ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫಿಡವಿಟ್‌ನಲ್ಲಿ ಪತ್ನಿ ಹೆಸರೇಕಿಲ್ಲ? ಕಾಂಗ್ರೆಸ್ ಅಭ್ಯರ್ಥಿಗೆ ಮಮತಾ ತರಾಟೆ

|
Google Oneindia Kannada News

ಕೋಲ್ಕತಾ, ಏಪ್ರಿಲ್ 18: ಪಶ್ಚಿಮ ಬಂಗಾಳದ ಬೆರ್ಹಂಪೋರ್‌ನಲ್ಲಿ ಚುನಾವಣಾ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಅಭ್ಯರ್ಥಿಯು ಅಫಿಡವಿಟ್‌ನಲ್ಲಿ ತಮ್ಮ ಮೊದಲ ಹೆಂಡತಿಯ ವಿವರ ನಮೂದಿಸದಿರುವುದರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಬೆರ್ಹಂಪೋರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಧೀರ್ ಚೌಧುರಿ ಅವರನ್ನು ಮಣಿಸಲು ಮೂರು ದಿನದಲ್ಲಿ ಸತತ ನಾಲ್ಕು ಸಭೆಗಳನ್ನು ನಡೆಸಿರುವ ಮಮತಾ, ಈಗ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಚೌಧುರಿ ಅವರು ಪ್ರತಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್-ಟಿಎಂಸಿ ಮಧ್ಯೆ ಹೊತ್ತಿಕೊಂಡ ಬೆಂಕಿ! ಮಹಾಘಟಬಂಧನ್ ಢಮಾರ್?ಕಾಂಗ್ರೆಸ್-ಟಿಎಂಸಿ ಮಧ್ಯೆ ಹೊತ್ತಿಕೊಂಡ ಬೆಂಕಿ! ಮಹಾಘಟಬಂಧನ್ ಢಮಾರ್?

'ಅವರು ಏಕೆ ತಮ್ಮ ಹಳೆಯ ಪತ್ನಿಯ ಹೆಸರನ್ನು ನಮೂದಿಸಿಲ್ಲ? ಅವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದು ನನಗೆ ಸಂಬಂಧಿಸದ ವಿಚಾರ. ಆದರೆ, ಚೌಧುರಿ ಅವರ ಅಫಿಡವಿಟ್‌ನಲ್ಲಿ ಪತ್ನಿಯ ಹೆಸರು ಏಕೆ ಇಲ್ಲ? ಇದು ಸತ್ಯವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸಮವಲ್ಲವೇ? ಎಂದು ಮಮತಾ ಕಿಡಿಕಾರಿದ್ದಾರೆ.

Lok Sabha Elections 2019 west bengal mamata banerjee berhampore congress adhir choudhury afidavit wife name

ಮಮತಾ ಪ್ರಶ್ನೆಗಳಿಗೆ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಚೌಧುರಿ, 'ನನ್ನ ಬಗ್ಗೆ ರಾಜಕೀಯವಾಗಿ ಹೇಳಲು ಮಮತಾ ಬ್ಯಾನರ್ಜಿ ಅವರಿಗೆ ಏನೂ ಉಳಿದಿಲ್ಲ. ಹೀಗಾಗಿ ಅವರು ವಾಗ್ದಾಳಿಯನ್ನು ವೈಯಕ್ತಿಕ ಮಟ್ಟಕ್ಕೆ ಇಳಿಸಿದ್ದಾರೆ. ವೈಯಕ್ತಿಕ ದಾಳಿಗಳು ಮುರ್ಷಿದಾಬಾದ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

'ಎಕ್ಸ್ ಪೈರಿ ಪಿಎಂ' ಎಂಬ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ'ಎಕ್ಸ್ ಪೈರಿ ಪಿಎಂ' ಎಂಬ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿರುವ ಚೌಧುರಿ, ನಾಲ್ಕು ಬಾರಿ ಬೆರ್ಹಂಪೋರ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

 ಚೀನೀ ಭಾಷೆಯಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ಚೀನೀ ಭಾಷೆಯಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ

ಈ ಜಿಲ್ಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿವೆ. ಈ ಮೂರೂ ಸಾಮಾನ್ಯವಾಗಿ ಕಾಂಗ್ರೆಸ್ ಹಿಡಿತದಲ್ಲಿಯೇ ಇರುತ್ತವೆ. ಚೌಧುರಿ ಅವರ ಎದುರು ಮಮತಾ ಆಪ್ತ ಸುಭೇಂದು ಅಧಿಕಾರಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

English summary
Lok Sabha Elections 2019: West Bengal Chief Minister Mamata Banerjee made personal attack on Murshidabad District Berhampore Congress candidate asked saying 'He has not even acknowledged his first wife in his poll affidavit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X