ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತ ಮಗನ ವೀರ್ಯ ಸಂಗ್ರಹಕ್ಕೆ ಕೋರ್ಟ್ ಮೊರೆ ಹೋದ ತಂದೆ; ಕೋರ್ಟ್ ಹೇಳಿದ್ದೇನು?

|
Google Oneindia Kannada News

ಕೋಲ್ಕತ್ತಾ, ಜನವರಿ 23: ಈಚೆಗೆ ಅಪರೂಪದ ಅರ್ಜಿಯೊಂದು ಕೋಲ್ಕತ್ತಾ ಹೈ ಕೋರ್ಟ್ ನಲ್ಲಿ ಸಲ್ಲಿಕೆಯಾಗಿತ್ತು. ತನ್ನ ಸತ್ತ ಮಗನ ವೀರ್ಯವನ್ನು ಸಂಗ್ರಹಿಸಲು ಅವಕಾಶ ನೀಡಬೇಕೆಂದು ತಂದೆಯೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕೋರಿಕೊಂಡಿದ್ದರು.

ತನ್ನ ಮಗ ಸಾವನ್ನಪ್ಪಿದ್ದು, ಆತನ ವೀರ್ಯವನ್ನು ಸಂಗ್ರಹಿಸಲು ತಂದೆಯಾದ ನನಗೆ ಹಕ್ಕಿದ್ದು, ಇದಕ್ಕೆ ಕೋರ್ಟ್ ಅನುಮತಿ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ವಿಚಾರಣೆ ನಡೆಸಿದೆ. ಮುಂದೆ ಓದಿ...

 ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಜನವರಿ 19ರಂದು ಈ ಅರ್ಜಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈ ಕೋರ್ಟ್, ಅರ್ಜಿಯನ್ನು ತಿರಸ್ಕರಿಸಿದೆ. ಒಬ್ಬ ವ್ಯಕ್ತಿಯು ಸತ್ತ ನಂತರ ಆತನ ವೀರ್ಯವನ್ನು ಸಂಗ್ರಹಿಸುವ ಹಕ್ಕು ಆತನ ಹೆಂಡತಿಗೆ ಮಾತ್ರ ಇರುತ್ತದೆ. ಸತ್ತ ವ್ಯಕ್ತಿಯು ಮದುವೆಯಾದವನಾದ್ದರಿಂದ ಆತನ ವೀರ್ಯವನ್ನು ಪಡೆಯುವ ಹಕ್ಕು ಹೆಂಡತಿಗೆ ಮಾತ್ರ ಇರುತ್ತದೆ ಎಂದು ತಿಳಿಸಿದೆ. ಇಂಥ ಅರ್ಜಿಗಳಿಗೆ ಉತ್ತೇಜನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ಹೆಂಡತಿಗೆ ಮಾತ್ರ ಈ ಹಕ್ಕು"

ವ್ಯಕ್ತಿಯು ಸಾಯುವ ಸಂದರ್ಭವಿದ್ದರೆ ಅಥವಾ ಸತ್ತ ನಂತರ ಹೆಂಡತಿಗೆ ಆತನಿಂದ ಮಗುವನ್ನು ಪಡೆಯುವ ಉದ್ದೇಶವಿದ್ದ ಪಕ್ಷದಲ್ಲಿ ಮಾತ್ರ ಆತನ ವೀರ್ಯ ಸಂಗ್ರಹಿಸುವ ಅವಕಾಶವಿದೆ. ಈ ಏಕೈಕ ಹಕ್ಕು ಹೆಂಡತಿಗೆ ಮಾತ್ರ ಮೀಸಲು ಎಂದು ಅರ್ಜಿಯನ್ನು ನಿರಾಕರಿಸಿದೆ.

"ತಂದೆ-ಮಗನ ಸಂಬಂಧ ಈ ಹಕ್ಕಿಗೆ ಒಳಪಡುವುದಿಲ್ಲ"

ಅರ್ಜಿಯನ್ನು ನಿರಾಕರಿಸಿದ ಕೋರ್ಟ್, ಅರ್ಜಿದಾರರಿಗೆ ತನ್ನ ಸತ್ತ ಮಗನ ವೀರ್ಯವನ್ನು ಪಡೆಯುವ ಯಾವುದೇ ಮೂಲ ಹಕ್ಕು ಇಲ್ಲ ಎಂದು ತಿಳಿಸಿದೆ. ತಂದೆ-ಮಗನ ಸಂಬಂಧವಿದ್ದರೂ, ಮಗನ ಸಂತತಿಗೆ ಸಂಬಂಧಿಸಿದಂತೆ ತಂದೆಗೆ ಹಕ್ಕು ಇರುವುದಿಲ್ಲ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ತಿಳಿಸಿದ್ದಾರೆ. ತಮಗೆ, ಮಗನ ವೀರ್ಯ ಸಂಗ್ರಹಿಸಲು, ನಿರಪೇಕ್ಷಣಾ ಪತ್ರ ನೀಡುವಂತೆ ಸೊಸೆಗೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಆ ವ್ಯಕ್ತಿಯು ಕೋರಿದ್ದು, ಈ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ. ಈ ವಿಷಯ ರಿಟ್ ನ್ಯಾಯಾಲಯದ ವ್ಯಾಪ್ತಿಗೆ ಮೀರಿದೆ ಎಂದು ತಿಳಿಸಿದೆ.

 ದೆಹಲಿ ಆಸ್ಪತ್ರೆಯಲ್ಲಿ ವೀರ್ಯ ಸಂಗ್ರಹ

ದೆಹಲಿ ಆಸ್ಪತ್ರೆಯಲ್ಲಿ ವೀರ್ಯ ಸಂಗ್ರಹ

ಈಚೆಗೆ ಅರ್ಜಿದಾರರ ಮಗ ತಲಾಸೆಮಿಯಾ ಸಮಸ್ಯೆಯಿಂದ ಸಾವನ್ನಪ್ಪಿದ್ದು, ದೆಹಲಿ ಆಸ್ಪತ್ರೆಯಲ್ಲಿ ಆತನ ವೀರ್ಯವನ್ನು ಶೇಖರಿಸಲಾಗಿದೆ. ಸತ್ತ ವ್ಯಕ್ತಿಯು ತನ್ನ ಮಗನಾಗಿದ್ದು, ಆ ಹಕ್ಕಿನ ಮೇಲೆ ಆತನ ವೀರ್ಯವನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕೆಂದು ಆಸ್ಪತ್ರೆಯಲ್ಲಿ ಅನುಮತಿ ಕೋರಿದ್ದಾರೆ. ಸತ್ತ ವ್ಯಕ್ತಿಯ ಹೆಂಡತಿ ಅನುಮತಿಯೊಂದಿಗೆ ಮದುವೆ ಪುರಾವೆಯೂ ಅವಶ್ಯಕ ಎಂದು ಆಸ್ಪತ್ರೆ ತಿಳಿಸಿದೆ. ಆನಂತರ ವ್ಯಕ್ತಿಯು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

English summary
Calcutta High Court has refused to entertain the plea of a man seeking the right to collect his dead son's frozen sperm,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X