ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸಂಸದೆ ನುಸ್ರತ್ ರನ್ನು ಆಹ್ವಾನಿಸಿದ ಇಸ್ಕಾನ್

|
Google Oneindia Kannada News

ಕೋಲ್ಕತಾ, ಜುಲೈ 02: ತೃಣಮೂಲ ಕಾಂಗ್ರೆಸ್ಸಿನ ಸಂಸದೆ ನುಸ್ರತ್ ಜಹಾನ್ ಅವರು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿ, ಫತ್ವಾ ಹೊರಡಿಸಿದ ಸುದ್ದಿ ಓದಿರಬಹುದು. ಧರ್ಮ ಕಟ್ಟಳೆ ಮೀರಿ ನಾನು ಎಲ್ಲರನ್ನು ಒಳಗೊಂಡ ಭಾರತೀಯ ಪ್ರಜೆ ಎಂದಿದ್ದ ನುಸ್ರತ್ ಗೆ ಈಗ ರಥಯಾತ್ರೆಗೆ ಅಹ್ವಾನ ಬಂದಿದೆ.

ನುಸ್ರತ್, ಸಿಂಧೂರ ಮತ್ತು ಬಳೆ ಧರಿಸಿ ಸಂಸತ್ ಅಧಿವೇಶನದಲ್ಲಿ ಕಾಣಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದರು. "ಜಾತಿ, ವರ್ಣ, ಧರ್ಮದ ತಡೆಗಳನ್ನು ಮೀರಿ ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತೇನೆ", 'ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ; ಆದರೆ ಮುಸ್ಲಿಂ ಆಗಿಯೇ ಉಳಿಯುತ್ತೇನೆ' ಎಂದಿದ್ದರು.

ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ

ಈಗ ಗುರುವಾರದಂದು ನಡೆಯಲಿರುವ ಇಸ್ಕಾನ್ ಆಯೋಜನೆಯ ರಥಯಾತ್ರೆಗೆ ವಿಶೇಷ ಅತಿಥಿಯಾಗಿ ಸಂಸದೆ ನುಸ್ರತ್ ಅವರನ್ನು ಆಹ್ವಾನಿಸಲಾಗಿದೆ ಎಂದು ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್ ಹೇಳಿದ್ದಾರೆ.

ISKCON’s Rathayatra invitation for TMC MP Nusrat Jahan

ಜಗನ್ನಾಥ ದೇವರು, ಬಲರಾಮ ಹಾಗೂ ಸುಭದ್ರಾ ಮೂರ್ತಿಗಳ ಮೆರವಣಿಗೆ ರಥಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು ಎಲ್ಲಾ ಧರ್ಮದವರು ಮುಕ್ತವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

1971ರಲ್ಲಿ ಸ್ಥಾಪನೆಗೊಂಡ ಇಸ್ಕಾನ್ ಸಂಸ್ಥೆ ಆಯೋಜನೆಯ 48ನೇ ವರ್ಷದ ರಥಯಾತ್ರೆ ಇದಾಗಿದೆ. ಈ ರಥಯಾತ್ರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲನೆ ನೀಡಲಿದ್ದಾರೆ.

ನುಸ್ರತ್ ಅವರು ನವಭಾರತದ ಪ್ರತಿನಿಧಿಯಾಗಿದ್ದಾರೆ. ಎಲ್ಲಾ ಧರ್ಮ, ಪಂಥಗಳ ಆಚರಣೆಯಲ್ಲಿ ತೊಡಗಿಕೊಳ್ಳಬಲ್ಲವರಾಗಿದ್ದಾರೆ. ಇಂಥವರಿಂದ ಭಾರತದ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಪಿಟಿಐಗೆ ದಾಸ್ ಹೇಳಿದ್ದಾರೆ.

English summary
Newly-elected TMC MP and actor Nusrat Jahan whose stand on religion and inclusiveness is "in sync" with the ISKCON's spirit of "social harmony", has been invited as a special guest at the inauguration ceremony of the Kolkata ISKCON Rathayatra on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X