ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುದ್ದೆಗೆ ರಾಹುಲ್ ಹೆಸರು ಒಪ್ಪಲು ಈಗಲೂ ಮಮತಾ ತಯಾರಿಲ್ಲ

|
Google Oneindia Kannada News

Recommended Video

ರಾಹುಲ್ ಹೆಸರು ಒಪ್ಪಲು ಈಗಲೂ ಮಮತಾ ತಯಾರಿಲ್ಲ..!

ಕೋಲ್ಕತಾ, ಡಿಸೆಂಬರ್ 19: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಘಾತ ನೀಡಲು ವಿರೋಧಪಕ್ಷಗಳ ಮಹಾ ಮೈತ್ರಿಕೂಟ ಸಿದ್ಧತೆ ನಡೆಸುತ್ತಿದೆ. ಇಲ್ಲಿ ಅನೇಕ ನಾಯಕರು ಸೇರಿಕೊಂಡಿದ್ದಾರೆ.

ಕಾಂಗ್ರೆಸ್‌ನ ಮುಂದಾಳತ್ವವನ್ನು ಎಲ್ಲ ಪಕ್ಷಗಳು ಅನಿವಾರ್ಯವಾಗಿ ಒಪ್ಪಿಕೊಂಡರೂ, ಪ್ರಧಾನಿ ಹುದ್ದೆಯ ಅಭ್ಯರ್ಥಿಯನ್ನು ಘೋಷಣೆ ಮಾಡುವ ವಿಚಾರದಲ್ಲಿ ಸಹಮತ ಮೂಡುತ್ತಿಲ್ಲ.

ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಪ್ರಸ್ತಾವ ಮುಂದಿಟ್ಟು ಮೂರು ದಿನಗಳಾಗಿವೆ. ಈ ಆಯ್ಕೆಯ ಬಗ್ಗೆ ಮಾತನಾಡದೆ ಇರಲು ಮಮತಾ ಬ್ಯಾನರ್ಜಿ ಉದ್ದೇಶಿಸಿದ್ದಾರೆ.

 lok sabha elections 2019 mamata banerjee mahagathbandhan pm candidate rahul gandhii

ಪ್ರಧಾನಿ ಅಭ್ಯರ್ಥಿ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

'ಯಾರು ಪ್ರಧಾನಿ ಆಗಬೇಕು ಎಂಬುದರ ಬಗ್ಗೆ ಮಾತನಾಡಲು ಇದು ಸರಿಯಾದ ಗಳಿಗೆಯಲ್ಲ. ನಾವೆಲ್ಲರೂ ಒಳ್ಳೆಯ ರೀತಿಯಲ್ಲಿ ಒಟ್ಟಿಗೆ ಕೆಲಸ ಮಾಡಬೇಕಿದೆ. ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು' ಎಂದು ಮಮತಾ ಹೇಳಿದ್ದಾರೆ.

ಪಿಎಂ ಹುದ್ದೆಗೆ ರಾಹುಲ್ ಗಾಂಧಿ ಹೆಸರು ಹೇಳುತ್ತಿದ್ದಂತೆಯೇ ಸಿಟ್ಟಾದ ಮಮತಾ, ಅಖಿಲೇಶ್ ಪಿಎಂ ಹುದ್ದೆಗೆ ರಾಹುಲ್ ಗಾಂಧಿ ಹೆಸರು ಹೇಳುತ್ತಿದ್ದಂತೆಯೇ ಸಿಟ್ಟಾದ ಮಮತಾ, ಅಖಿಲೇಶ್

ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಮತ್ತು ಆರ್ ಎಲ್‌ಡಿ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡಿರುವುದನ್ನು ಮಮತಾ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಈ ಸೀಟು ಹಂಚಿಕೆ ಒಪ್ಪಂದದಲ್ಲಿ ಇಲ್ಲದೆ ಇದ್ದರೆ ಏನಂತೆ? ಇದು ಸ್ಥಳೀಯ ಮಟ್ಟದ ಹೊಂದಾಣಿಕೆ. ಕೆಲವು ಸ್ಥಳಗಳಲ್ಲಿ ಕಾಂಗ್ರೆಸ್ ಒಂಟಿಯಾಗಿ ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಮಮತಾ, ಕಾಂಗ್ರೆಸ್‌ಗೆ ಪರಿಪೂರ್ಣ ಬೆಂಬಲ ನೀಡುತ್ತಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

English summary
West Begal CM Mamata Banerjee said that, Prime Minister candidate will be decided after the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X