• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಜಾರ್ಖಂಡ್ ಸಿಎಂ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲನ ಬಂಧನ

|
Google Oneindia Kannada News

ಕೋಲ್ಕತ್ತಾ, ಆ.01: ಭ್ರಷ್ಟಾಚಾರದ ಆರೋಪದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ರಾಜೀವ್ ಕುಮಾರ್‌ರನ್ನು ಕೋಲ್ಕತ್ತಾ ಪೊಲೀಸ್ ಡಿಟೆಕ್ಟಿವ್ ಡಿಪಾರ್ಟ್ಮೆಂಟ್ (ಡಿಡಿ) ಬಂಧಿಸಿದೆ.

ಜಾರ್ಖಂಡ್ ಪೊಲೀಸರು ಆತನ ವಿರುದ್ಧ ಹೊರಡಿಸಿದ ವಾರಂಟ್ ಅನ್ನು ಜಾರಿಗೊಳಿಸುವ ಮೂಲಕ ಹರೇ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್‌ ಒಂದರಿಂದ ಅವರನ್ನು ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ವಿರುದ್ಧ ಜಾರ್ಖಂಡ್‌ನಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನ ಬಳಿ ₹ 50 ಲಕ್ಷ ನಗದು ಪತ್ತೆಯಾಗಿದೆ. ಜನರಿಗೆ ಹಣ ವಂಚಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಬಂಧಿತ ವಕೀಲರು ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರ ವಿರುದ್ಧ ರಾಂಚಿ ಹೈಕೋರ್ಟ್‌ನಲ್ಲಿ ಒಂದು ಪಿಐಎಲ್ ಸಲ್ಲಿಸಿದ್ದರು. ಈ ಪಿಐಎಲ್ ಹಿಂಪಡೆಯಲು 10 ಕೋಟಿ ರುಪಾಯಿಗೆ ಬೇಡಿಕೆಯಿಟ್ಟಿದ್ದರು. ಆರಂಭಿಕ ಮಾತುಕತೆಯಲ್ಲಿ 4 ಕೋಟಿಗೆ ಇಳಿದು ಅಂತಿಮವಾಗಿ 1 ಕೋಟಿಗೆ ಇತ್ಯರ್ಥವಾಗಿತ್ತು. ವಕೀಲ ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಮೊದಲ ಕಂತು ಎಂದು ನೀಡಲಾಗಿದ್ದ 50 ಲಕ್ಷ ರೂಪಾಯಿ ಸಿಕ್ಕಿದೆ.

ತನಗೆ ಕೇಂದ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕವಿದೆ ಎಂದೂ, ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗುವುದು ಎಂದು ಉದ್ಯಮಿಗೆ ತಿಳಿಸಿದ್ದರು.

ಬಂಧಿತ ಆರೋಪಿ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ವಿರುದ್ಧ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಒಂದು ಅರ್ಜಿಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸ್ವತಃ ಗಣಿಗಾರಿಕೆ ಗುತ್ತಿಗೆಯನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದರಲ್ಲಿ ಸಿಎಂಗೆ ಶೆಲ್ ಕಂಪನಿಗಳು ಮತ್ತು ಮನಿ ಲಾಂಡರಿಂಗ್‌ಗೆ ಸಂಬಂಧವಿದೆ ಎಂದು ಹೇಳಲಾಗಿದೆ.

ಇನ್ನು, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ ಪತ್ರಿಕಾ ಸಲಹೆಗಾರ ಅಭಿಷೇಕ್ ಪ್ರಸಾದ್ ಅಲಿಯಾಸ್ ಪಿಂಟು ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ರಾಂಚಿ ವಲಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

Recommended Video

   ಬದ್ಧವೈರಿ ಪಾಕಿಸ್ತಾನದ ವಿರುದ್ಧ ಸೋತ್ರೆ ಕಾಮನ್ವೆಲ್ತ್ ಗೇಮ್ ನಿಂದ ಭಾರತ ಔಟ್ | *Cricket | OneIndia Kannada

   ಜುಲೈ 26 ರಂದು ಇಡಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಿಚಾರಣೆಗೆ ಸೋಮವಾರ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಿದೆ.

   English summary
   Lawyer Rajiv Kumar who had filed a PIL against Jharkhand Chief Minister Hemant Soren over corruption, was arrested by Kolkata Police. know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X