ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾ ಪ್ರಾಧ್ಯಾಪಕಿ ಇನ್ಸ್ಟಾಗ್ರಾಮ್‌ನಲ್ಲಿ ಈಜುಡುಗೆ: ವಿದ್ಯಾರ್ಥಿ ತಂದೆಯಿಂದ ವಿವಿಗೆ ದೂರು

|
Google Oneindia Kannada News

ಕೋಲ್ಕತ್ತಾ ಆಗಸ್ಟ್ 15: ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪ್ರಾಧ್ಯಾಪಕಿಯೊಬ್ಬರು ಈಜುಡುಗೆ ಧರಿಸಿದ್ದರು ಎಂದು ಪದವಿಪೂರ್ವ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಯ ತಂದೆ ವಿಶ್ವವಿದ್ಯಾನಿಲಯಕ್ಕೆ ದೂರು ನೀಡಿದರು. ದೂರಿನ ಬಳಿಕ ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಿತು. ಇಷ್ಟೇ ಅಲ್ಲದೆ, ಈ ಘಟನೆ ವಿಶ್ವವಿದ್ಯಾನಿಲಯದ ಖ್ಯಾತಿಗೆ ಹಾನಿ ಮಾಡಿದೆ. ಅದಕ್ಕಾಗಿ ₹ 99 ಕೋಟಿ ಪಾವತಿಸುವಂತೆ ಪ್ರಾಧ್ಯಾಪಕಿಯನ್ನು ಕೇಳಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನಿಂದ ತಮ್ಮ ಖಾಸಗಿತನದ ಮೇಲೆ ದಾಳಿ ಮಾಡಲಾಗಿದೆ ಎಂದು ಪ್ರೊಫೆಸರ್‌ ಆರೋಪಿಸಿದ್ದಾರೆ. ನನ್ನ ಖಾತೆಯನ್ನು ಹ್ಯಾಕ್ ಮಾಡಿರುವುದನ್ನು ಪ್ರಶ್ನಿಸುವ ಬದಲು ನನಗೆ ಶಿಕ್ಷೆ ನೀಡಿರುವುದು ಎಷ್ಟು ಸರಿ ಎಂದು ಪ್ರೊಫೆಸರ್‌ನ ವಿಶ್ವವಿದ್ಯಾಲಯವನ್ನು ಪ್ರಶ್ನಿಸಿದ್ದಾರೆ. ಸದ್ಯ ಲಾಕ್ ಮಾಡಿದ ಪ್ರೊಫೈಲ್‌ನಿಂದ ಖಾಸಗಿ ಫೋಟೋ ಹೇಗೆ ಹೊರಬಂದಿದೆ ಎಂಬುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?ಮೇ 26ರಿಂದ ಭಾರತದಲ್ಲಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ನಿಷೇಧ?

ಪ್ರೊಫೆಸರ್ ಅವರು ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಅಥವಾ ಪ್ರೊಫೈಲ್ ಪ್ರವೇಶ ಹೊಂದಿರುವ ಯಾರಾದರೂ ಫೋಟೋದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಪ್ರಸಾರ ಮಾಡಿದ್ದಾರೆ, ಇದು ಲೈಂಗಿಕ ಕಿರುಕುಳದ ಅಡಿಯಲ್ಲಿ ಬರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾರ್ಥಿ ತಂದೆಯಿಂದ ವಿವಿಗೆ ದೂರು

ವಿದ್ಯಾರ್ಥಿ ತಂದೆಯಿಂದ ವಿವಿಗೆ ದೂರು

ಪತ್ರದಲ್ಲಿ ವಿದ್ಯಾರ್ಥಿಯ ತಂದೆ, "ಇತ್ತೀಚೆಗೆ, ನನ್ನ ಮಗ ಪ್ರೊಫೆಸರ್ ಅವರ ಕೆಲವು ಚಿತ್ರಗಳನ್ನು ನೋಡುತ್ತಿರುವುದನ್ನು ಕಂಡು ನಾನು ಗಾಬರಿಗೊಂಡಿದ್ದೇನೆ. ಅಲ್ಲಿ ಅವರು ಉದ್ದೇಶಪೂರ್ವಕವಾಗಿ ಸಾರ್ವಜನಿಕವಾಗಿ ಬಹಿರಂಗವಾಗಿ ಅಶ್ಲೀಲ ರೀತಿಯಲ್ಲಿ ಪೋಸ್ ನೀಡಿದ್ದಾರೆ" ಎಂದಿದ್ದಾರೆ.

