ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಖೇಲಾ ಹೋಬೆ" ಖ್ಯಾತಿಯ ಟಿಎಂಸಿ ಯುವ ಸದಸ್ಯನಿಗೆ ಸಿಕ್ಕಿತಾ ಟಿಕೆಟ್?

|
Google Oneindia Kannada News

ಕೋಲ್ಕತ್ತಾ, ಮಾರ್ಚ್ 5: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಹೊಸ ಅಲೆಯನ್ನೇ ಸೃಷ್ಟಿಸಿದ್ದ "ಖೇಲಾ ಹೋಬೆ" ಪಕ್ಷದ ಗೀತೆಯೇ ಆಗಿಹೋಗಿತ್ತು. ಬಂಗಾಳದಲ್ಲಿ ಯುವ ಮತದಾರರಿಗೆ ಮೆಚ್ಚುಗೆಯಾಗಿದ್ದ, ಎಲ್ಲೆಲ್ಲೂ ಕೇಳಿ ಬರುತ್ತಿದ್ದ ಈ ಹಾಡಿನ ಹಿಂದೆ ಇದ್ದದ್ದು 25 ವರ್ಷದ ಸಿವಿಲ್ ಇಂಜಿನಿಯರ್ ಹಾಗೂ ಟಿಎಂಸಿ ವಕ್ತಾರ ದೆಬಾಂಗ್‌ಶು ಭಟ್ಟಾಚಾರ್ಯ.

ಬಂಗಾಳದಲ್ಲಿ "ಆಟ ಶುರು" ಎಂಬರ್ಥದ, ಟಿಎಂಸಿ ಪರ ಹೊಸ ಟ್ರೆಂಡ್ ಸೃಷ್ಟಿಸಿದ್ದ ಈ ಹಾಡು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದಂತೆ, ದೆಬಾಂಗ್‌ಶು ಭಟ್ಟಾಚಾರ್ಯ ಕೂಡ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಹೌರಾಹ್‌ನಿಂದ ಟಿಕೆಟ್ ಖಾತ್ರಿ ಎಂದೂ ಹೇಳಲಾಗಿತ್ತು. ಆದರೆ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ.

ತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿತೃಣಮೂಲ ಕಾಂಗ್ರೆಸ್ ಪಟ್ಟಿ ಬಿಡುಗಡೆ; ನಂದಿಗ್ರಾಮದ ಕಣದಲ್ಲಿ ಮಮತಾ ಬ್ಯಾನರ್ಜಿ

ಶುಕ್ರವಾರ ಸಿಎಂ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಅರ್ಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು, ಅದರಲ್ಲಿ ದೆಬಾಂಗ್‌ಶು ಹೆಸರು ಪ್ರಸ್ತಾಪವಾಗಿಲ್ಲ.

Khela Hobe Fame Debangshu Bhattacharya Did not Get Ticket For West Bengal Election

ವೃತ್ತಿಯಿಂದ ವಿಡಿಯೋ ಕ್ರಿಯೇಟರ್ ಆಗಿದ್ದ ದೆಬಾಂಗ್‌ಶು ಮಮತಾ ಬ್ಯಾನರ್ಜಿ ಕಟ್ಟಾ ಅಭಿಮಾನಿ. ಹೀಗಾಗಿಯೇ ಟಿಎಂಸಿ ಪರ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಂಡು ಯುವ ಮತದಾರರನ್ನು ತಮ್ಮದೇ ಶೈಲಿಯಿಂದ ಪ್ರೇರೇಪಿಸುತ್ತಿದ್ದರು. ಅದರಲ್ಲಿ "ಖೇಲಾ ಹೋಬೆ" ಕೂಡ ಒಂದಾಗಿತ್ತು. ಬಿಜೆಪಿಯನ್ನು ಹೊರಗಿನವರು ಎಂದು ಹೇಳುತ್ತಲೇ ಟಿಎಂಸಿಯ ಹಲವು ಯೋಜನೆಗಳನ್ನು ಪ್ರಚುರಪಡಿಸುವ ಹಾಡು ಇದಾಗಿದ್ದು, ಮಮತಾ ಬ್ಯಾನರ್ಜಿ ಕೂಡ ತಮ್ಮ ವಿರೋಧಿಗಳನ್ನು ಉಲ್ಲೇಖಿಸಿ ಖೇಲಾ ಹೋಬೆ ಎಂದೇ ಸವಾಲಿನ ರೀತಿ ಬಳಸುತ್ತಿದ್ದರು.

ಆದರೆ ಈ ಘೋಷಣೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಗಲಭೆಗೆ ಪ್ರಚೋದನೆ ನೀಡುತ್ತದೆ ಎಂದು ಆರೋಪಿಸಿತ್ತು.

ಇದೇ ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭೆ ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ಆರಂಭಗೊಳ್ಳಲಿದೆ.

English summary
Khela hobe fame and Young TMC sensation Debangshu Bhattacharya Did not Get Ticket For West Bengal Election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X