ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈ ಶ್ರೀರಾಮ್ ಎನ್ನುವುದು ಬಂಗಾಳಿ ಸಂಸ್ಕೃತಿಯಲ್ಲ ಎಂದ ಅಮಾರ್ಥ್ಯ ಸೇನ್

|
Google Oneindia Kannada News

ಕೊಲ್ಕತ್ತ, ಜುಲೈ 6: ಜೈ ಶ್ರೀರಾಮ್ ಘೋಷಣೆಯು ಬಂಗಾಳ ಸಂಸ್ಕೃತಿಯಲ್ಲ ಹೊರಗಿನವರು ಬಂದು ಬಂಗಾಳ ಸಂಸ್ಕೃತಿಯಲ್ಲಿ ಬೇರೆ ವಿಚಾರವನ್ನು ತೂರಿಸುತ್ತಿದ್ದಾರೆ ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮಾರ್ಥ್ಯ ಸೇನೆ ಆರೋಪಿಸಿದ್ದಾರೆ.

ಬಂಗಾಳದ ನಾಲ್ಕು ವರ್ಷದ ಮಗುವನ್ನು ಪ್ರಶ್ನಿಸಿದರೂ ಮಾ ದುರ್ಗಾ ತನ್ನ ಅಚ್ಚುಮೆಚ್ಚಿನ ದೇವರು ಎಂದು ಹೇಳುತ್ತದೆ. ನಾನು ಈ ಹಿಂದೆ ಜೈ ಶ್ರೀರಾಮ್ ಎಂದಿರುವುದನ್ನು ಕೇಳಿಯೇ ಇಲ್ಲ.

ಆದರೆ ಈಗ ಜನರನ್ನು ಹೊಡೆಯಲು ಜೈ ಶ್ರೀರಾಮ್ ಬಳಸಲಾಗುತ್ತಿದೆ. ಇದು ಬಂಗಾಳಿ ಸಂಸ್ಕೃತಿಗೆ ಸಂಬಂಧಿಸಿರುವ ಶಬ್ದವೇ ಅಲ್ಲ. ಆದರೆ ಇತ್ತೀಚೆಗೆ ಕೊಲ್ಕತ್ತಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಮನವಮಿ ಆಚರಿಸಲಾಗುತ್ತಿದೆ.

Jai shriram sloganary is not a Bengali culture

ಈ ಹಿಂದೆ ನಾನಿಂಥಾ ರಾಮನವಮಿ ಆಚರಣೆಗಳನ್ನು ನೋಡಿರಲಿಲ್ಲ ಎಂದು ಅಮಾರ್ಥ್ಯ ಸೇನೆ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣಾ ಅವಧಿಯಲ್ಲಿ ಕೊಲ್ಕತ್ತಾದಲ್ಲಿ ಜೈ ಶ್ರೀರಾಮ್ ಘೋಷಣೆ ರಾಜಕೀಯ ವಿಚಾರವಾಗಿತ್ತು.

ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿರುವುದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೆಂಗಣ್ಣಿಗೂ ಗುರಿಯಾಗಿತ್ತು. ಈಗ ಮಮತಾ ಬ್ಯಾನರ್ಜಿ ಆರೋಪಗಳಿಗೆ ಅಮಾರ್ಥ್ಯ ಸೇನ್ ಕೂಡ ಧ್ವನಿಗೂಡಿಸಿದ್ದಾರೆ.

English summary
Nobel laureate Amartyasen opines that Jai shriram sloganary is not Bengali culture. Maa Durga is the part of the Bengali culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X