ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ಪ್ರತಿಭಟನೆಗಳಿಗೆ ಅವಕಾಶ ನೀಡಬಾರದು: ಮುಸ್ಲಿಂ ಇಮಾಮ್ಸ್ ಸಂಘ

|
Google Oneindia Kannada News

ಕೋಲ್ಕತಾ, ಜೂ.13: ''ಪ್ರವಾದಿ ಮೊಹಮ್ಮದ್‌ರನ್ನು ಅವಮಾನಿಸಿದ ಬಿಜೆಪಿ ನಾಯಕರ ವಿರುದ್ಧ ಕೋಲ್ಕತಾದಲ್ಲಿ ಯಾವುದೇ ಪ್ರತಿಭಟನೆಗಳಿಗೆ ಅವಕಾಶ ನೀಡಬಾರದು. ಹಿಂಸಾತ್ಮಕ ಕೃತ್ಯಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ,'' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಲ್ಲಿ ಬಂಗಾಳದ ಮುಸ್ಲಿಂ ಧರ್ಮಗುರುಗಳ ಸಂಘ ಭಾನುವಾರ ತಡರಾತ್ರಿ ಆಗ್ರಹಿಸಿದೆ.

ಆಂದೋಲನ, ಪ್ರತಿಭಟನೆ ಹೆಸರಿನಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗದಂತೆ, ಆ ಮೂಲಕ ಪಟ್ಟಭದ್ರ ಹಿತಾಸಕ್ತಿಗಳ ಕೈ ಗೊಂಬೆಯಾಗದಂತೆ ಬಂಗಾಳದ ಮುಸ್ಲಿಂ ಇಮಾಮ್ಸ್ ಸಂಘ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಮನವಿ ಮಾಡಿಕೊಂಡಿದೆ.

ಈ ಕುರಿತು ಮನವಿ ಮಾಡಿರುವ ಇಮಾಮ್ಸ್ ಸಂಘದ ಅಧ್ಯಕ್ಷ ಎಂ.ಡಿ.ಯಾಹಿಯಾ ಅವರ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ, ಪ್ರತಿಭಟನೆ, ಕಲ್ಲು ತೂರಾಟ, ಪೊಲೀಸರ ಮೇಲಿನ ದಾಳಿಯಿಂದ ಆಸ್ತಿಪಾಸ್ತಿಗಳು ಹಾನಿಯಾಗಿ ನಷ್ಟ ಉಂಟಾಗುತ್ತದೆ. ಹಿರಿಯರು, ಮಹಿಳೆಯರು ಮಕ್ಕಳು ಸೇರಿದಂತೆ ಸಾರ್ವಜನಿಕರರು ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೇ ಆರ್ಥಿಕ ಪರಿಸ್ಥಿತಿಯು ಸಹ ಹದಗೆಡುತ್ತದೆ ಎಂದು ಹೇಳಿದ್ದಾರೆ.

 Islam imams association urge Mamata to curb Protest Rally

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಸೇರಿದಂತೆ ಬಿಜೆಪಿ ಇಬ್ಬರು ನಾಯಕರು ಪ್ರವಾದಿಗಳ ವಿರುದ್ಧ ಹೇಳಿಕೆ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದರ ವಿರುದ್ಧ ಈಗಾಗಲೇ ಹೌರಾ, ಮರ್ಸಿದಾಬಾದ್ ಮತ್ತು ನಾಡಿಯಾ ಜಿಲ್ಲೆಗಳ ಹಲವಡೆ ಹಿಂಸಾತ್ಮಕ ಪ್ರತಿಭಟನೆಗಳು ಜರುಗಿವೆ. ಇಂತಹ ಕೃತ್ಯಗಳಿಂದ ಜನರನ್ನು ಹಿಡಿದಿಟ್ಟು ಕೊಳ್ಳತ್ತೇವೆ ಎಂದುಕೊಂಡರೆ ಅದು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಪೊಲೀಸರ ಮೇಲೆ ಕಲ್ಲೂ ತೂರುವುದು, ಲಾಠಿ ಚಾರ್ಜನಿಂದ ಖ್ಯಾತಿ ಹೆಚ್ಚಿಸಿಕೊಳ್ಳಲು ಆಗದು. ಪ್ರವಾದಿ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟಿಸಬೇಕು. ಪ್ರತಿಭಟನೆಗೆ ಎಲ್ಲರಿಗೂ ಸ್ವಾತಂತ್ರ್ಯವಿದೆ ಎಂದು ಅವರು ಪುನರುಚ್ಚರಿಸಿದರು.

ಬಿಜೆಪಿ ವಿರುದ್ಧ ಮಮತಾ ಗುಡುಗು

Recommended Video

Justin Bieber ಗೆ ಬಂದಿರೋ ಕಾಯಿಲೆಯನ್ನು ಭಾರತಕ್ಕೆ ಹೋಲಿಸಿದ ಕಾಮಿಡಿಯನ್ ಮುನಾವರ್ ಫಾರೂಕಿ | Oneindia Kannada

ಪ್ರವಾದಿ ವಿರುದ್ಧ ಹೇಳಿಕೆ ನೀಡಿರುವ ಇಬ್ಬರು ನಾಯಕರು ಬಿಜೆಪಿಯವರು. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳಿಗೆ ಬಿಜೆಪಿ ಕಾರಣ. ಇದು ಬಿಜೆಪಿಯ ಪಾಪ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬಿಜೆಪಿ ಮಾಡಿದ ತಪ್ಪಿಗೆ ರಸ್ತೆ, ರೈಲು ಮಾರ್ಗ ತಡೆದು ಪ್ರತಿಭಟನಾಕಾರರು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಮಾಡಿರುವ ಪಾಪದಿಂದ ಜನರು ಏಕೆ ಕಷ್ಟ ಅನುಭವಿಸಬೇಕು ಎಂದು ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದರು.

English summary
Prophet row: The West Bengal Imams Association asked CM Mamata Banerjeeji not to allow any rally, protest which provokes violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X