ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಾರು ಕೆ.ಜಿ ಈರುಳ್ಳಿಯನ್ನು ದಾನ ಮಾಡಿದ ಕಲಿಯುಗ ಕರ್ಣ

|
Google Oneindia Kannada News

ಕೊಲ್ಕತ್ತ, ನವೆಂಬರ್ 28: ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಪೆಟ್ರೋಲ್‌ಗಿಂತಲೂ ಹೆಚ್ಚು ದುಬಾರಿಯಾಗಿದೆ. ಹೀಗಿದ್ದಾಗ ಈರುಳ್ಳಿಯನ್ನು ಉಚಿತವಾಗಿ ಹಂಚಿದರೆ? ಹಂಚಿದಾತ ದಾನ ವೀರರನೇ ಆಗಿರಬೇಕು!

ಈರುಳ್ಳಿ ಬೆಲೆ ನೂರು ರೂಪಾಯಿ ದಾಟಿದ ಕಾರಣ ಕೊಲ್ಕತ್ತದಲ್ಲಿ ಸಮಾಜ ಸೇವಾ ಸಂಸ್ಥೆಯೊಂದು ನೂರಾರು ಕೆ.ಜಿ ಈರುಳ್ಳಿಯನ್ನು ಬಡವರಿಗೆ ಉಚಿತವಾಗಿ ಹಂಚಿದೆ.

ಅಪ್‌ಡೇಟೆಡ್ ಕಳ್ಳರು: ಹಣ ಬೇಡ್ವಂತೆ ಈರುಳ್ಳಿ ಮೂಟೆ ಇದ್ರೆ ದೋಚ್ತಾರೆ! ಅಪ್‌ಡೇಟೆಡ್ ಕಳ್ಳರು: ಹಣ ಬೇಡ್ವಂತೆ ಈರುಳ್ಳಿ ಮೂಟೆ ಇದ್ರೆ ದೋಚ್ತಾರೆ!

ಡಮ್‌-ಡಮ್‌ನ ಸ್ಥಳೀಯ ಕ್ಲಬ್ ಗೋರಾಬಜಾರ್ ಸಂಘ ಮಿತ್ರ ಈ ಕಾರ್ಯ ಮಾಡಿದ್ದು, ಕುಟುಂಬಕ್ಕೆ ಒಂದು ಕೆ.ಜಿಯಂತೆ ಸುಮಾರು ನೂರಕ್ಕೂ ಹೆಚ್ಚು ಕುಟುಂಬಕ್ಕೆ ಈರುಳ್ಳಿ ಉಚಿತವಾಗಿ ವಿತರಣೆ ಮಾಡಿದೆ. ಉಚಿತವಾಗಿ ಈರುಳ್ಳಿ ಪಡೆದ ಜನರು ಚಿನ್ನ ಸಿಕ್ಕಂತೆ ಸಂತಸದಿಂದ ದಾನವೀರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Kolkatta Local Club Distributed Free Onions To Poor Families

ಕ್ಲಬ್‌ನ ಅಧ್ಯಕ್ಷ ಕೌಶಿಕ್ ಚಟರ್ಜಿ ಮಾತನಾಡಿ, 'ದುರ್ಗಾ ಪೂಜಾ ಆಯೋಜನೆ ನಂತರ ನಮ್ಮ ಬಳಿ ಹಣ ಉಳಿದಿತ್ತು, ಅದನ್ನು ಹೀಗೆ ಬಳಸಲು ನಾವು ನಿರ್ಧರಿಸಿದೆವು. ಈರುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ಸಾಮಾನ್ಯ ಕುಟುಂಬಗಳು ಈರುಳ್ಳಿ ಕೊಳ್ಳಲಾಗದ ಪರಿಸ್ಥಿತಿಗೆ ಬಂದಿವೆ ಹಾಗಾಗಿ ಈರುಳ್ಳಿಯನ್ನು ಉಚಿತವಾಗಿ ವಿತರಣೆ ಮಾಡಿದೆವು' ಎಂದಿದ್ದಾರೆ.

English summary
A social club in Kolkatta distributed onions for free. They gave one kg onion packet to more than 100 families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X