ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಭಾಷಣದ ಬಳಿಕ ಮಮತಾ-ರಾಜನಾಥ್ ಸಿಂಗ್ ಜಗಳ

|
Google Oneindia Kannada News

Recommended Video

ಮಮತಾ ಬ್ಯಾನರ್ಜಿ, ರಾಜನಾಥ್ ಸಿಂಗ್ ನಡುವೆ ಮಾತಿನ ಚಕಮಕಿ | Oneindia Kannada

ಕೋಲ್ಕತಾ, ಜನವರಿ 30: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವೆ ಮಂಗಳವಾರ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಅಮಿತ್ ಶಾ ಅವರ ಕೋಲ್ಕತಾ ಸಮಾವೇಶ ನಡೆದ ಸ್ಥಳದ ಸಮೀಪದ ಪಟ್ಟಣದಲ್ಲಿ ನಡೆದ ಹಿಂಸಾಚಾರ ಘಟನೆಯ ಕುರಿತು ರಾಜನಾಥ್ ಸಿಂಗ್ ಅವರು ಮಮತಾ ಅವರಿಗೆ ಕರೆ ಮಾಡಿ ಮಾತನಾಡಿದ್ದರು.

ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!

ಈ ಸಂದರ್ಭದಲ್ಲಿ 'ನಿಮ್ಮ ಪಕ್ಷವು ಬಂಗಾಳದಲ್ಲಿ ಶಾಂತಿ ಹಾಳುಮಾಡಲು ಪ್ರಚೋದನೆ ನೀಡುತ್ತಿದೆ. ಮೊದಲು ಪಕ್ಷವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ' ಎಂದು ಮಮತಾ, ಸಿಂಗ್ ಅವರ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

kolkata mamata banerjee rajnath singh heated exchange after amit shah rally

ಮಂಗಳವಾರ ಅಮಿತ್ ಶಾ ಅವರ ಕಾರ್ಯಕ್ರಮ ಮುಗಿದ ಬಳಿಕ ಕೋಲ್ಕತಾದಿಂದ 150 ಕಿ.ಮೀ. ದೂರದಲ್ಲಿರುವ ಕಾಂತಿ ಎಂಬ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಬಸ್‌ಗಳ ಮೇಲೆ ಕಲ್ಲುತೂರಾಟ, ಮೋಟಾರ್ ಸೈಕಲ್‌ಗಳಿಗೆ ಬೆಂಕಿ ಹಚ್ಚುವುದು ಮುಂತಾದ ಘಟನೆಗಳು ನಡೆದಿದ್ದವು. ಅಲ್ಲದೆ, ತೃಣಮೂಲ ಕಾಂಗ್ರೆಸ್‌ನ ಕಚೇರಿಗಳ ಮೇಲೆ ದಾಳಿಗಳು ನಡೆದಿದ್ದವು. ಗಲಭೆ ಇನ್ನಷ್ಟು ಜೋರಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿನ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕಾಗಿತ್ತು.

ಸಂಜೆ ವೇಳೆ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿದ್ದ ರಾಜನಾಥ್ ಸಿಂಗ್ ಹಿಂಸಾಚಾರದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ಘಟನೆಗೆ ಕಾರಣವಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು 24 ಗಂಟೆಗಳಲ್ಲಿ ರಾಜ್ಯದಿಂದ ವಿವರವಾದ ವರದಿ ನೀಡುವಂತೆ ಕೇಳಿದ್ದರು.

ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ ಮೋದಿ ಸರಕಾರದ ಡೇಟ್ ಎಕ್ಸ್ ಪೈರ್ ಆಗಿದೆ : ಮಮತಾ ಬ್ಯಾನರ್ಜಿ ಘರ್ಜನೆ

ಈ ವೇಳೆ ಕೋಪಗೊಂದಿದ್ದ ಮಮತಾ, 'ನಿಮ್ಮ ನಾಯಕರು ಮತ್ತು ಬೆಂಬಲಿಗರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ' ಎಂಬುದಾಗಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಭಾಷಣದ ವೇಳೆ ಅಮಿತ್ ಶಾ, ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪೊಂಜಿ ಚಿಟ್ ಫಂಡ್ ಹಗರಣದಲ್ಲಿ ಯಾವುದೇ ಅನುಮಾನವಿಲ್ಲದೆ ಹೂಡಿಕೆ ಮಾಡಿದ ಹಣವನ್ನು ಕದ್ದ ಖದೀಮರಿಂದ ಪ್ರತಿ ರೂಪಾಯಿಯನ್ನೂ ಕಕ್ಕಿಸುವುದಾಗಿ ಭರವಸೆ ನೀಡಿದ್ದರು.

ತಮ್ಮ ಪೈಂಟಿಂಗ್‌ಗಳಿಗಾಗಿ ಕೋಟ್ಯಂತರ ರೂಪಾಯಿ ನೀಡಿರುವ ಮುಖ್ಯಮಂತ್ರಿ, ಚಿಟ್ ಫಂಡ್ ವಾಲಾಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದರು.

English summary
west bengal Chief Minister Mamata Banerjee exchanged heated words with Union Minister Rajnath Singh on violence at a town after BJP President Amit Shah's Rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X