• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲ್ಕತ್ತಾದಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ಕೊಳೆಗೇರಿ

|

ಕೋಲ್ಕತ್ತಾ, ನವೆಂಬರ್ 10: ಕೋಲ್ಕತ್ತಾದ ಟೋಪ್ಸಿಯಾ ಕೊಳೆಗೇರಿ ಪ್ರದೇಶದಲ್ಲಿ ಬೃಹತ್ ಮಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೊಳೆಗೇರಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಡೀ ಕೊಳೆಗೇರಿ ಧಗಧಗನೇ ಹೊತ್ತಿ ಉರಿದಿದೆ.

ಆರು ಅಗ್ನಿಶಾಮಕ ದಳದ ತಂಡ ಬೆಂಕಿ ನಂದಿಸಲು ಸ್ಥಳಕ್ಕೆ ಆಗಮಿಸಿದ್ದು, ಗುಡಿಸಲಿನಿಂದ ಗುಡಿಸಲಿಗೆ ಆವರಿಸುತ್ತಿರುವ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಕಾರ್ಯನಿರತವಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು, ಎಷ್ಟು ಗುಡಿಸಲುಗಳಿಗೆ ಬೆಂಕಿ ಬಿದ್ದಿದೆ, ಪ್ರಾಣ ಹಾನಿ, ಆಸ್ತಿಹಾನಿ ಕುರಿತು ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಸದ್ಯಕ್ಕೆ ಕೊಳೆಗೇರಿಯಲ್ಲಿನ 60 ಗುಡಿಸಲುಗಳು ಭಸ್ಮವಾಗಿದ್ದು, ಅಲ್ಲಿನವರನ್ನು ಸ್ಥಳಾಂತರ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಕೊಲ್ಕತ್ತದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ಇಬ್ಬರು ಸಾವು

ಕಳೆದ ವಾರವೂ ಇದೇ ರೀತಿ ಅಗ್ನಿ ಅವಘಡ ಸಂಭವಿಸಿತ್ತು. ನವೆಂಬರ್ 7ರಂದು ಕೋಲ್ಕತ್ತಾದ ಚಗಲಪಟ್ಟಿ ಕೊಳೆಗೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಐವತ್ತಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದರು. ಈಚೆಗೆ ಕೋಲ್ಕತ್ತಾದ ಗೋಡೌನ್ ಒಂದರಲ್ಲೂ ಬೆಂಕಿ ಕಾಣಿಸಿಕೊಂಡು ಭಾರೀ ನಷ್ಟ ಸಂಭವಿಸಿತ್ತು.

English summary
A massive fire broke out in Topsia slum area at kolkatta. six fire tenders rush to- spot
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X