"ಶಿಕ್ಷಕಿಯೊಬ್ಬಳು ತನ್ನ ಒಳ ಉಡುಪುಗಳನ್ನು ಧರಿಸಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವುದನ್ನು ನೋಡುವುದು ಪೋಷಕರಾಗಿ ನನಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಏಕೆಂದರೆ ನಾನು ನನ್ನ ಮಗನನ್ನು ಈ ರೀತಿಯ ಅಸಭ್ಯ ಫೋಟೋಗಳಿಂದ ರಕ್ಷಿಸಲು ಪ್ರಯತ್ನಿಸಿದೆ. ಇದು ಅಶ್ಲೀಲವಾಗಿದೆ. 18ರ ಹರೆಯದ ವಿದ್ಯಾರ್ಥಿಯೊಬ್ಬ ತನ್ನ ಪ್ರೊಫೆಸರ್ ಅಲ್ಪ ಬಟ್ಟೆ ಧರಿಸಿ ಸಾರ್ವಜನಿಕ ವೇದಿಕೆಯಲ್ಲಿ ತನ್ನ ದೇಹವನ್ನು ಪ್ರದರ್ಶಿಸುವುದನ್ನು ನೋಡುವುದು ಅಸಭ್ಯ ಮತ್ತು ಅನುಚಿತವಾಗಿದೆ" ಎಂದು ವಿದ್ಯಾರ್ಥಿಯ ತಂದೆ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾಲಯಕ್ಕೆ ನೀಡಿದ ದೂರಿನಲ್ಲಿ ಬರೆದಿದ್ದಾರೆ.

ಪ್ರಾಧ್ಯಾಪಕರಿಗೆ ಬೆದರಿಕೆ

ಪ್ರಾಧ್ಯಾಪಕರಿಗೆ ಬೆದರಿಕೆ

ಈ ಸಂಬಂಧ ವಿಶ್ವವಿದ್ಯಾಲಯ ಪ್ರಾಧ್ಯಾಪಕಿಯನ್ನು ಅಮಾನತ್ತು ಮಾಡಿತ್ತು. ವಿಶ್ವವಿದ್ಯಾನಿಲಯದಿಂದ ವಜಾಗೊಳಿಸಿದ ನಂತರ ಅದರ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಪ್ರಾಧ್ಯಾಪಕಿ ನಿರ್ಧರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಯಾವುದೇ ವಿಚಾರಣೆ ಇಲ್ಲದೆ ನನ್ನನ್ನು ವಜಾಗೊಳಿಸಲಾಗಿದೆ. ನನಗೆ ಬೆದರಿಕೆ ಮತ್ತು ಲೈಂಗಿಕ ಟೀಕೆಗಳಿಂದ ನಿಂದಿಸಲಾಯಿತು" ಮತ್ತು "ಆಕ್ಷೇಪಾರ್ಹ ಪದಗಳನ್ನು" ಬಳಸಲಾಗಿದೆ ಎಂದು ಅವರು ದೂರಿದ್ದಾರೆ.

ಪ್ರಾಧ್ಯಾಪಕರು ದೂರಿನಲ್ಲಿ ಏನಿದೆ?

ಪ್ರಾಧ್ಯಾಪಕರು ದೂರಿನಲ್ಲಿ ಏನಿದೆ?

