ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾದು ನೋಡಿ, ಪಶ್ಚಿಮ ಬಂಗಾಳದಲ್ಲಿ ಅಚ್ಚರಿಯ ಫಲಿತಾಂಶ: ಯೆಚೂರಿ

|
Google Oneindia Kannada News

ಕೋಲ್ಕತ್ತಾ, ಮೇ 18: "ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲಕ ಕಾಂಗ್ರೆಸ್ ನಡುವಿನ ಕಿತ್ತಾಟದಿಂದ ಎಡಪಕ್ಷಗಳಿಗೆ ಲಾಭವಾಗಲಿದ್ದು, ಅಚ್ಚರಿಯ ಫಲಿತಾಂಶ ಹೊರಬೀಳಲಿದೆ, ಕಾದು ನೋಡಿ" ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ
ಸೀತಾರಾಮ್ ಯೆಚೂರಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿಗೆ ಎಡಪಕ್ಷಗಳು ಪರೋಕ್ಷ ಬೆಂಬಲ ನೀಡುತ್ತಿವೆ ಎಂಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ-ಆರೆಸ್ಸೆಸ್ ಪಶ್ಚಿಮ ಬಂಗಾಳದಲ್ಲಿ ತಳವೂರುವಂತೆ ಮಾಡುತ್ತಿರುವುದು ಟಿಎಂಸಿಯೇ ಹೊರತು ಎಡಪಕ್ಷವಲ್ಲ' ಎಂದರು.

ಬಿಜೆಪಿ ಮಾಸ್ಟರ್ ಪ್ಲಾನ್: ಮಮತಾ ರಾಜ್ಯ ಬಿಟ್ಟು ಪ್ರಚಾರಕ್ಕೆ ಹೋಗಲೇ ಆಗಿಲ್ಲ?ಬಿಜೆಪಿ ಮಾಸ್ಟರ್ ಪ್ಲಾನ್: ಮಮತಾ ರಾಜ್ಯ ಬಿಟ್ಟು ಪ್ರಚಾರಕ್ಕೆ ಹೋಗಲೇ ಆಗಿಲ್ಲ?

"ನಾನು ನಿಮಗೊಂದು ಭರವಸೆ ನೀಡಬಲ್ಲೆ. ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳು ಅಚ್ಚರಿಯ ಫಲಿತಾಂಶ ನೀಡಲಿವೆ. ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಅಚ್ಚರಿಯ ಗೋಲು ಬಾರಿಸಿದಂತೆ ನಾವೂ ಎದುರಾಳಿಗಳಿಗೆ ಅಚ್ಚರಿ ನೀಡುತ್ತೇವೆ" ಎಂದು ಯೆಚೂರಿ ವಿಶ್ವಾಸ ವ್ಯಕ್ತಪಡಿಸಿದರು.

Lok Sabha elections 2019: Wes Bengal results will be surprising: Sitaram Yechury

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಆರೆಸ್ಸೆಸ್ ತಳವೂರಲು ತೃಣಮೂಲ ಕಾಂಗ್ರೆಸ್ ಅವಕಾಶ ನೀಡುತ್ತಿದೆ. ಬಿಜೆಪಿಗೆ ಪರೋಕ್ಷವಾಗಿ ಎಡಪಕ್ಷಗಳು ಬೆಂಬಲ ನೀಡುತ್ತಿವೆ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಯೆಚೂರಿ ಹೇಳಿದರು.

English summary
After continuous clash between BJP and TMC in West Bengal CPI(M) General Secretary Sitaram Yechury said, Left will come out with surprising results in Lok sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X