ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಕತ್ ಇದ್ರೆ ಬಂಗಾಳದಿಂದ ಒಬ್ಬರನ್ನು ಹೊರ ಹಾಕಿ ನೋಡಿ: ಕೇಂದ್ರಕ್ಕೆ ದೀದಿ ಸವಾಲು

|
Google Oneindia Kannada News

ಕೊಲ್ಕತ್ತಾ, ಸೆಪ್ಟೆಂಬರ್ 12: ಕೇಂದ್ರದ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಮರವನ್ನೊ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.

ಕೇಂದ್ರದ ರಾಷ್ಟ್ರೀಯ ಪೌರತ್ವ ನೊಂದಣಿಯನ್ನು (ಎನ್‌ಆರ್‌ಸಿ) ವಿರೋಧಿಸಿರುವ ಮಮತಾ ಬ್ಯಾನರ್ಜಿ, 'ಎನ್‌ಆರ್‌ಸಿ ಹೆಸರಲ್ಲಿ ಒಬ್ಬರನ್ನು ಪಶ್ಚಿಮ ಬಂಗಾಳದಿಂದ ಹೊರ ಹಾಕಿ ನೋಡೋಣ' ಎಂದು ನೇರವಾಗಿ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ ತಲೆ ಒಡೆದಿದ್ದ ಆರೋಪಿ 29 ವರ್ಷದ ಬಳಿಕ ಖುಲಾಸೆಮಮತಾ ಬ್ಯಾನರ್ಜಿ ತಲೆ ಒಡೆದಿದ್ದ ಆರೋಪಿ 29 ವರ್ಷದ ಬಳಿಕ ಖುಲಾಸೆ

'ನಾನು ಬದುಕಿರುವವರೆಗೂ ಪಶ್ಚಿಮ ಬಂಗಾಳದಿಂದ ಎನ್‌ಆರ್‌ಸಿ ಹೆಸರಲ್ಲಿ ಯಾರನ್ನೂ ಹೊರ ಹಾಕಲು ಸಾಧ್ಯವಿಲ್ಲ, ನಾನು ಎನ್‌ಆರ್‌ಸಿಯನ್ನು ವಿರೋಧಿಸುತ್ತೇನೆ, ಬಿಜೆಪಿಯನ್ನೂ ವಿರೋಧಿಸುತ್ತೇನೆ' ಎಂದು ಮಮತಾ ಬ್ಯಾನರ್ಜಿ ಇಂದು ಗುಡುಗಿದ್ದಾರೆ.

Mamata Banarjee Street Protest Against NRC

ಇಂದು ಎನ್‌ಸಿಆರ್‌ ವಿರೋಧಿಸಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸಿದರು. 4.6 ಕಿ.ಮೀ ಪಾದಯಾತ್ರೆ ನಡೆಸಿದ ಮಮತಾ ಬ್ಯಾನರ್ಜಿ ಎನ್‌ಸಿಆರ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖ್ಯ ನಾಯಕರನ್ನು 'ದೆಹಲಿಯ ಕಾಮ್ರೆಡ್‌ಗಳು' ಎಂದು ಕರೆದ ಮಮತಾ ಬ್ಯಾನರ್ಜಿ, 'ದೆಹಲಿಯ ಕಾಮ್ರೆಡ್‌ಗಳೇ ನೀವು ಪಶ್ಚಿಮ ಬಂಗಾಳ ಅಥವಾ ಭಾರತವನ್ನು ಹೋಳು ಮಾಡಲು ನಾವು ಬಿಡುವುದಿಲ್ಲ' ಎಂದು ದೀದಿ ಹೇಳಿದರು.

ಮೋದಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ಮಮತಾ ಬ್ಯಾನರ್ಜಿಮೋದಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ಮಮತಾ ಬ್ಯಾನರ್ಜಿ

'ಕೇಂದ್ರವು ಎನ್‌ಆರ್‌ಸಿ ವಿಷಯದಲ್ಲಿ ಬೆಂಕಿಯೊಂದಿಗೆ ಆಟವಾಡುತ್ತಿದೆ' ಎಂದ ದೀದಿ, 'ಎನ್‌ಆರ್‌ಸಿ ಹೆಸರಲ್ಲಿ ಧರ್ಮ, ಜಾತಿ ಆಧಾರದಲ್ಲಿ ಜನರನ್ನು ಹೊರಗೆ ಹಾಕಲಾಗುತ್ತಿದೆ' ಎಂದು ದೂರಿದರು.

English summary
West Bengal CM Mamata Banarjee protest against central government's NRC. She said 'i will not let central to take any one person out of West Bengal in the name of NRC'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X