"ಸ್ನಾತಕಪೂರ್ವ ವಿದ್ಯಾರ್ಥಿಯ ಪೋಷಕರು ತಮ್ಮ ಮಗ ನನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯಿಂದ ನನ್ನ ಫೋಟೋಗಳನ್ನು ನೋಡುತ್ತಿರುವುದು ಆಕ್ಷೇಪಾರ್ಹ ಎಂದು ಕಂಡುಕೊಂಡಿದ್ದಾರೆ ಎಂದು ನನಗೆ ತಿಳಿಸಲಾಯಿತು. ನನ್ನ ಕೋಣೆಯಲ್ಲಿನ ಈಜುಕೊಳದಲ್ಲಿ ತೆಗೆದ ಈಜುಡುಗೆಯಲ್ಲಿನ ನನ್ನ ಎರಡು ಚಿತ್ರಗಳಿವೆ. ವಿಶ್ವವಿದ್ಯಾನಿಲಯಕ್ಕೆ ಸೇರುವ ಹಲವು ತಿಂಗಳ ಮೊದಲು ನಾನು ಕಳೆದ ವರ್ಷ Instagram ಸ್ಟೋರಿಯಾಗಿ ಇದನ್ನು ಪೋಸ್ಟ್ ಮಾಡಿದ್ದೆ. ಇನ್‌ಸ್ಟಾಗ್ರಾಮ್ ಸ್ಟೋರಿ ಡಿಫಾಲ್ಟ್ ಆಗಿ ಕೇವಲ 24 ಗಂಟೆಗಳ ಕಾಲ ಲೈವ್ ಆಗಿರುವುದರಿಂದ ಆ ಫೋಟೋಗಳನ್ನು ಪ್ರವೇಶಿಸಲು ಯಾವುದೇ ಮಾರ್ಗವಿಲ್ಲ. ಮೇಲಾಗಿ ನನ್ನ Instagram ಪ್ರೊಫೈಲ್ 'ಖಾಸಗಿ' ಮತ್ತು 'ಸಾರ್ವಜನಿಕ' ಅಲ್ಲ. ಆ ಎರಡು ಚಿತ್ರಗಳನ್ನು ವಿದ್ಯಾರ್ಥಿಯು ಹೇಗೆ ವೀಕ್ಷಿಸಿದರು ಎಂದು ನನಗೆ ತಿಳಿದಿಲ್ಲ" ಎಂದು ಪ್ರೊಫೆಸರ್ ತನ್ನ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

'ಅಪರಿಚಿತರು ಇನ್‌ಸ್ಟಾಗ್ರಾಮ್ ಪ್ರವೇಶಿಸಲು ಸಾಧ್ಯವಿಲ್ಲ'

'ಅಪರಿಚಿತರು ಇನ್‌ಸ್ಟಾಗ್ರಾಮ್ ಪ್ರವೇಶಿಸಲು ಸಾಧ್ಯವಿಲ್ಲ'

"ವಿಶ್ವವಿದ್ಯಾನಿಲಯವು ಆ ಚಿತ್ರಗಳನ್ನು ಹೇಗೆ ಪ್ರವೇಶಿಸಿತು ಎಂಬುದು ನನಗೆ ನಿಗೂಢವಾಗಿದೆ. ನಾನು ಆ ಕ್ಷಣದಲ್ಲಿ ತುಂಬಾ ದುಃಖ ಮತ್ತು ಅವಮಾನವನ್ನು ಅನುಭವಿಸಿದೆ. ನನ್ನ ಖಾಸಗಿ ಚಿತ್ರಗಳನ್ನು ಅಪರಿಚಿತರು ನೋಡಲು ಸಾಧ್ಯವಿಲ್ಲ. ನನಗೆ ಅಪರಿಚಿತರು, ನನ್ನ ಒಪ್ಪಿಗೆಯಿಲ್ಲದೆ ನನ್ನ ಇನ್‌ಸ್ಟಾಗ್ರಾಮ್ ಪ್ರವೇಶಿಸಲು ಸಾಧ್ಯವೇ ಇಲ್ಲ. ಅದಕ್ಕೆ ಏಕೈಕ ಮಾರ್ಗವೆಂದರೆ ಹ್ಯಾಕಿಂಗ್ ಅಥವಾ ಯಾರಾದರೂ ಫೋಟೋಗಳನ್ನು ಪೋಸ್ಟ್ ಮಾಡಿದಾಗ ಅದರ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ಪ್ರಸಾರ ಮಾಡಿದರೆ ಮಾತ್ರ ಅದನ್ನು ಎಲ್ಲರು ವೀಕ್ಷಿಸಲು ಸಾಧ್ಯ "ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

English summary
A professor at St. Xavier's University in Kolkata had to resign after an undergraduate student's father complained to the university about an Instagram post in which the professor was wearing a swimsuit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X