌ಗಳನ್ನು ತೆರಳಲು ಏಕೆ ಅವಕಾಶ ನೀಡಲಾಯಿತು ಎಂದು ಮಮತಾ ಪ್ರಶ್ನಿಸಿದ್ದಾರೆ.

ಅದು ಸ್ವತಂತ್ರ ಕಾಶ್ಮೀರ, ಸೇನೆ ಅನ್ನೋದು ಓಲ್ಡ್ ಫ್ಯಾಷನ್: ಕಮಲ್ ಹಾಸನ್ ವಿವಾದ ಅದು ಸ್ವತಂತ್ರ ಕಾಶ್ಮೀರ, ಸೇನೆ ಅನ್ನೋದು ಓಲ್ಡ್ ಫ್ಯಾಷನ್: ಕಮಲ್ ಹಾಸನ್ ವಿವಾದ

ಅಲ್ಲದೆ, ನನ್ನ ದೂರವಾಣಿ ಕರೆಗಳನ್ನು ಸಹ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ನನಗೆ ಗುಪ್ತಚರ ವರದಿಗಳು ಬಂದಿವೆ ಎಂದೂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

English summary
West Bengal Chief minister Mamata Banerjee on Monday attacked the Modi government over Pulwama attacks and said that it is an attempt to create communal tension. She also asked the Centre why it ignored intelligence reports and let the CRPF convoy pass through the area where the attack took place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X