ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೇನು ಕುದುರೆ ವ್ಯಾಪಾರ ಮಾಡ್ತಿದ್ದೀರಾ?: ಮೋದಿಗೆ ಟಿಎಂಸಿ ತಿರುಗೇಟು

|
Google Oneindia Kannada News

ಅಸನ್ಸೋಲ್, ಏಪ್ರಿಲ್ 29: 'ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಟಿಎಂಸಿ ತೊರೆದು ಬರುತ್ತಾರೆ' ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ.

ಮೋದಿ ಅವರ ಅಧಿಕಾರದ ಅವಧಿ ಅಂತ್ಯಗೊಳ್ಳಲಿದೆ ಎಂಬುದನ್ನು 'ಎಕ್ಸ್ಪೈರಿ ಬಾಬು' ಎಂದು ಕರೆಯುವ ಮೂಲಕ ಲೇವಡಿ ಮಾಡಿರುವ ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್, ನಿಮ್ಮೊಂದಿಗೆ ಯಾರೂ ಬರುವುದಿಲ್ಲ. ಒಬ್ಬ ಕೌನ್ಸಿಲರ್ ಕೂಡ ಟಿಎಂಸಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ದೀದಿ ನಿಮ್ಮ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮೋದಿ ಬಾಂಬ್ ದೀದಿ ನಿಮ್ಮ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮೋದಿ ಬಾಂಬ್

'ಎಕ್ಸ್‌ಪೈರಿ ಬಾಬು ಪಿಎಂ, ನೇರವಾಗಿ ಹೇಳುತ್ತಿದ್ದೇನೆ. ನಿಮ್ಮೊಂದಿಗೆ ಯಾರೂ ಹೋಗುವುದಿಲ್ಲ. ಒಬ್ಬ ಕೌನ್ಸಿಲರ್ ಕೂಡ ಬರುವುದಿಲ್ಲ. ನೀವೇನು ಚುನಾವಣಾ ಪ್ರಚಾರ ನಡೆಸುತ್ತಿದ್ದೀರೋ ಅಥವಾ ಕುದುರೆ ವ್ಯಾಪಾರವನ್ನೋ? ನಿಮ್ಮ ಎಕ್ಸ್‌ಪೈರಿ ದಿನಾಂಕ ಹತ್ತಿರ ಬರುತ್ತಿದೆ. ನಾವು ಇಂದು ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ನಿಮ್ಮ ಮೇಲೆ ಕುದುರೆ ವ್ಯಾಪಾರದ ಆರೋಪ ಮಾಡಲಿದ್ದೇವೆ' ಎಂದು ಒಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

Lok Sabha elections 2019 west bengal TMC hits back at narendra modi horse trading

ಬೆಡ್ ಟೀ ಕೊಟ್ಟಿದ್ದು ತಡವಾಯ್ತು, ಗಲಾಟೆಯಾಗಿದ್ದೇ ಗೊತ್ತಿಲ್ಲ ಎಂದ ಟಿಎಂಸಿ ಅಭ್ಯರ್ಥಿ! ಬೆಡ್ ಟೀ ಕೊಟ್ಟಿದ್ದು ತಡವಾಯ್ತು, ಗಲಾಟೆಯಾಗಿದ್ದೇ ಗೊತ್ತಿಲ್ಲ ಎಂದ ಟಿಎಂಸಿ ಅಭ್ಯರ್ಥಿ!

'ದೀದಿ, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಲ್ಲಡೆ ಕಮಲ ಅರಳುತ್ತದೆ. ಮತ್ತು ನಿಮ್ಮ ಶಾಸಕರು ನಿಮ್ಮನ್ನು ಬಿಟ್ಟು ಬರುತ್ತಾರೆ. ಇಂದಿಗೂ, ದೀದಿ, ನಿಮ್ಮ 40 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಮುಷ್ಟಿಯಷ್ಟು ಸೀಟುಗಳನ್ನಿಟ್ಟುಕೊಂಡು 'ದೀದಿ' ನೀವು ದೆಹಲಿಯನ್ನು ತಲುಪಲು ಸಾಧ್ಯವಿಲ್ಲ. ದೆಹಲಿ ತುಂಬಾ ದೂರವಿದೆ. ತಮ್ಮ ಸೋದರಳಿಯನನ್ನು ಪಶ್ಚಿಮ ಬಂಗಾಳದಲ್ಲಿ ಬೆಳೆಸಲು ಮಮತಾ ಬಯಸಿದ್ದಾರೆ' ಎಂದು ಮೋದಿ ಟೀಕಿಸಿದ್ದರು.

English summary
Lok Sabha elections 2019 TMC in West Bengal hits back at Prime Minister Narendra Modi for his statement of 40 TMC MLAs are in touch with him. Are you election campaigning of horse trading? TMC leader Derek O'Brien asked PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X